ಹುಬ್ಬಳ್ಳಿ: ಕೋವಿಡ್ ಸ್ಥಿತಿಗತಿ ಅವಲೋಕಿಸಿ, ಸೆಪ್ಟೆಂಬರ್ ೫ರಂದು ಸಭೆ ನಡೆಯುತ್ತಿದ್ದು, ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸ್ವಕ್ಷೇತ್ರ ಶಿಗ್ಗಾಂವ್ ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳುವ ಮುನ್ನ ಅವರು ಸುದ್ದಿಗಾರರೊಂದಿಗೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು. ಈಗಾಗಲೇ ಜಿಲ್ಲಾವಾರು ಕೋವಿಡ್ ಸ್ಥಿತಿಗತಿಗಳ ಕುರಿತು ತಜ್ಞ ವರದಿ ನೀಡಲು ನೀಡಲಿದ್ದಾರೆ. ತದನಂತರ ತೀರ್ಮಾನವನ್ನ ತೆಗೆದುಕೊಳ್ಳಲಾಗುವುದೆಂದು ಮಾಹಿತಿ ನೀಡಿದರು.
ದೇಶದ್ರೋಹಿ ಚಟುವಟಿಕೆ ನಡೆಸುವವರ ಮೇಲೆ ಪೊಲೀಸ್ ಇಲಾಖೆ ನಿಗಾಯಿಟ್ಟಿದೆ. ಉಗ್ರರ ಜೊತೆ ಕೈ ಜೋಡಿಸಿ, SLEEPER CELLಗಳಂತೆ ಕೆಲಸ ಮಾಡುವವರ ಮೇಲೆ ಸಹ ನಿಗಾ ವಹಿಸಲಾಗುತ್ತಿದೆ. ಈಗಾಗಲೇ NIA ಕೆಲವರನ್ನು LIFT ಮಾಡಿದೆ. NIA ಜೊತೆ ನಮ್ಮ ಕರ್ನಾಟಕ ಪೊಲೀಸ್ (KARNATAKA STATE POLICE) ಕೂಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ನಾಳೆ ಕೇಂದ್ರದಿಂದ ಗೃಹ ಸಚಿವ ಅಮಿತ್ ಶಾ, ಸೇರಿದಂತೆ ಹಲವಾರು ಕೇಂದ್ರ ಸಚಿವರು ಹುಬ್ಬಳ್ಳಿ ಆಗಮಿಸುತ್ತಿದ್ದಾರೆ. ಬಳಿಕ ದಾವಣಗೆರೆಗೆ ಸಹ ಶಾ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಜೊತೆ ರಾಜ್ಯದ ಹಲವಾರು ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದರು.
ಈಗಾಗಲೇ ನಾವು ವೀಕೆಂಡ್ ಕರ್ಪ್ಯೂ (WEEKEND CURFEW) ತೆಗೆದಿದ್ದೇವೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ನೈಟ್ ಕರ್ಪ್ಯೂ (NIGHT CURFEW) ಬಗ್ಗೆ ನಿರ್ಧರಿಸಲಾಗುವುದು. ಆರ್ಥಿಕ ಚಟುವಟಿಕೆ ಮೇಲೆ ನಿರ್ಬಂಧ ಹಾಕುವ ಉದ್ದೇಶ ಸರ್ಕಾರಕ್ಕಿಲ್ಲ. ಕೋವಿಡ್ ನಿರ್ವಹಣೆಯೂ, ನಮಗೆ ಅಷ್ಟೇ ಮುಖ್ಯ. ಕೋವಿಡ್ ನಿಯಂತ್ರಣದಲ್ಲಿರುವ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ಸಡಿಲಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ ಇದೇ ವೇಳೆ ಹೇಳಿದರು.

























Discussion about this post