ವಾಷಿಂಗ್ಟನ್: ವಾಹನಗಳಲ್ಲಿ ಪ್ರಸವವಾಗುವುದು ಹೊಸದೇನೂ ಅಲ್ಲ. ಆದರೆ, ಹೊಸ ಮಾದರಿಯ ಎಲೆಕ್ಟ್ರಿಕ್ ಕಾರಿನಲ್ಲಿ ಅದೂ ತುಂಬಿ ಗಭಿರ್ಣಿಗೆ ಸುಖ ಪ್ರಸವವಾಗಿರುವುದು ವಿಶೇಷ ಸಂಗತಿ. ಕಾರು ಆಟೋಪೈಲಟ್ ಮೋಡ್ (ಸ್ವಯಂ ಚಾಲನೆ)ನಲ್ಲಿದ್ದಾಗ ಜನಿಸಿದ ಜಗತ್ತಿನ ಮೊದಲು ಶಿಶು ಇದಾಗಿದೆ. ಈ ಮಗುವಿಗೆ ‘ಮೇವ್’ ಎಂದು ನಾಮಕರಣ ಮಾಡಲಾಗಿದೆ.
ಈ ಘಟನೆ ನಡೆದಿದ್ದು ಅಮೆರಿಕದ ಫಿಲಡೆಲ್ಫಿಯಾದಲ್ಲಿ. ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರಿನಲ್ಲಿ ಹೆರಿಗೆ ಆಸ್ಪತ್ರೆಗೆ ಹೋಗುತ್ತಿದ್ದ ಗಭಿರ್ಣಿಗೆ ಆಸ್ಪತ್ರೆ ಇನ್ನು 20 ನಿಮಿಷದ ಚಾಲನೆಯ ದೂರದಲ್ಲಿದ್ದಾಗಲೇ ಪ್ರಸವವೇದನೆ ಶುರುವಾಗಿ ಮಗು ಜನ್ಮಿಸಿದೆ. ಈ ವೇಳೆ ಕಾರ ಆಟೋಪೈಲಟ್ ಮೋಡ್ (ಸ್ವಯಂ ಚಾಲನೆ)ನಲ್ಲಿತ್ತು.
ಯಿರಾನ್ ಶೆರ್ರಿ (33) ಹಾಗೂ ಆಕೆಯ ಪತಿ ಕೀಟಿಂಗ್ ಶೆರ್ರಿ (34) ತಮ್ಮ ಮೂರು ವರ್ಷದ ಮಗನನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ಗಭಿರ್ಣಿ ಯಿರಾನ್ಗೆ ಹಠಾತ್ತನೆ ಪ್ರಸವ ವೇದನೆ ಬಂದು ಕಾರಿನ ಮುಂದಿನ ಆಸನದಲ್ಲಿ ಮಗುವಿಗೆ ಜನ್ಮ ನೀಡಿದಳು. ಸಂಚಾರ ದಟ್ಟಣೆ ಇದ್ದ ಕಾರಣ ಸಕಾಲದಲ್ಲಿ ಆಸ್ಪತ್ರೆಗೆ ತಲುಪಲಾಗುತ್ತದೋ ಇಲ್ಲವೋ ಎಂದು ದಂಪತಿ ಆತಂಕಗೊಂಡಿದ್ದರು. ವಾಹನವನ್ನು ಆಟೋಪೈಲಟ್ ಮೋಡ್ಗೆ ಹಾಕಿದ ಪತಿ ಕೀಟಿಂಗ್, ನ್ಯಾವಿಗೇಷನ್ ಸಿಸ್ಟಮ್ನಲ್ಲಿ ಆಸ್ಪತ್ರೆಯ ಹೆಸರನ್ನು ನಮೂದಿಸಿ; ಪತ್ನಿಯ ಆರೈಕೆಯಲ್ಲಿ ಮಗ್ನನಾಗಿದ್ದ.
ಯಾವುದೇ ತೊಂದರೆ ಇಲ್ಲದೆ ಕಾರು ಪಯಣಿಸುತ್ತಿದ್ದಾಗ, ಇನ್ನೇನು ಆಸ್ಪತ್ರೆ ತಲುಪಿತು ಎನ್ನುವಷ್ಟರಲ್ಲಿ ಯಿರಾನ್ ಮುಂದಿನ ಸೀಟ್ನಲ್ಲೇ ಕಂದನಿಗೆ ಜನ್ಮ ನೀಡಿದ್ದಳು. ತಕ್ಷಣವೇ ಧಾವಿಸಿದ ನರ್ಸ್ಗಳು ಕರುಳು ಬಳ್ಳಿಯನ್ನು ಕತ್ತರಿಸಿ, ತುರ್ತು ನಿಗಾ ಟಕಕ್ಕೆ ಕರೆದೊಯ್ದರು.
Tesla On Autopilot, She Gave Birth In Front Seat Of Car
ಇದನ್ನು ಓದಿ: ತೆಲಂಗಾಣದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಜನ್ಮಿಸಿದ ಹೆಣ್ಣು ಮಕ್ಕಳಿಗೆ ಆಜೀವ ಉಚಿತ ಪಾಸ್
ಇದನ್ನೂ ಓದಿ: Buffalo calf: ಭಾರತದ ಮೊದಲ ಐವಿಎಫ್ ‘ಬನ್ನಿ’ ತಳಿಯ ಎಮ್ಮೆ ಕರು ಜನನ.!
Discussion about this post