ಚಿಕ್ಕಮಗಳೂರು: ಪಕ್ಷದ ವಿಚಾರಧಾರೆಗಳ ಆಧಾರದಲ್ಲಿ ಜನರ ವಿಶ್ವಾಸ ಗಳಿಸುವ ಮೂಲಕ ಪಂಚಾಯಿತಿಯ ಬೂತ್ ಮಟ್ಟದಲ್ಲಿ ಪಕ್ಷವನ್ನು ಶಕ್ತಿಶಾಲಿಯಾಗಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು .
ಮಂಗಳವಾರ ಜಿಲ್ಲಾ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಲಕ್ಯಾ ಮಹಾಶಕ್ತಿ ಕೇಂದ್ರ ಬೂತ್ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ಹಿನ್ನಡೆ ಸಾಧಿಸಿರುವ ಪಂಚಾಯಿತಿಗಳಿಗೆ ವಿಶೇಷ ಆದ್ಯತೆ ನೀಡಿ ಜನರ ವಿಶ್ವಾಸ ಗಳಿಸುವ ಮೂಲಕ ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕಿದೆ. ಈ ಮೂಲಕ ಪಕ್ಷವನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಲು ಆಲೋಚಿಸಬೇಕಿದೆ ಎಂದರು.
ರಾಜಕೀಯದಲ್ಲಿ ಗುರುತಿಸಿಕೊಳ್ಳದ ಗ್ರಾಮಗಳಲ್ಲಿ ಪ್ರಭಾವಿ ಮುಖಂಡರು, ನಾಯಕರುಗಳು ಇದ್ದಲ್ಲಿ ಅಂತವರನ್ನು ಪಕ್ಷಕ್ಕೆ ಕರೆತರುವ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಬೇಕು ಲಕ್ಯಾ ಪಂಚಾಯಿತಿ ಬಿಜೆಪಿ ಮಂಡಲ 2008 ರಿಂದ ವಿವಿಧ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಂಡು ಬಂದಿದೆ ಮುಂದಿನ ದಿನಗಳಲ್ಲಿ ಪಕ್ಷದ ವಿಚಾರಧಾರೆಗಳನ್ನು ಜನರ ಮುಂದಿಟ್ಟು ವಿಶ್ವಾಸ ಗಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯು ಹಿಂದುತ್ವ, ದೇಶ ಮೊದಲು ಎನ್ನುವ ವಿಚಾರಧಾರೆ ತತ್ವ ಸಿದ್ದಾಂತದ ಮೇಲೆ ರೂಪಿತವಾಗಿರುವ ಪಕ್ಷ. ಪಕ್ಷನಿಷ್ಟೆ, ಪ್ರಾಮಾಣಿಕತೆಗೆ ಉನ್ನತ ಸ್ಥಾನಮಾನಗಳನ್ನು ಪಕ್ಷ ಒದಗಿಸಲಿದೆ. ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಬೂತ್ ಕಾರ್ಯಕರ್ತರು ಮುಂದಾಗಬೇಕು, ಉತ್ತಮ ಸಂಘಟನೆ , ಜನರ ವಿಶ್ವಾಸವಿದ್ದಾಗ ಅನಗತ್ಯವಾಗಿ ಯಾವುದೇ ವಿಚಾರಕ್ಕೂ ಹೆದರುವ ಅವಶ್ಯಕತೆ ಇರುವುದಿಲ್ಲ, ಈ ನಿಟ್ಟಿನಲಿ ಚಟುವಟಿಕೆಗಳ ಮೂಲಕ ್ಲ ಪಕ್ಷ ಸಂಘಟನೆಗೆ ಮುಂದಾಗುವಂತೆ ತಿಳಿಸಿದರು.
ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಅಯೋದ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ನಾಯಕ ಕಲ್ಯಾಣ್ ಸಿಂಗ್ ನಿಧನ ಪಕ್ಷಕ್ಕೆ ದೊಡ್ಡ ಹೊಡೆತ. ದಲಿತ ಸಮುದಾಯದಿಂದ ಬಂದು ಬಿಜೆಪಿಯ ಅಗ್ರನಾಯಕರಾಗಿ ಗುರುತಿಸಿಕೊಂಡವರು ಅವರು ಎಂದು ಸ್ಮರಿಸಿದರು.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಗಳಾಗಿ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಮೂಲಕ ಕ್ರಾಂತಿಕಾರಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡವರು, ಪಕ್ಷ ಸಂಘಟನೆ, ರಾಮಂದಿರ ನಿರ್ಮಾಣದಲ್ಲಿ ಅವರ ಹೆಸರು ಸದಾ ಸ್ಮರಣೆಯಲ್ಲಿರಬೇಕು ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಮಾತನಾಡಿ ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆ, ಸಂಘಟನೆ ಕುರಿತು ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ, ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಕಾರ್ಯಕರ್ತರು ಚಟುವಟಿಕೆಯಲ್ಲಿ ತೊಡಗಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಸಮ್ಮಾನ್, ಆಯುಷ್ಮಾನ್ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು ಅವುಗಳು ತಳಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕು, ಕ್ಷೇತ್ರದ ಶಾಸಕರು ಅನುದಾನದ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಲಕ್ಯಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕ್ಷೇತ್ರದ ಶಾಸಕರು ನೀರಾವರಿ ಯೋಜನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಕರಗಡ ನೀರಾವರಿ, ದಾಸರಹಳ್ಳಿ, ಮಾದರಸನಕೆರೆ ಯೋಜನೆ ಕಾಮಗಾರಿ ಕೈಗೊಳ್ಳುವ ಮೂಲಕ ಈ ಭಾಗದ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಬಲಗೊಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಗ್ರಾಮಾಂತರ ಪ್ರಭಾರಿ ಎಂ.ಎಸ್. ಮುಖಂಡ ನಿರಂಜನ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪಕ್ಷ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಬೇಕು, ಬೂತ್ ಮಟ್ಟದಲ್ಲಿ ಸರ್ಕಾರದ ಯೋಜನೆಗಳು ಅನುಷ್ಠಾನ, ರೈತರಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಮುಖಂಡರಾದ ಸೀತಾರಾಮಭರಣ್ಯ, ರವೀಂದ್ರ ಬೆಳವಾಡಿ, ಚಿಕ್ಕದೇವನೂರು ರವಿ, ರಮೇಶ್ ಪಿಳ್ಳೇನಹಳ್ಳಿ, ತೋಟದಹಳ್ಳೀ ಶಿವಕುಮಾರ್ ಇದ್ದರು ದೇವರಾಜ್ ವಂದಿಸಿದರು.
Discussion about this post