- ಮಗಳನ್ನು ಕಳಕೊಂಡ ಪಾಲರಿಂದ ಪ್ರೆಸ್ ಮೀಟ್
- ತಂದೆಗೆ ಅನಾರೋಗ್ಯ ಹಿನ್ನೇಲೆ ಸಂದೇಶ್ ಜೊತೆ ಮದುವೆಗೆ ಒಪ್ಪಿಗೆ
- ಮಗಳ ಮದುವೆ ಪ್ರಪೊಸಲ್ ತಿರಸ್ಕರಿಸಿದ್ದ ಸಂದೇಶ್ ಕುಟುಂಬ
- ಮಗಳ ಕೊಲೆಗೆ ನ್ಯಾಯ ಬೇಡುತ್ತಿರುವ ಪಾಲಕರು
ಉಡುಪಿ: ಪ್ರೇಯಸಿಯನ್ನು ಹತ್ಯೆಗೈದು, ನಂತರ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ ಕಳೆದ ವಾರದ ಪ್ರಕರಣಕ್ಕೆ ಬಿಗ್ ಟ್ವೀಸ್ಟ್ ಸಿಕ್ಕಿದ್ದು, ಕೊಲೆಯಾದ ಸೌಮ್ಯ ಭಂಡಾರಿ ಪೋಷಕರು ಆರೋಪಿ ಸಂದೇಶ್ ಕುಲಾಲ್ ಮಾದಕ ವಸ್ತು ಸೇವನೆ ಮಾಡಿ ಈ ಕೃತ್ಯ ಎಸಗಿದ್ದಾನೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ.
ಸೌಮ್ಯ ಭಂಡಾರಿ ಹಾಗೂ ಸಂದೇಶ್ ಕುಲಾಲ್ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮನೆಗೆ ಹೋಗಿದ್ವಿ, ಆದ್ರೆ ಸಂದೇಶ್ ಹಾಗೂ ಆತನ ಮನೆಯವರು ಮದುವೆ ವಿಚಾರದಲ್ಲಿ ಗೇಮ್ ಆಡ್ತಿದ್ದರು. ಹಲವು ಬಾರಿ ಮದುವೆ ಪ್ರಪೋಸಲ್ ತಗೊಂಡು ಮನೆಗೆ ಹೋದರೂ ಸೂಕ್ತ ಉತ್ತರ ನೀಡದೆ ಯಾಮಾರಿಸ್ತಾ ಇದ್ರು ಸಂದೇಶ್ ಕಡೆಯವರು. ಇದರಿಂದ ಬೇಸತ್ತು ಬೇರೆ ಯುವಕನ ಜೊತೆ ವಿವಾಹ ನಿಶ್ಚಯ ಮಾಡಿದ್ದರು.
ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ ಭಂಡಾರಿಗೆ, ಸಂದೇಶ ಕುಲಾಲ್ ಆಕೆಯಿಂದ ಹಲವು ಬಾರಿ ತನ್ನ ಕೆಲಸಗಳನ್ನು ಮಾಡಿಕೊಂಡಿದ್ದಾನೆ. ಕೆಲವು ಬಾರಿ ಬ್ಯಾಂಕಿಗೆ ತೆರಳಿ ಕಿರುಕುಳವನ್ನೂ ನೀಡಿದ್ದ. ಸಂದೇಶ ಮೆಡಿಕಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವನೆ ಮಾಡಿ ಈ ಕೃತ್ಯವನ್ನು ಮಾಡಿರ ಬಹುದು ಎಂದು ಪಾಲಕರು ಮಗಳ ಕೊಲೆಗೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಮೂರು ತಿಂಗಳಿಂದಲೂ ಪರಸ್ಪರ ಇಬ್ಬರೂ ಭೇಟಿಯಾಗಿರಲಿಲ್ಲ, ಬೈಕಿನಲ್ಲಿ ಸುತ್ತಾಡಿದ್ದಾರೆ ಅನ್ನೋದು ಸುಳ್ಳು ಎಂದಿರುವ ಪೋಷಕರು. ಸೌಮ್ಯ ಗೆ ಸಂದೇಶ ಕಿರುಕುಳ ನೀಡುತ್ತಿರುವ ಕುರಿತು ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ಕಳೆದೊಂದು ತಿಂಗಳ ಹಿಂದೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಸೌಮ್ಯ ತಾಯಿ ಸುಶೀಲಾ ಕಣ್ಣೀರಿಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೌಮ್ಯ ಭಂಡಾರಿ ಅವರ ಅಣ್ಣ ಸುನಿತ್, ಅತ್ತಿಗೆ ನಿರೀಕ್ಷಾ ಅಲ್ಲದೇ ಸೋಮಶೇಖರ ಭಂಡಾರಿ, ಅಶೋಕ್ ಕುಮಾರ್ ಅಲೆವೂರು ಹಾಗೂ ಜಗದೀಶ್ ಉಪಸ್ಥಿತರಿದ್ದರು

























Discussion about this post