ಸ್ಯಾಂಡಲ್ ವುಡ್ ನ್ಯೂಸ್: ಕನ್ನಡನಾಡಿ ಸುದ್ದಿಜಾಲ: ಪ್ಯಾನ್ ಇಂಡಿಯಾದ ಬಹುನಿರೀಕ್ಷಿತ ಚಿತ್ರವಾದ ‘ಪುಷ್ಪ’ ಈಗಾಗಲೇ ದೇಶದಾದ್ಯಂತ ಸಖತ್ ಅಲೆ ಎದ್ದಿದೆ. ಹೊಸ್ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಿನೆಮಾ ೨ ಭಾಗಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೊದಲ ಭಾಗಕ್ಕೆ ‘ಪುಷ್ಪ ದಿ ರೈಸ್’ ಎಂದು ಹೆಸರಿಇಡಲಾಗಿದೆ.
ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಖಳನಾಯಕನಾಗಿ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡವು ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಲುಕ್, ಟೀಸರ್ಗಳನ್ನು ಬಿಡುಗಡೆ ಮಾಡಿದೆ. ಅಲ್ಲದೇ ಒಂದು ಹಾಡು ಕೂಡ ಬಿಡುಗಡೆಯಾಗಿದೆ. ಆದರೆ ಇದುವರೆಗೆ ರಶ್ಮಿಕಾ ಮಂದಣ್ಣ ಪಾತ್ರದ ಕುರಿತು ಸುದ್ದಿಯಿರಲಿಲ್ಲ.
ರಶ್ಮಿಕಾರ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ನೂತನ ಅವತಾರದಲ್ಲಿ ರಶ್ಮಿಕಾ ಮಿಂಚುತ್ತಿದ್ದು ತಮ್ಮ ಮೊದಲ ಪೊಸ್ಟರ್ ಅನ್ನು ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಡನೆ ಹಂಚಿಕೊಂಡಿದ್ದಾರೆ. ‘ಶ್ರೀವಲ್ಲಿ’ ಎಂದು ಕ್ಯಾಪ್ಶನ್ ನೀಡಿರುವ ಅವರು, ಸದರಿ ಸಿನೆಮಾದಲ್ಲಿನ ತಮ್ಮ ಪಾತ್ರದ ಹೆಸರನ್ನೂ ತಿಳಿಸಿದ್ದಾರೆ

























Discussion about this post