ಬೆಂಗಳೂರು: ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು ಶೇ.೨ ಕ್ಕಿಂತ ಕಮ್ಮಿ ಪಾಸಿಟಿವಿಟಿ ದರ ಇರೋ ಜಿಲ್ಲೆಗಳ ೯, ೧೦, ಪಿಯು ತರಗತಿ ಪ್ರಾರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆಗಸ್ಟ್ ೧೪ರಂದು ತಜ್ಞರ ಸಭೆ ಕರೆದಿದ್ದು, ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪಾಸಿಟಿವಿಟಿ ದರ, ಗಡಿ ಭಾಗಗಳ ಪರಿಸ್ಥಿತಿ ಅವಲೋಕನ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಶಾಲೆಗಳಲ್ಲಿ ಶೇ.೨ಗಿಂತ ಹೆಚ್ಚು ಪ್ರಕರಣ ದಾಖಲಾದರೆ, ಒಂದು ವಾರ ಮತ್ತೆ ಶಾಲೆ ಸ್ಥಗಿತಗೊಳಿಸಲಾಗುವುದು. ನಂತರ ಸ್ಯಾನಿಟೈಜ್ ಮಾಡಿ ಶಾಲೆ ಮರಳಿ ತೆರೆಯಲಾಗುವುದು ಎಂದಿದ್ದಾರೆ.
ವ್ಯವಸ್ಥಿತವಾಗಿ ಕೋವಿಡ್ ನಿರ್ವಹಣೆಗೆ ಜಿಲ್ಲಾವಾರು ಯೋಜನೆ ರೂಪಿಸಲು ಇದೇ ಸಮಯದಲ್ಲಿ ಸೂಚನೆ ನೀಡಲಾಯಿತು. ಆಯಾ ಜಿಲ್ಲೆಗಳ ಸ್ಥಿತಿಗತಿಗಳಿಗೆ, ಅಗತ್ಯಗಳೆಗೆ ತಕ್ಕಂತೆ ಯೋಜನೆ ರೂಪಿಸಲಾಗುವುದು.ಚಿಕ್ಕಮಗಳೂರು, ಉಡುಪಿ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಸಿಕೆ ಪ್ರಾಣ ಹೆಚ್ಚಿಸಲು, ಪರೀಕ್ಷಾ ಪ್ರಮಾಣ ಹೆಚ್ಚಿಸಲು ತೀರ್ಮಾನ ನಡೆಸಲಾಯಿತು.
ಕೇರಳ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಹತ್ತು ಕಿಮೀ ವ್ಯಾಪ್ತಿಯಲ್ಲಿರುವ ರಾಜ್ಯದ ಹಳ್ಳಿಗಳಲ್ಲಿ ಲಸಿಕೆ ನೀಡಿಕೆ ತೀವ್ರಗತಿಯಲ್ಲಿ ಹೆಚ್ಚಿಸಲು ಜೊತೆಗೆ ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಯಿತು. ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಯಚೂರು, ಬೀದರ್, ಬಳ್ಳಾರಿ, ಕಲ್ಬುರ್ಗಿ, ಕೊಪ್ಪಳ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣ ಹೆಚ್ಚಿಸಲು ನಿರ್ಧರಿಸಲಾಗಿದೆ.
ಮುಂದಿನ ಎರಡೇ ವಾರಗಳಲ್ಲಿ ರಾಜ್ಯದ ಬೆ, ಮೈಸೂರು, ಶಿವಮೊಗ್ಗ, ಕಲ್ಬುರ್ಗಿ, ಬೆಳಗಾವಿ, ಹುಬ್ಬಳ್ಳಿ ಗಳಲ್ಲಿ ಆರು ಜಿನೋಮ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲು ಸೂಚನೆ ಹೊರಡಿಸಿದೆ ಡೆಲ್ಟಾ ವೇರಿಯೆಂಟ್ ವೈರಸ್ ಅಧ್ಯಯನ ಹಾಗೂ ಇತರೆ ವೇರಿಯೆಂಟ್ ಪತ್ತೆಗೆ ಇದರಿಂದ ಹೆಚ್ಚು ಅನುಕೂಲವಿದೆ.
ಡೆಲ್ಟಾ ವೇರಿಯೆಂಟ್ ವೈರಸ್ ಅಧ್ಯಯನ, ಇತರೆ ವೇರಿಯೆಂಟ್ ಪತ್ತೆಹಚ್ಚುವಿಕೆ ಇದರಿಂದ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಒಟ್ಡು ನಾಲ್ಕು ಕೋಟಿ ಲಸಿಕೆ ಹಾಕಲಾಗಿದೆ. ೧೪. ೮೯ ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಹಂಚಿಕೆಯಾಗುವ ಡೋಸ್ ಗಳನ್ನು ೬೫ ಲಕ್ಷದಿಂದ ಒಂದು ಕೋಟಿಗೆ ಹೆಚ್ಚಿಸುವಂತೆ ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಸದ್ಯದಲ್ಲೇ ಮನವಿ ಸಲ್ಲಿಸಲಾಗುತ್ತದೆ ಎಂದವರು ಹೇಳಿದ್ದಾರೆ.
ರಾಜದಾನಿಯ ಕೋವಿಡ್ ನಿರ್ವಹಣೆ ಕುರಿತಂತೆ ಮಕ್ಕಳ ಐಸಿಯು ಬೆಡ್ ಮೀಸಲು ಇಡಲು ಸೂಚನೆ ನೇಡಲಾಗಿದೆ. ಸದ್ಯದ ಪಾಸಿಟಿವಿಟಿ ದರ ಶೇ. ೦.೭೫ ಇದ್ದು, ಪಾಸಿಟಿವ್ ದರ ಶೇ. ೨ರಷ್ಡು ಹಾಗೂ ಅಕಸಿಜನೇಟೆಡ್ ಬೆಡ್ ಗೆ ಸೋಂಕಿತರು ದಾಖಲಾದ ಪಕ್ಷದಲ್ಲಿ ಮುಂದಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಡಂಪಿ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಯಿತು

























Discussion about this post