ಬೆಂಗಳೂರು: ರಾಜ್ಯ ವಿಧಾನ ಮಂಡಲದ ಅಧಿವೇಶನವನ್ನು ಹದಿನೈದು ದಿನಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾನ್ಯ ವಿಧಾನಸಭಾಧ್ಯಕ್ಷರಿಗೆ ಸೋಮವಾರ ಪತ್ರವನ್ನು ಬರೆದಿದ್ದಾರೆ.
ಸಿದ್ದರಾಮಯ್ಯನವರು ಬರೆದ ಪತ್ರದ ಪ್ರತಿಯನ್ನು ಅವರು ಟಿಟ್ಟರ್ ನಲ್ಲಿ ಟ್ವೀಟ್ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ಕೊರೊನಾ ೨ನೇ ಅಲೆಯ ಹಿನ್ನೇಲೆ, ರಾಷ್ಟ್ರೀಯ ಶಿಕ್ಷಣ ನೀತಿಯ ಅಳವಡಿಕೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಅವ್ಯವಸ್ಥೆ ಮೊದಲಾದ ಗಂಭೀರ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು ಎಂದು ಅವರು ಗುರುತರವಾದ ಕಾರಣಗಳನ್ನು ಸಹ ನೀಡಿದ್ದಾರೆ.
ವಿಧಾನಸಭಾ ಅಧಿವೇಶನವನ್ನು ಹದಿನೈದು ದಿನಗಳಿಗೆ ವಿಸ್ತರಿಸಬೇಕು ಎಂದು ಅವರು ಮಾನ್ಯ ವಿಧಾನಸಭಾ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದು ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

























Discussion about this post