ದಾವಣಗೆರೆ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿಕೆ
ದಾವಣಗೆರೆ: ವಿಧಾನಮಂಡಲ ಅಧಿವೇಶದ ಮುಗಿದ ಕೂಡಲೇ ತಾವು ರಾಜ್ಯಾದ್ಯಂತ ಪ್ರವಾಸ ಮಾಡಿ ಆಡಳಿತ ಚುರುಕುಗೊಳಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ರಾಜ್ಯ ಬಿಜೆಪಿ ಕಾರ್ಯಕಾರಣಿ ಯಶಸ್ವಿಯಾಗಿದ್ದು, ಹಲವಾರು ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆಯ ಸಭೆಯ ಯಶಸ್ಸಿಗೆ ಕಾರಣರಾದ ದಾವಣಗೆರೆ ಸಂಸದ ಸಿದ್ದೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿ ಮುಗಿದಿದ್ದು, ಇದರ ಯಶಸ್ಸು ಪಕ್ಷದ ಪ್ರತಿಯೊಬ್ಬ ಮುಖಂದರು, ಕಾರ್ಯಕರ್ತರಿಗೆ ಸಲ್ಲುವುದು ಎಂದು ಇದೇ ವೇಳೆ ಪಕ್ಷದವರನ್ನು ಶ್ಲಾಘಿಸಿದರು.

























Discussion about this post