ಮೈಸೂರು: ಫ್ರಥಮ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ಸುನಂದ ಪಾಲನೇತ್ರ ಆಯ್ಕೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾಗಿದ್ದು, ಇಂದು ನಡೆದ ಚುನಾವಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್ ಪಟ್ಟ ಬಿಜೆಪಿ ಪಾಲಾಗಿದೆ.
ಬಿಜೆಪಿ ಅಭ್ಯರ್ಥಿಗೆ ೨೬ ಮತಗಳು, ಕಾಂಗ್ರೆಸ್ ಅಭ್ಯರ್ಥಿಗೆ ೨೨ ಮತಗಳು ಸಿಕ್ಕಿದ್ದವು. ಕಾಂಗ್ರೆಸ್ ತಮ್ಮ ಮತಗಳನ್ನು ತಮ್ಮವರಿಗೆ ಚಲಾಯಿಸಿಕೊಂಡರು. ನೂತನ ಮೇಯರ್ ಆಯ್ಕೆ ಪ್ರಕ್ರಿಯೆ ಅಂತಿಮವಾಗುತ್ತಿದ್ದ ಹಿನ್ನೇಲೆಯಲ್ಲಿ ಸುನಂದಾ ಅವರಿಗೆ ಗೌನ್ ಜೊತೆಗೆ ಹೂಗುಚ್ಛ ನೀಡಿ ಚುನಾವಣಾಧಿಕಾರಿ ಅಭಿನಂದಿಸಿದರು.
ಸ್ಥಳಕ್ಕೆ ಮಹಾನಗರ ಪಾಲಿಕೆಗೆ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಆಗಮಿಸಿ, ಬಿಜೆಪಿ ಸದಸ್ಯರು, ಕಾರ್ಯಕರ್ತರೊಡನೆ ಸಂಭ್ರಮ ಆಚರಿಸಿದ್ದಾರೆ.

























Discussion about this post