ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಪ್ರತಿಷ್ಠಿತ ಮಂತ್ರಿಮಾಲ್ ಗೆ ಬಿಬಿಎಂಪಿ ಬೀಗ ಜಡಿದಿರುವ ಘಟನೆ ನಡೆದಿದೆ. ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ನ ಮುಖ್ಯದ್ವಾರಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಅವರಿಂದ ಬೀಗ ಹಾಕಲಾಗಿದೆ.
27 ಕೋಟಿ ರೂ. ಆಸ್ತಿ ತೆರಿಗೆಯನ್ನು ಇನ್ನೂ ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿದೆ. 2017ರಿಂದಲೂ ಆಸ್ತಿ ತೆರಿಗೆ ಕಟ್ಟಿಲ್ಲ ಎನ್ನಲಾಗಿದೆ. ಮಂತ್ರಿ ಮಾಲ್ ಬಿಬಿಎಂಪಿಯ ಆಸ್ತಿ ತೆರಿಗೆ ಬಾಕಿಯಾಗಿ ರೂ.27,22,06,302ರಷ್ಟು ಉಳಿಸಿಕೊಂಡಿದೆ.
ಈ ಹಿಂದೆ ಮಂತ್ರಿಮಾಲ್ ಗೆ ನೋಟಿಸ್ ನೀಡಿ ಬಾಕಿ ಆಸ್ತಿ ತೆರಿಗೆ ಪಾವತಿಸುವಂತೆ ಸೂಚಿಸಿದ್ದರೂ ಕಟ್ಟಿರಲಿಲ್ಲ. ಹೀಗಾಗಿಯೇ ಇಂದು ಮಂತ್ರಿಮಾಲ್ ಗೆ ಬೀಗ ಬಿದ್ದಿದೆ. ಸ್ಥಳದಲ್ಲೇ ಠಿಕಾಣಿ ಹೂಡಿರುವ ಬಿಬಿಎಂಪಿ ಮಾರ್ಷಲ್ ಗಳು ಮಾಲ್ಗೆ ಬರ್ತಾ ಇರೋ ಜನರನ್ನು ಸಹ ವಾಪಾಸ್ ಕಳಿಸ್ತಾ ಇದ್ದಾರೆ ಎಂದು ತಿಳಿದುಬಂದಿದೆ.

























Discussion about this post