ದಾವಣಗೆರೆ: ಈ ಬಾರಿಯ ಕಾರ್ಣಿಕ ಎಚ್ಚರಿಕೆಯ ಭವಿಷ್ಯ ನುಡಿದಿದೆ. ಕಳೆದ ವರ್ಷ ‘ಭೂಲೋಕ ನಡುಗೀತಲೇ ಎಚ್ಚರ’ ಎಂದು ಕಾರ್ಣೀಕ ನುಡಿದಿದ್ದರು. ‘ಹಸುಗೂಸು ಗೋಳಾಡೀತಲೇ, ಭೂ ಲೋಕ ನಡುಗೀತಲೇ ಎಚ್ಚರ’ ಎಂದು ಈ ಸಲದ ಕಾರ್ಣಿಕ ಜನರ ಎದೆಯಲ್ಲಿ ನೈತಿಕ ಎಚ್ಚರಿಕೆಯ ಘಂಟೆ ಬಾರಿಸಿದೆ.
ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಆಂಜನೇಯ ಸ್ವಾಮಿ ಕಾರ್ಣಿಕ ದಲ್ಲಿ ಮಕ್ಕಳ ಕುರಿತು ಆತಂಕದ ಭವಿಷ್ಯ ಗುರುತಿಸಲಾಗಿದೆ. ಕೊರೊನಾ ಮೂರನೇ ಅಲೆಯ ಭಯದಲ್ಲಿ ಪಾಲಕರು ಇರುವಾಗ ಕಾರ್ಣಿಕನ ಮಾತುಗಳಿಂ ಎಲ್ಲರೂ ಜಾಗ್ರತೆ ವಹಿಸಬೇಕಾಗಿದೆ.
ಭವಿಷ್ಯದಲ್ಲಿ ಸಾಮಾಜಿಕ ಜೀವನ ಅಸ್ತವ್ಯಸ್ತವಾಗಲಿದ್ದು, ವಿಕೋಪಗಳು ಸಹ ಸಾಕಷ್ಟು ಪಾಟ ಕಲಿಸಲಿವೆ. ಆದರೆ ಇವೆಲ್ಲವೂ ಸಹ ಮಕ್ಕಳ ಮೇಲೆ ಪ್ರಭಾವ ಭೀರಲಿವೆ ಎಂಬ ಸುಳಿವು ಕಾರ್ಣಿಕ ನೀಡಿದೆ. ಮೈಸೂರು ಮಾಹಾರಾಜರಿಗೆ ಈ ಕಾರ್ಣಿಕದಲ್ಲಿ ಸಾಕಷ್ಟು ನಂಬಿಕೆ ಇತ್ತು, ಅದರ ಪ್ರಕಾರ ಭವಿಷ್ಯದಲ್ಲಿ ಬದಲಾವಣೆ ಮಾಡುತ್ತಿದ್ದರು ಎಂದು ಹಿರಿಯ ನಾಗರೀಕರು ಸ್ಮರಿಸಿಕೊಳ್ಳುತ್ತಾರೆ.

























Discussion about this post