ಬೆಂಗಳೂರು: ಎರಡು ದಿವಸದ ಹೆಣ್ಣು ಶಿಶುವೊಂದನ್ನು ಬೆಂಗಳೂರಿನ ಕೆ ಎಲ್ ಇ ಕಾಲೇಜು ಮುಂಭಾಗದ ಗೇಟ್ ಬಳಿ ಬಿಸಾಡಿಹೋಗಿರುವ ದಾರುಣ ಘಟನೆ ನಡೆದಿದೆ. ಬ್ಯಾಡರಹಳ್ಳಿಠಾಣೆ ವ್ಯಾಪ್ತಿಯಲ್ಲಿ ಬರುವ ಕಾಲೇಜ್ ಗೇಟ್ ಬಳಿ ಬಿಸಾಡಿದ್ದ ಮಗುವನ್ನು ರಕ್ಷಿಸಲಾಗಿದೆ.
ಹೆತ್ತವರೇ ಮಗುವನ್ನು ಹಳೆ ಬಟ್ಟೆಯಲ್ಲಿ ಸುತ್ತಿ ಇಲ್ಲಿ ಎಸೆದಿದ್ದಾರೆಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಪಾಲಕರ ಪತ್ತೆಗೆ ಜಾಲ ಹೆಣೆದಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ರಾತ್ರಿ ೯-೩೦ರ ವೇಳೆ ಓಡಾಡುವಾಗ ಮಗುವಿನ ಅಳು ಕೇಳಿ ಪೋಲೀಸರಿಗೆ ಕರೆ ಮಾಡಿದ್ದಾರೆ. ಸದ್ಯ ಮಗುವಿಗೆ ಯಾವುದೇ ತೊಂದರೆಗಳಾಗಿಲ್ಲ, ಆರೋಗ್ಯವಾಗಿರುವ ಮಗುವನ್ನು ಬ್ಯಾಡರಹಳ್ಳ ಪೋಲಿಸರು ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಿದ್ದಾರೆ.

























Discussion about this post