ಚಿಕ್ಕಮಗಳೂರು: ದತ್ತಮಾಲಾಧಾರಿಗಳಾದ ಶ್ರೀ ರಾಮಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಕೋಲಾರ ಬಂದ್ಗೆ ಕರೆ ನೀಡಿದ್ದ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ತಡೆದು ಜಿಲ್ಲಾಡಳಿತ ಬಂಧಿಸಿರುವುನ್ನು ವಿರೋಧಿಸಿ ಚಿಕ್ಕಮಗಳೂರು ಶ್ರೀರಾಮ ಸೇನಾ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದ ಎದುರು ಧರಣಿ ನಡೆಸಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ ಕೋಲಾರದಲ್ಲಿ ದತ್ತಮಾಲಾಧಾರಿಗಳಾದ ಶ್ರೀ ರಾಮಸೇನೆ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ಖಂಡನೀಯ. ಇದನ್ನು ವಿರೋಧಿಸಿ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಕೋಲಾರ ಬಂದ್ಗೆ ಕರೆ ನೀಡಿದ್ದರು. ಆದರೆ ಜಿಲ್ಲಾಡಳಿತ ಅವರನ್ನು ಮಾರ್ಗ ಮಧ್ಯದಲ್ಲಿಯೇ ತಡೆದು ಸುಮಾರು ನೂರಕ್ಕೂ ಹೆಚ್ಚು ಮಂದಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧನದಲ್ಲಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದುರ್ಗಾ ಸೇನೆ ತಾಲ್ಲೂಕು ಅಧ್ಯಕ್ಷೆ ನವೀನ , ಸಂಜೀತ್ ಸುವರ್ಣ, ಶ್ರೀ ರಾಮ ಸೇನೆ ಕಾರ್ಯಕರ್ತರಾದ ಪುನೀತ್, ದಿಲೀಪ್ಶೆಟ್ಟಿ, ಶರತ್, ಜ್ಞಾನೇಂದ್ರ, ಮಹೇಶ್ ಮೇದಾರ್, ನವೀನ್, ಕಿರಣ್, ಗಿರಿ, ಮನು, ಮಧು ಸಿ.ಕೆ , ನೀತೇಶ್ ನಿತು, ಶಶಾಂಕ್, ಚಂದು ಮತ್ತಿತರರು ಇದ್ದರು.
ಇದನ್ನೂ ಓದಿ:
Discussion about this post