- ಪ್ರಮುಖ ಬೆಳೆ ಜೊತೆಗೆ ಪರ್ಯಯ ಬೆಳೆ ಅಗತ್ಯ
- ರೈತರು ಆತ್ಮಹತ್ಯೆ ಆಲೋಚನೆ ಕೈ ಬಿಡಬೇಕು
- ಕೇಂದ್ರದ ರೈತಪರ ಯೋಜನೆಯ ಲಾಭ ಪಡೆಯಬೇಕು
- ದೆಹಲಿ ಮುಷ್ಕರ ನಿರತ ರೈತರೊಂದಿಗೆ ೧೧ ಸುತ್ತು ಮಾತುಕತೆ ನಡೆದಿದೆ
ಕಲಬುರಗಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯುವ ವಿಚಾರದ ಕುರಿತು ಚಿಂತಿಸಬೇಕು. ರೈತರಿಗೆ ಆದಾಯ ಬರಬೇಕೆಂದರೆ ಮಾರ್ಕೆಟ್ ಸಿಗಬೇಕು. ಪ್ರಮುಖ ಬೆಳೆ ಜೊತೆಗೆ ಪರ್ಯಾಯ ಕೃಷಿ ಇರಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆ ತಂದಿದೆ. ರೈತರು ಯೋಜನೆ ಲಾಭ ಪಡೆದುಕೊಳ್ಳಬೇಕು, ಅಲ್ಲದೆ ಆತ್ಮಹತ್ಯೆ ಆಲೋಚನೆ ಕೈ ಬಿಡಬೇಕು. ಪ್ರಮುಖ ಬೆಳೆ ಜೊತೆಗೆ ಪರ್ಯಾಯ ಕೃಷಿ ಇರಬೇಕು ಎಂದು ರೈತರನ್ನು ಕುರಿತು ಹೇಳಿದರು.
ದೆಹಲಿಯಲ್ಲಿ ರೈತರ ಹೋರಾಟದ ಪ್ರತಿಕ್ರಿಯಿಸಿದ ಅವರು, ಹೋರಾಟ ನಿರತ ರೈತರ ಜೊತೆ 11 ಸುತ್ತು ಮಾತುಕತೆ ಆಗಿದೆ. ರೈತರ ಜೊತೆ ಮಾತನಾಡಲು ನಾವು ಸಿದ್ಧರಿದ್ದೇವೆ. ಆದರೆ ಕೃಷಿ ಕಾಯ್ದೆ ಬಿಲ್ ಏಕೆ ಮಾಡಿದ್ದೇವೆ? ಎನ್ನುವುದನ್ನು ಹೋರಾಟ ನಿರತ ರೈತರು ಅರ್ಥ ಮಾಡಿಕೊಳ್ಳಬೇಕು ಎಂದವರು ಇದೇ ಸಂಧರ್ಬದಲ್ಲಿ ಹೇಳಿದರು

























Discussion about this post