• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

‍‍Farmers Protest : ರೈತರಿಂದ ಹೆದ್ದಾರಿ ತಡೆ ಪ್ರತಿಭಟನೆ: ಬೆಲೆ ಖಾತ್ರಿ ಕಾಯ್ದೆಗೆ ಒತ್ತಾಯ

Shri News Desk by Shri News Desk
Nov 26, 2021, 08:16 pm IST
in ಚಿಕ್ಕಮಗಳೂರು, ಜಿಲ್ಲೆ, ರಾಜಕೀಯ
Share on FacebookShare on TwitterTelegram

ಚಿಕ್ಕಮಗಳೂರು : ರೈತರ ಬೆಳೆಗಳಿಗೆ ಬೆಲೆ ಖಾತ್ರಿ ಕಾಯ್ದೆ ಕಾನೂನು ಬದ್ದಗೊಳಿಸಬೇಕು, ಎಪಿಎಂಸಿ ಕಾಯ್ದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ರದ್ದುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಹೆದ್ದಾರಿ ತಡೆ ಪ್ರತಿಭಟನೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.  ನಗರದ ಜಿಲ್ಲಾ ಪಂಚಾಯಿತಿ ಕಛೇರಿ ಎದುರು ನೂರಾರು ರೈತ ಕಾರ್ಯಕರ್ತರು ಜಮಾಯಿಸುವ ಮೂಲಕ ಚಿಕ್ಕಮಗಳೂರು-ಕಡೂರು ಹೆದ್ದಾರಿ ರಸ್ತೆ ತಡೆದು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದುಗ್ಗಪ್ಪಗೌಡ ಮಾತನಾಡಿ ರೈತರಿಗೆ ಮಾರಣಾಂತಿಕವಾಗಿರುವ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಜಾರಿಗೊಳಿಸಿತ್ತು. ಕರಾಳ ಕಾಯ್ದೆಗಳನ್ನು ಹಿಂಪಡೆಯುವಂತೆ  ಆಗ್ರಹಿಸಿ ಕಳೆದ ಒಂದು ವರ್ಷದಿಂದ ದೆಹಲಿಯ ಗಡಿ ಭಾಗದಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಇಂದಿಗೆ ೧ ವರ್ಷ ಪೂರೈಸಿದ್ದು ಹೋರಾಟದ ಫಲವಾಗಿ ಮಣಿದ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ ಇದು ಸ್ವಾಗತಾರ್ಹ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ಅನುಗುಣವಾದ ಕಾನೂನು ಪ್ರಕ್ರಿಯೆ ಸಂಸತ್ತಿನಲ್ಲಿ ನಡೆಯಬೇಕಿದೆ. ಕಾಯ್ದೆಗಳನ್ನು ಸದನದಲ್ಲಿ ಮಂಡಿಸಿ ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರೈತರ ಹೋರಾಟವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಹಲವು ವಿಧವಾದ ತಂತ್ರಗಳನ್ನು ರೂಪಿಸಿತ್ತು. ರಸ್ತೆಗಳಿಗೆ ಬ್ಯಾರಿಕೇಡ್, ತಂತಿಬೇಲಿ ಹಾಕುವುದರ ಜತೆಗೆ ರೈತರ ಮೇಲೆ ಜಲಪಿರಂಗಿ ದಾಳಿ ನಡೆಸಿತ್ತು. ಕೆಂಪುಕೋಟೆಯ ಮೇಲೆ ಅನ್ಯ ಧ್ವಜವನ್ನು ಹಾರಿಸಿ ರೈತರನ್ನು ಉಗ್ರರಂತೆ ಬಿಂಬಿಸಿ, ದೇಶದ್ರೋಹ ಪಟ್ಟಕಟ್ಟಲು ಸಂಚು ರೂಪಿಸಿತ್ತು. ಇವೆಲ್ಲ ತಂತ್ರಗಳಿಗೆ ಜಗ್ಗದ ರೈತರು ಪ್ರಾಣದ ಹಂಗು ತೊರೆದು ನಿರಂತರವಾಗಿ ಹೋರಾಟ ಮುಂದುವರಿಸಿದ್ದರು ಹೋರಾಟದಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು ಮೃತ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಜತೆಗೆ ರೈತರ ಹತ್ಯೆಗೆ ಕಾರಣವಾದ ಕೇಂದ್ರ ಸಚಿವರ ಪುತ್ರನನ್ನು ಬಂಧಿಸಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಯಿಂದಾಗಿ ಸಣ್ಣ, ಹಿಡುವಳಿ ರೈತರು ಬೀದಿಪಾಲಾಗಲಿದ್ದು ಕಾರ್ಪೋರೇಟ್ ಉದ್ಯಮಿಗಳ ಪರವಾಗಿ ಸರ್ಕಾರ ಆಡಳಿತ ನಡೆಸುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಬಹುರಾಷ್ಟ್ರೀಯ  ಕಂಪನಿಗಳಿಗೆ ಅನುಕೂಲವಾಗಲಿದ್ದು ಕಠೋರ  ಕಾಯ್ದೆಗಳು ಏಕಸ್ವಾಮ್ಯ ಮಾರುಕಟ್ಟೆಗೆ ದಾರಿಯಾಗಲಿದೆ. ರಾಜ್ಯದಲ್ಲಿ ಈಗಾಗಲೇ ಜಾರಿಗೊಳಿಸಿರುವ ಎಪಿಎಂಸಿ ತಿದ್ದಪಡಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಹಾಗೂ ಜಾನುವಾರು ರಕ್ಷಣಾ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಮಸೂದೆಗೆ ತಿದ್ದುಪಡಿ ಮಾಡಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾಗಿವೆ. ಈ ಆಲೋಚನೆಯನ್ನು ಸರ್ಕಾರ ಮೊದಲು ಕೈಬಿಡಬೇಕು, ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನುಬದ್ದಗೊಳಿಸಬೇಕು, ದೇಶಾದ್ಯಂತ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ಹಾಕಲಾಗಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರ ಮೇಲೆ ಜೀಪು ಹರಿಸಿದ ಆರೋಪಿಯ ತಂದೆಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆ. ರೈತರು, ಕಾರ್ಮಿಕರಿಗೆ ಮಾರಕವಾಗಿರುವ ಎಲ್ಲಾ ಕಾಯ್ದೆಗಳನ್ನು ರದ್ದುಗೊಳಿಸಬೇಕು,  ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಮೂಲಕ ರೈತರ ಹಿತ ಕಾಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ತುಳಸೇಗೌಡ, ಕಡೂರು ಅಧ್ಯಕ್ಷ ನಿರಂಜನಮೂರ್ತಿ, ಮೂಡಿಗೆರೆ ಅಧ್ಯಕ್ಷ ವಸಂತ್‌ಹೆಗ್ಡೆ, ಉದ್ದೇಗೌಡ, ತರೀಕೆರೆ ತಾಲ್ಲೂಕು ಅಧ್ಯಕ್ಷ ಓಂಕಾರಪ್ಪ, ಜಿಲ್ಲಾ ಕಾರ್ಯದರ್ಶಿ ದಯಾಕರ್, ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ:

Highway road : ನ.೨೬ಕ್ಕೆ ರೈತ ಸಂಘದಿಂದ ಹೆದ್ದಾರಿ ತಡೆ ಚಳುವಳಿ

Tags: APMC Actby farmersFarmer BillsHighway protestssamuktha Kisan Morcha
ShareSendTweetShare
Join us on:

Related Posts

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Suhas Shetty Case: ಕೃತ್ಯದಲ್ಲಿ ಪೋಲೀಸ್ ಪೇದೆ ಕೈವಾಡ ಶಂಕೆ: ಪ್ರಕರಣದ ಬಗ್ಗೆ ಯತ್ನಾಳ್ ಸಾಲು ಸಾಲು ಪ್ರಶ್ನೆ

Political News: ವಿಜಯೇಂದ್ರ ಮಾಡಿಸಿದ ಸರ್ವೆ ಬಗ್ಗೆ ವ್ಯಂಗ್ಯವಾಡಿದ ಬಸನಗೌಡ ಪಾಟೀಲ್ ಯತ್ನಾಳ್

ನೆಹರೂರವರು ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿದ್ದರು: ಸಿಎಂ ಸಿದ್ದರಾಮಯ್ಯ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In