ಬೆಂಗಳೂರು: ಭೂ ಒತ್ತುವರಿ ಆರೋಪದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರವು ಬುಧವಾರ ಆದೇಶ ನೀಡಿದೆ. ಮಂಡ್ಯ-ಮೈಸೂರು ಜಿಲ್ಲೆಗಳ ಉಪ ಆಯುಕ್ತರು ನಡೆಸುವ ಭೂಮಿ ಒತ್ತುವರಿ ಕುರಿತಂತೆ ಜಿಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶ ಪ್ರಕಟವಾಗಿದೆ.
ಸರ್ವೆ, ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ( Survey Settlement and Land Records) ಆಯುಕ್ತ ಮುನೀಶ್ ಮೌದ್ಗಿಲ್ ಅವರ ಆದೇಶವನ್ನು ಸರ್ಕಾರವು ಹಿಂಪಡೆದಿದೆ ಎಂದು ಹೇಳಲಾಗಿದೆ. ಸಾರಾ ಚೌಲ್ಟ್ರಿ ಸೇರಿ ಕೇರ್ಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯ, ದಟ್ಟಗಳ್ಳಿಯ ಸರ್ವೇ ನಂಬರ್ ಜಮೀನುಗಳ ಮೇಲೆ ಅಕ್ರಮ ಆರೋಪವಿದ್ದು ಸರ್ಕಾರ ಸರ್ಕಾರ ತನಿಖೆಗೆ ಆದೇಶಿಸಿದೆ.
ಕಂದಾಯ ಇಲಾಖೆ ಹೊರಡಿಸಿರುವ ಹೊಸ ಆದೇಶದಲ್ಲಿ, ಮೈಸೂರು ಮತ್ತು ಮಂಡ್ಯ ಡಿಸಿಗಳಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶವನ್ನು ನೀಡಿದೆ. ಯಾವುದೇ ಕಾರಣಕ್ಕು ಅವರು ಕೆಲಸವನ್ನು ಬೇರೊಬ್ಬರಿಗೆ ನಿಯೋಜಿಸಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

























Discussion about this post