ಬೆಂಗಳೂರು: ಮನೆಗಳ್ಳತನ ಮಾಡಲು ಹೈಟೆಕ್ ವಿಮಾನದಲ್ಲಿ ಬರ್ತಾ ಇದ್ದ ಮುಂಬೈ ಮೂಲದ ಸಾಲಿಮ್ ಶೇಕ್, ಬಿಲಾಲ ಮಂಡಾಲ್, ಜಾಲಿಕ್ ಎಂಬ ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಸದಾ ಶ್ರೀಮಂತನ ಹಾಗೆ ಪೋಸ್ ಕೊಡ್ತಾ ಮನೆ ಮಂದಿಯೆಲ್ಲಾ ಚಿನ್ನ ಹೊತ್ತು ತಿರುಗುತ್ತಾ ಇದ್ದ ಶೋಕಿ ಕಳ್ಳನ ಫಿಂಗರ್ ಪ್ರಿಂಟ್ ನಿಂದಾಗಿ ಬಸವನಗುಡಿ ಪೊಲೀಸರ ಬಲೆಗೆ ಬಿದ್ದೇಬಿಟ್ಟ. ಮುಂಬೈ ಮೂಲದ ಆರೋಪಿ ಸಲೀಂ ಶೇಖ್ ಅಲಿಯಾಸ್ ಶೋಕಿ ಸಲೀಮ್, ಬಿಲಾಲ್ ಮಂಡಲ್ ಹಾಗೂಜಾಲಿಕ್ ಅನ್ನುವ ಮೂರು ಆರೋಪಿಗಳು ಈಗ ಅಂದರ್ ಆಗಿದ್ದಾರೆ.
ಬಂಧಿತರಿಂದ ೧ ಕೋಟಿ ೮೦ ಲಕ್ಷ ಮೌಲ್ಯದ ೩.೩ ಕೆಜಿ ಚಿನ್ನಾಭರಣ ಹಾಗೂ ೧೮ ಕೆಜಿ ಬೆಳ್ಳಿಯ ಆಭರಣವನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರಲ್ಲಿ ಬಿಸಿನೆಸ್ ಮಾಡ್ತಿದ್ದೀನಿ ಅಂತಾ ಪೋಸ್ ಕೊಡ್ತಾ ಹೈಟೆಕ್ ಲೈಫ್ ಲೀಡ್ ಮಾಡ್ತಾ ಇದ್ರು ಆರೋಪಿಗಳು. ಅದರಲ್ಲೂ ಶೋಕಿ ಸಲೀಂ ಒಡವೆ ಮಾರಿ, ಬೇಕಾದ ಒಡವೆ ಹಾಕ್ಕೊಂದು ರೀಲ್ಸ್ ಮಾಡಿ ಫ್ಯಾನ್ಸ್ ಸಹ ಮಾಡಿಕೊಂಡಿದ್ದ. ಕದ್ದ ಮಾಲ್ ಹಾಕಿಕೊಂಡು ರೀಲ್ಸ್ ಮಾಡಿ, ಸೆಲೆಬ್ರಿಟಿನೇ ಆಗಿಹೋಗಿದ್ದ.
ಮನೆಗಳ್ಳತನ ತಲೆನೋವಾಗಿದ್ದ ಸಂದರ್ಭದಲ್ಲಿ ಹಳೆ ಮತ್ತು ಹೊಸ ಕಳ್ಳರ ಫಿಂಗರ್ ಪ್ರಿಂಟ್ ಅನ್ನು ಟ್ಯಾಲಿ ಮಾಡಿದಾಗ ಶೋಕಿ ಸಲೀಂ ಫಿಂಗರ್ ಪಿರ್ಂಟ್ ಮ್ಯಾಚ್ ಆಗಿದ್ದೇ ತಡ, ಅಲರ್ಟ್ ಆದ ಪೊಲೀಸರು, ಸಲೀಂ ಶೋಕಿ ಗ್ಯಾಂಗ್ ಅನ್ನು ಯಶಸ್ವಿಯಾಗಿ ಬೇಟೆಯಾಡಿದ್ದಾರೆ.
ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಹೆಚ್ಚಿನ ಚಿನ್ನಾಭರಣ ಮಹಾಲಕ್ಷ್ಮೀ ಲೇ ಔಟ್ ನಲ್ಲಿ ನಡೆದಿರುವ ಕಳ್ಳತನಕ್ಕೆ ಸಂಬಂಧಿಸಿದ್ದು ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ. ತನಿಖೆ ಮುಂದುವರೆದಂತೆ ಇನ್ನೂ ಭಯಾನಕ ವಿಷಯಗಳು ಹೊರಬರುವ ಸಾಧ್ಯತೆ ಇದೆ.

























Discussion about this post