ವಾಷಿಂಗ್ಟನ್: ಈ ಯುಗಮಾನದಲ್ಲಿ ದೇಹತೂಕವನ್ನು ಇಳಿಸಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಉಪವಾಸ, ಪಥ್ಯ, ವ್ಯಾಯಾಮ, ಸೈಕಲ್ ತುಳಿಯದು ಬೆವರಿಳಿಸುತ್ತಾರೆ. ಆದರೆ, ಆಹಾರ ಕ್ರಮದಲ್ಲಿನ ಶಿಸ್ತಿನಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ.
ಕಂದಕ್ಕಿ (ಬ್ರೌನ್ ರೈಸ್), ತರಕಾರಿ ಜ್ಯೂಸ್ಗಳು ದೇಹದ ತೂಕ ಇಳಿಸಲು ಸಹಕಾರಿ. ಇದೇ ರೀತಿ ಸಿರಿಧಾನ್ಯದ ಮಾದರಿಯಲ್ಲಿ ಇರುವ ಇಸಾಬ್ಗೋಲ್ (ಸೈಲಿಯಮ್ ಹಸ್ಕ್) ಬಳಕೆಯು ತೂಕವನ್ನು ಕಡಿಮೆ ಮಾಡುತ್ತದೆ.
‘ಪ್ಲಾಂಟಗೋ ಓವಾಟಾ’ ಬೀಜಗಳಿಂದ ಪಡೆಯಲಾಗುವ ಇಸಾಬ್ಗೋಲ್ನಲ್ಲಿ ಅಧಿಕವಾಗಿ ನಾರಿನಂಶ ಇರುತ್ತದೆ. ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಮೇಧೋಜೀರಕ ಗ್ರಂಥಿ, ಹೃದಯ ಮತ್ತು ಕರುಳಿನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸುತ್ತದೆ.ಇದು ಪುಡಿಯ ರೂಪದಲ್ಲಿ ಅಥವಾ ಕ್ಯಾಪ್ಸೂಲ್ನಲ್ಲಿ ಲಭ್ಯವಿದೆ. ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ನಿಯಂತ್ರಿಸುವ ಕಾರಣ ಮಧುಮೇಹಿಗಳಿಗೆ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಅನ್ನು ತಗ್ಗಿಸುವುದರಿಂದ ಹೃದ್ರೋಗಿಗಳಿಗೂ ಇದು ಒಳ್ಳೆಯದು.
ಕರಗದ ಮತ್ತು ಕರಗುವ ಎರಡೂ ಮಾದರಿಯ ನಾರಿನಂಶವನ್ನು ಇಸಾಬ್ಗೋಲ್ ಹೊಂದಿದೆ. ಇದರಿಂದ ನೀರನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ. ಹೀಗಾಗಿ ಜಠರಗರುಳನ್ನು ಸ್ವಚ್ಛವಾಗಿ ಇರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇದು, ದೇಹಕ್ಕೆ ತ್ರಾಣ ನೀಡುತ್ತದೆ.
ಕ್ಯಾಲೋರಿಗಳನ್ನು ಕರಗಿಸುವುದರಿಂದ ತೂಕವನ್ನೂ ಗಣನೀಯವಾಗಿ ಇಳಿಸುತ್ತದೆ. ಇಸಾಬ್ಗೋಲ್ ಬೇಗ ಜೀರ್ಣವಾಗುವುದಿಲ್ಲ ಹೀಗಾಗಿ ಹೊಟ್ಟೆ ತುಂಬಿದಂತೆ ಇರುತ್ತದೆ. ಇದರಿಂದ ಬೇಗ ಹಸಿವಾಗುವುದಿಲ್ಲ.
ಕೊಲೊನ್ನನ್ನು ಶುದ್ಧಗೊಳಿಸುವ ಗುಣ ಇಸಾಬ್ಗೋಲ್ಗೆ ಇದೆ.ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚುವುದನ್ನು ತಡೆಯುತ್ತದೆ.
ವಯಸ್ಕರು ತಮ್ಮ ದೇಹಾರೋಗ್ಯವನ್ನು ಗಮನಿಸಿಕೊಂಡು ದಿನಕ್ಕೆ ಒಂದೆರಡು ಸಾರಿ ಇಸಾಬ್ಗೋಲ್ ಅನ್ನು ತೆಗೆದುಕೊಳ್ಳಬಹುದು. ಇದರ ಪುಡಿಯನ್ನು ನೀರಿನಲ್ಲಿ ಅಥವಾ ಹಣ್ಣಿ ರಸದ ಜತೆಗೆ ಸೇವಿಸಬಹುದು. ದೀರ್ಘಕಾಲದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು ಇದನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ವೈದ್ಯರನ್ನು ಕಾಣುವುದು ಒಳಿತು.
Isabgol can help lose weight
ಇದನ್ನು ಓದಿ: ತೂಕ ಕಡಿಮೆ ಮಾಡಲು ಬೆಲ್ಲ, ನೀರು, ನಿದ್ರೆಯ ಬಳಕೆ; ಆಯುರ್ವೇದ ತಜ್ಞರ 8 ಸಲಹೆಗಳನ್ನು ತಪ್ಪದೇ ಓದಿ
ಇದನ್ನೂ ಓದಿ: ದಾಲ್ಚಿನ್ನಿ ಚಹಾ ಸೇವನೆಯಿಂದ ಆರೋಗ್ಯ ವೃದ್ಧಿ; ಈ ಚಹಾದ ತಯಾರಿ ಹೇಗೆ?
Discussion about this post