ಮಂಗಳೂರು: ಬಂದರಿನಲ್ಲಿ ಅಕ್ರಮವಾಗಿ ಕೂಡಿಸಿಟ್ಟಿದ್ದ ೧೫೦೦ ಕೆ.ಜಿಗೂ ಅಧಿಕ ಸ್ಫೋಟಕ ಪತ್ತೆಯಾಗಿದೆ. ಈ ಕುರಿತು ಕೂಡಲೇ ಸಮಗ್ರವಾದ ತನಿಖೆಗೆ ಒತ್ತಾಯಿಸಲಾಗಿದೆ.
ಜನನಿಬಿಡ ಪ್ರದೇಶದಲ್ಲಿದ್ದ ಅಂಗಡಿಯಲ್ಲಿ ಭಾರಿ ಗಾತ್ರದ ಸ್ಫೋಟಕ ಸಿಕ್ಕಿದ್ದು ಆನಂದ್ ಗಟ್ಟಿ ಎಂಬಾತನನ್ನು ಪ್ರಕರಣಕ್ಕೆ ಸಂಬಂಧ ಅರೆಸ್ಟ್ ಮಾಡಲಾಗಿದ್ದು, ದುರಂತವನ್ನು ತಪ್ಪಿಸಲಾಗಿದೆ. ಈ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
ತಪ್ಪಿತಸ್ಥನು ಗನ್ ಮಾರಾಟದ ಪರವಾನಗಿ ಪಡೆದು ಅಕ್ರಮ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದ. ವಶಕ್ಕೆ ಪಡೆದ ಸ್ಫೋಟಕ ವಸ್ತು ಗನ್ ತಯಾರಿಕೆಯದ್ದಲ್ಲ ಎಂದು ಪೋಲೀಸ್ ಮೂಲಗಳು ಸ್ಪಷ್ಟ ಪಡಿಸಿದೆ.
ಅನುಮಾನಾಸ್ಪದವಾದ ಈ ಪ್ರಕರಣದಲ್ಲಿ ಹೆಚ್ಚುವರಿ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ ಎಂದು ಪಾಪ್ಯುಲರ್ ಫ್ರಂಟ್ ಸಮಿತಿ ಹೇಳಿದೆ.
ಜಿಲ್ಲೆಯಲ್ಲಿ ಅಕ್ರಮ ಸ್ಪೋಟಕ ಪತ್ತೆಯಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ಹಿಂದಿನ ಪಿತೂರಿಯು ಜನರ ಎದುರು ನಿಷ್ಪಕ್ಷಪಾತ ತನಿಖೆಯಿಂದ ಬರಬೇಕಿದೆ ಎಂದು ಪಾಪ್ಯುಲರ್ ಫ್ರಂಟ್ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.

























Discussion about this post