ದಾವಣಗೆರೆ: ಯಾವುದೇ ಕಾರಣಕ್ಕೂ ವಿರೋಧ ಪಕ್ಷಗಳನ್ನು ಹಗುರವಾಗಿ ಪರಿಗಣಿಸಬಾರದು, ಚುನಾವಣೆ ಸಮೀಪ ಇರುವುದರಿಂದ ಅದಕ್ಕಾಗಿ ಭ್ರಮೆಯಲ್ಲಿರುವುದನ್ನು ಬಿಟ್ಟು ಪಕ್ಷ ಬಲಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದವರಿಗೆ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡುತ್ತಾ ಅವರು ಬಿಜೆಪಿ ಸಚಿವರನ್ನು ಕಾಂಗ್ರೆಸ್ ಪಕ್ಷ ಸಂಪರ್ಕಿಸಿದ್ದ ವದಂತಿಗಳು ಇದ್ದು, ಇದಕ್ಕೆ ಆಸ್ಪದ ನೀಡಬಾರದೆಂದು ತಿಳಿಸಿದರು. ಗೆಲ್ಲುವೆವು ಎಂಬ ಭ್ರಮೆ ಬೇಡ ಎಂದು ಸಹ ಎಚ್ಚರಿಕೆ ನೀಡಿದರು.
ಲೋಕಸಭಾ ಚುನಾವಣೆ ಪ್ರಧಾನಿ ಮೋದಿಯವರ ಅಲೆಯಲ್ಲಿ ಗೆಲ್ಲಬಹುದು, ಆದ್ರೆ ವಿಧಾನಸಭೆ ಚುನಾವಣೆ ಸವಾಲೇ ಆಗಿದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು, ಹೀಗಾಗಿ ಮುಂದಿನ ತಿಂಗಳಿನಿಂದ ನಿರಂತರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇದೇ ವೇಳೆ ಕಾರ್ಯಕರ್ತರಿಗೆ ಆತ್ಮವಿಶ್ವಾಸದಿಂದ ಇರಲು ಸಲಹೆ ನೀಡಿದರು. ೧೪೦ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯಲಿದೆ. ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದೇವೆ, ಪರಿಶಿಷ್ಟ ಜಾತಿ, ಪ. ಪಂಗಡ, ಯುವಮೋರ್ಚಾ, ಮಹಿಳಾ ಸಂಘಟನೆಗಳನ್ನು ರೂಪಿಸಿ ಪಕ್ಷದ ಗೆಲುವಿಗೆ ಸಹಕರಿಸಲು ಕೋರಿದರು.
ಬಿಎಸ್ ವೈ ತಮ್ಮ ಪ್ರವಾಸದ ಬಗ್ಗೆ ಚರ್ಚೆ ನಡೆಸುತ್ತಾ, ತಾನೊಬ್ಬನೇ ಪ್ರವಾಸದಲ್ಲಿಲ್ಲ, ಸ್ಥಳೀಯ ಸಂಸದರು, ಶಾಸಕರು ಎಲ್ಲರೂ ಬರುವರು, ಹೀಗೆ ಪಕ್ಷ ಸಂಘಟಿಸಿ ಕಾಂಗ್ರೆಸ್ ಗೆ ಪಾಟ ಕಲಿಸುವುದಾಗಿ ಹೇಳಿದರು.

























Discussion about this post