ರಾಜಸ್ಥಾನ: ಲಿವ್- ಇನ್ ಸಂಬಂಧದಲ್ಲಿರುವ ಸಂಗಾತಿಗಳಲ್ಲಿ ಒಬ್ಬರು ಮದುವೆಯಾಗಿದ್ದರೂ ಕೂಡ ಸಾಮಾಜಿಕ ಅಥವಾ ಸಾರ್ವಜನಿಕ ನೈತಿಕತೆಯ ಗ್ರಹಿಕೆಗಳು ಜೋಡಿಯನ್ನು ರಕ್ಷಿಸಲು ಅಡ್ಡಿಯಾಗಬಾರದು ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ಸರ್ಕಾರದ ಕ್ರಮಗಳು ಹೇಗಿರಬೇಕು ಎಂದು ನಿರ್ದೇಶಿಸುವ ನೈತಿಕ ಪೊಲೀಸ್‌ಗಿರಿಗೆ ಅನುಮತಿ ನೀಡಲಾಗದು ಅಥವಾ ಸಾರ್ವಜನಿಕರ ನೈತಿಕ ಪೊಲೀಸ್‌ಗಿರಿಯನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿದೆ
ಕಾನೂನಿನ ಸೂಕ್ತ ಪ್ರಕ್ರಿಯೆ ಹೊರತಾಗಿ ಎಲ್ಲಾ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯ ರಾಜ್ಯದ್ದಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಯಾವುದೇ ಅಕ್ರಮ ಅಥವಾ ತಪ್ಪು ನಡೆದಾಗ ಅದಕ್ಕೆ ಶಿಕ್ಷೆ ನೀಡುವ ಹಕ್ಕು ರಾಜ್ಯದ್ದಾಗಿದೆ. ಅದು ಕೂಡ ಕಾನೂನಿನ ಸರಿಯಾದ ಪ್ರಕ್ರಿಯೆಗೆ ಅನುಗುಣವಾಗಿ ನಡೆಯಬೇಕು. ಯಾವುದೇ ಸಂದರ್ಭದಲ್ಲಿ ನೈತಿಕ ಪೊಲೀಸ್ ಅಥವಾ ಜನಸಮೂಹದ ಮನಸ್ಥಿತಿಗೆ ತಕ್ಕಂತೆ ರಾಜ್ಯವು ಯಾವುದೇ ಕಾನೂನು ಪ್ರಕ್ರಿಯೆಯನ್ನು ಮೀರುವಂತಿಲ್ಲ ಎಂದು ಪೀಠ ತಿಳಿಸಿದೆ. ಸಂವಿಧಾನದ ನೈತಿಕತೆಯನ್ನು ಎತ್ತಿಹಿಡಿಯುವ ಹೊಣೆಯ ಜೊತೆಗೆ ನ್ಯಾಯಾಲಯಗಳಿಗೆ ಇಬ್ಬರು ವಯಸ್ಕರ ನಡುವಿನ ವೈಯಕ್ತಿಕ ಸಂಬಂಧ ಮುರಿಯದಿರುವ ಸಮಾನಾಂತರ ಕರ್ತವ್ಯ ಕೂಡ ಇದೆ ಎಂದು ಹೈಕೋರ್ಟ್ ಹೇಳಿದೆ
ಕೃಪೆ- ಬಾರ್ ಅಂಡ್ ಬೆಂಚ್

























Discussion about this post