ಕೊಡಗು: ಹಿಂದೂಗಳ ಪವಿತ್ರ ಕ್ಷೇತ್ರವಾದ ಬೋಟ್ಲಪ್ಪಾ ದೇವಸ್ಥಾನಕ್ಕೆ ಕಿಡಿಗೇಡಿಗಳು ಹಾನಿಯುಂಟು ಮಾಡಿರುವ ಘಟನೆ ಬೋಟ್ಲತ್ ನಾಡಿಗೆ ಸೇರುವ ಕುಂದಬೆಟ್ಟ ಪವಿತ್ರ ಕ್ಷೇತ್ರದಲ್ಲಿ ನಡೆದಿದೆ. ಪುರಾಣದ ಕತೆಗಳ ಅನುಸಾರ ಇಲ್ಲಿಯೇ ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ಬಂದಿದ್ದು, ಈ ದೇಗುಲವನ್ನು ಅವರೇ ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ.
ದೇವಾಲಯದ ಮೇಲ್ಛಾವಣಿಯ ನಾಲ್ಕು ಮೂಲೆಗಳಲ್ಲಿ ಬಸವನ ವಿಗ್ರಹ ಅಳವಡಿಸಿದ್ದು, ಅದರಲ್ಲಿ ಒಂದು ವಿಗ್ರಹವನ್ನು ನೆಲಕ್ಕೆ ಕೆಡವಲಾಗಿದೆ, ಅಷ್ಟೇ ಅಲ್ಲದೆ ಬಸವ ವಿಗ್ರಹದ ತಲೆ ಕತ್ತರಿಸಿ ಹಾಕಲಾಗಿದೆ. ಸ್ಥಳಿಯರೊಬ್ಬರು ಬೆಟ್ಟದ ಮೇಲೆ ಹೋದಾಗ ಈ ಘಟನೆ ನೋಡಿ, ಊರಿನವರು ಒಟ್ಟಾಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಗಾಗಿ ಗೋಣಿಕೊಪ್ಪ ನಿರೀಕ್ಷಕರಾದ ಜಯರಾಂ ಅವರ ತಂಡ ದೇವಾಲಯ ಬೇಟಿ ಮಾಡಿದೆ.
ಸ್ಥಳದಲ್ಲಿ ಒಂದು ಕತ್ತಿ ದೊರೆತಿದ್ದು, ತನಿಖೆ ಮುಂದುವರೆದಿದೆ. ಇಲ್ಲಿಗೆ ಪ್ರವಾಸಿಗರು ಸಹ ಮೋಜು, ಮಸ್ತಿ ಮಾಡಲು ಬರುತ್ತಾರೆ. ಹಲವಾರು ಬಾರಿ ಗಲಾಟೆಗಳು ನಡೆದಿವೆ, ಮೋಜು ಮಸ್ತಿಯಿಂದಾಗಿ ಇಂಥಾ ಅತಿರೇಕ ನಡೆದಿರುವ ಸಾಧ್ಯತೆ ಇರಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಕಿಡಿಗೇಡಿಗಳನ್ನು ಬೇಗ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ

























Discussion about this post