ಚಿಕ್ಕಮಗಳೂರು: ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬರುವ ಹಲವಾರು ರೈತರಿಗೆ ಭೂಕಬಳಿಕೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ ಘಟನೆ ನಡೆದಿದೆ. ಸಂಸೆ ಗ್ರಾಮದ ಕೆಂಗನಕೊಂಎದ ಹಲವರಿಗೆ ಈ ರೀತಿಯ ನೋಟಿಸ್ ತಲುಪಿದ್ದು, ಅ. ೩೦ರಂದು ಬೆಂಗಳೂರು ಕಚೇರಿಗೆ ಬಂದು ಉತ್ತರಿಸಲು ತಿಳಿಸಲಾಗಿದೆ.
ಹಲವಾರು ವರ್ಷಗಳ ಕೃಷಿ ಕಾರ್ಯಕ್ಕೆ ಉದ್ಯಾನ ಘೋಷಣೆ ಬಳಿಕೆ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಫಾರಂ ನಂಬರ್ ೫೦/೫೩ರಲ್ಲಿ ಕರ್ನಾಟಕದ ಅರ್ಜಿ ಸಲ್ಲಿಕೆ ನಡೆದಿದ್ದು, ಕೆಲವರು ಹಕ್ಕುಪತ್ರ ಪಡೆದಿರುತ್ತಾರೆ.
ಹಕ್ಕುಪತ್ರ ನೋಡಿಕೆ ಕಾನೂನು ಬಾಹಿರ ಎಂದು ಅರಣ್ಯ ಇಲಾಖೆ ಎಂದು ಆರೋಪಿಸಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಗೊಂದಲಗಳ ನಡುವೆ ಕೃಷಿಕರಿಗೆ ಸಮಸ್ಯೆ ಉಂಟಾಗುತ್ತಿದೆ, ಹೀಗಾಗಿ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

























Discussion about this post