ಕನ್ನಡನಾಡಿ ಸುದ್ದಿಜಾಲ: ಸೆಪ್ಟೆಂಬರ್ ೧೮ ಅಂದ್ರೇ ಸ್ಯಾಂಡಲ್ ವುಡ್ ನಲ್ಲಿ ಮೂವರ ಹುಟ್ಟುಹಬ್ಬದ ಆಚರಣೆ. ಸಾಹಸ ಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟಿ ಶೃತಿ ಈ ಮೂವರು ಹುಟ್ಟಿದ್ದು ಇಂದೇ.
ಅಭಿಮಾನಿಗಳು ಇಂದಿನ ಮೂವರ ಹುಟ್ಟು ಹಬ್ಬವನ್ನು ಇಷ್ಟಪಟ್ಟು ಆಚರಿಸುತ್ತಾ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಹುಟ್ಟುಹಬ್ಬಕ್ಕೆ ಶುಭಾಷಯಗಳ ಸುರಿಮಳೆ ಹರಿಯುತಾ ಇದೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಇಂದು ೭೧ ನೇ ಹುಟ್ಟುಹಬ್ಬ, ಅವರು ಭೌತಿಕವಾಗಿ ಇಲ್ಲದಿರುವಿಕೆಗೆ ಯಾವುದೇ ಅಡ್ಡಿಯಿಲ್ಲ, ಅವರ ಸಿನೆಮಾಗಳ ಮೂಲಕ, ಅವರು ಎತ್ತಿಹಿಡಿದ ಮೌಲ್ಯಗಳ ಮೂಲಕ ಸದಾ ಕನ್ನಡಿಗರ ಮನಸ್ಸಿನಲ್ಲಿ ಇದ್ದೇ ಇರ್ತಾರೆ.
ವಿಷ್ಣುದಾದಾ ಅಭಿಮಾನಿ ಬಳಗಗಳು ರಕ್ತದಾನ ಸೇರಿದಂತೆ ಅನ್ನದಾನ, ಪೂಜೆ ಪುರಸ್ಕಾರ ಕಾರ್ಯಕ್ರಮಗಳನ್ನು ಸಹ ನಡೆಸಿಕೊಂಡು ಬರ್ತಾನೆ ಇದ್ದಾರೆ.
ವಿಷ್ಣು ಸರ್ ಇರಬೇಕಿತ್ತು ಅಂತ ಕಣ್ಣೀರು ಹಾಕುತ್ತಾ ಇರುವ ಅಭಿಮಾನಿಗಳು ಇಂದಿಗೂ ಇದ್ದಾರೆ. ಅವರ ಆದರ್ಶ ನಮಗೆ ದಾರಿದೀಪ ಅಂತನೂ ಬಾಳ್ತಾ ಇರೋರು ಇದ್ದಾರೆ.
ಇನ್ನೂ ಓರ್ವ ಅಭಿಮಾನಿ ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಡಾ. ವಿಷ್ಣು ದಾದಾ ಅವರ ಬಣ್ಣದ ಮರಳು ಶಿಲ್ಪ ರಚಿಸಿ ಕನ್ನಡಾಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ರು. ಆ ಶಿಲ್ಪಿ ಬೇರೆ ಯಾರೂ ಅಲ್ಲದೆ ಮನೀಶ್ ಕುಮಾರ್ ಆಗಿದ್ದರು.
ಉಪೇಂದ್ರ ಅವರು ರಿಯಲ್ ಆಗೇ ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನೂ ಮಾಡ್ತಾ ರಿಯಲ್ ಸ್ಟಾರ್ ಆಗಿಹೋಗಿದ್ದಾರೆ. ಬೆಂಗಳೂರ್ ನಲ್ಲೇ ಇದ್ದು ಬರ್ತ್ ಡೇ ಆಚರಿಸೋದಿಲ್ಲ ನಿನ್ನೆ ಹೇಳಿದ್ದ ಇವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಅಲ್ಲಲ್ಲೇ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡ್ತಾ ಇದ್ದಾರೆ. ಡಿಪಿ ಹಾಕೋದು, ವಿಡಿಯೋ ಮಾಡಿ ಹಾಕೋದು ಇವೆಲ್ಲಾ ಅಂತು ಇದ್ದೇ ಇರುತ್ತೆ.
ಸ್ಯಾಂಡಲ್ ವುಡ್ ಕಣ್ಣೀರಿನ ರಾಣಿ ಶೃತಿ ಅವರು ಹಿರಿಯ ನಟಿಯಾಗಿ ತಮ್ಮದೇ ಆದ ಛಾಪು ಮೂಡಿಸ್ತಾ ಇದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಮಹಿಳಾ ಪರ ಸಿನೆಮಾಗಳನ್ನು ಮಾಡಿರುವ ಇವರಿಗೆ ಮಹಿಳೆಯರ ಬಳಗದಿಂದ ಅಭಿಮಾನಿಗಳ ದಂಡೇ ಇದೆ.
ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಹಿರಿಯ ನಟಿಗೆ ಸಹ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವಿಶ್ ಮಾಡಿ ಶುಭ ಕೋರಿದ್ದಾರೆ.
Discussion about this post