ಹಾವೇರಿ: ಶಾರ್ಟ್ ಸರ್ಕ್ಯೂಟ್ ನಿಂದ ಇಂದು ಬೆಳ್ಳಬೆಳಿಗ್ಗೆ ಬೆಂಕಿ ಅವಘಡ ಹಾವೇರಿಯ ನಗರದ ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು, ಮಕ್ಕಳು-ಮರಿ ಉಳಿಸಿಕೊಳ್ಳಲು ಬಾಣಂತಿಯರು ಒದ್ದಾಡಿದ ಘಟನೆ ನಡಿದಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾದ ಬೆಂಕಿ ಅವಘಡ ಸೃಷ್ಠಿಸಿದ ಕೋಲಾಹಲಕ್ಕೆ ಹೆದರಿ ನೂರಕ್ಕೂ ಹೆಚ್ಚು ಬಾಣಂತಿಯರು, ಪಾಲಕರು ನವಜಾತ ಶಿಶುಗಳೊಂದಿಗೆ ಆಸ್ಪತ್ರೆ ಬಿಟ್ಟು ಓಡಿ ಹೊರಗೆ ಬರಬೇಕಾಯಿತು.
ಮಾಹಿತಿ ಪಡೆದಿದ್ದ ಅಗ್ನಿ ಶಾಮಕ ದಳದ ಸಿಬ್ಬಂಧಿ ಆಗಮಿಸಿ ಬೆಂಕಿಯನ್ನು ನಂದಿಸಿದರು. ದುರ್ಘಟನೆ ನಡೆಯುವುದು ತಪ್ಪಿಹೋಗಿದ್ದು ಜೀವ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿದೆ.
ಇಷ್ಟು ದೊಡ್ಡ ಘಟನೆ ನಡೆದರೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

























Discussion about this post