ಮೇಷರಾಶಿ
ಕೈಗೊಂಡ ಕಾರ್ಯ ಸಫಲವಾಗುವುದು. ಅಡ್ಡಿಗಳು ನಿವಾರಣೆ. ಹಣದ ಕೊರತೆ ಕಾಡಿದರೂ ಅದನ್ನು ನಿಭಾಯಿಸುವಿರಿ. ಕೌಟುಂಬಿಕ ನೆಮ್ಮದಿ. ನಿಮ್ಮ ತೂಕದ ಮೇಲೆ ನಿಗಾ ಇರಿಸಿ, ಒಡಹುಟ್ಟಿದವರೊಬ್ಬರು ನಿಮ್ಮಿಂದ ಹಣವನ್ನು ಎರವಲು ಪಡೆಯಬಹುದು. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ, ಸಹೋದ್ಯೋಗಿ ಗಳ ಸಹಕಾರ ದೊರೆಯಲಿದೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಮುಂಗೋಪವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.
ವೃಷಭರಾಶಿ
ನಿಮ್ಮ ಕೆಲಸಕ್ಕೆ ನೀವು ಒಳ್ಳೆ ಹೆಸರು ಪಡೆಯುವಿರಿ. ಅದಕ್ಕೆ ಕಾರಣ ಕೆಲಸದಲ್ಲಿ ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆ. ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ. ದೀರ್ಘಕಾಲದಿಂದ ಅನುಭವಿಸುತ್ತಿರುವ ಒತ್ತಡಗಳಿಂದ ಪರಿಹಾರ ಸಿಗುತ್ತದೆ. ಜೀವನ ಶೈಲಿಯನ್ನು ಬದಲಾಯಿಸಿ, ಪರಿಚಿತ ಜನರಿಂದ ಹೊಸ ಆದಾಯದ ಮೂಲ ಸೃಷ್ಟಿಯಾಗುತ್ತವೆ. ಮಕ್ಕಳ ಆರೋಗ್ಯ ಚಿಂತೆಯನ್ನು ಮೂಡಿಸುತ್ತದೆ, ಸಹೋದರರ ಜೊತೆಗೆ ಸಮಯವನ್ನು ಕಳೆಯುವಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿ.
ಮಿಥುನರಾಶಿ
ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಸಿ. ಯಾವುದೋ ಒಂದಕ್ಕೆ ಆದ್ಯತೆ ನೀಡಿ ಮತ್ತೊಂದು ಕಡೆಗಣಿಸುವುದು ಸರಿಯಲ್ಲ. ಅನಗತ್ಯ ಚಿಂತೆಯನ್ನು ದೂರ ಮಾಡಿಕೊಳ್ಳಿ, ಸಂತೋಷವು ನಿಮಗೆ ನಿರಾಸೆಗಿಂತ ಹೆಚ್ಚಿನ ಸಂತಸವನ್ನು ತರಲಿದೆ, ಹೊಸ ಉದ್ಯೋಗದಲ್ಲಿ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆಯನ್ನು ಪಡೆಯಿರಿ, ರುಚಿಯಾದ ಖಾದ್ಯಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಿ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ.
ಕರ್ಕಾಟಕರಾಶಿ
ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಕೆಲವರ ಅಸಹಕಾರವನ್ನೂ ಎದುರಿಸುವಿರಿ. ಸಣ್ಣ ಮಟ್ಟಿನ ಸಂಘರ್ಷ ನಡೆದೀತು. ತಾಳ್ಮೆ ಕಾಯ್ದುಕೊಳ್ಳಿ. ದೈಹಿಕ ಕಾಯಿಲೆಗಳಿಂದ ಚೇತರಿಕೆ ಕಾಣುವಿರಿ, ಆರ್ಥಿಕ ಸಹಾಯವನ್ನು ಪಡೆಯುವಿರಿ, ಅನಿರೀಕ್ಷಿತವಾಗಿ ಶುಭ ಸುದ್ದಿಯೊಂದನ್ನು ಕೇಳುವಿರಿ, ಕುಟುಂಬಸ್ಥರ ಜೊತೆಗೆ ಪ್ರವಾಸ ಹೋಗುವ ಸಾಧ್ಯತೆಯಿದೆ, ಪಾಲುದಾರರು ನಿಮ್ಮೊಂದಿಗೆ ಹೊಂದಾಣಿಕೆಯಿಂದ ವ್ಯವಹರಿಸಲಿದ್ದಾರೆ.
ಸಿಂಹರಾಶಿ
ಇಂದು ಕೆಲವು ಕೆಲಸ ಗಳನ್ನು ಪೂರೈಸಬೇಕಾದ ಒತ್ತಡಕ್ಕೆ ಸಿಲುಕುವಿರಿ. ಆದರೆ ಅವನ್ನೆಲ್ಲ ಸಫಲವಾಗಿ ಮಾಡಲೂ ಶಕ್ತರಾಗುವಿರಿ. ಸೂಕ್ತ ನೆರವೂ ಲಭ್ಯ. ಉತ್ತಮ ಪ್ರಯೋಜನವನ್ನು ಪಡೆಯಲು ಹಿರಿಯರ ಸಲಹೆಯನ್ನು ಆಲಿಸಿ, ಸಣ್ಣ ಪ್ರಮಾಣದ ವ್ಯವಹಾರ ನಡೆಸುತ್ತಿರುವವರು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ, ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ, ಮಕ್ಕಳೊಂದಿಗೆ ಸಮಯವನ್ನು ಕಳೆಯುವಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿ ಮನಸಿಗೆ ನೆಮ್ಮದಿಯನ್ನು ತರಲಿದೆ.
ಕನ್ಯಾರಾಶಿ
ನಿಮಗಿಂದು ನಿರಾಳ ದಿನ. ಒತ್ತಡಗಳು ಕಾಡುವುದಿಲ್ಲ. ಕೆಲಸವನ್ನು ಮುಗಿಸಿದ ತೃಪ್ತಿ. ಮನೆಯಲ್ಲಿ ಎಲ್ಲವೂ ಹಿತಕರ, ಸೌಹಾರ್ದಕರ.ವ್ಯಕ್ತಿತ್ವವನ್ನು ಸುಧಾರಿಸಲು ಗಂಭೀರ ಪ್ರಯತ್ನವನ್ನು ಮಾಡಿ, ನಿಮ್ಮ ತಂದೆ ಸಲಹೆ ಕೆಲಸದ ಸ್ಥಳದಲ್ಲಿ ಪ್ರಯೋಜನಕ್ಕೆ ಬರಲಿದೆ, ಮಕ್ಕಳು ಹಾಗೂ ಸ್ನೇಹಿತರ ಜೊತೆಯಲ್ಲಿ ಸಮಯವನ್ನು ಕಳೆಯುವಿರಿ, ನಿಮ್ಮ ಶಕ್ತಿಯನ್ನು ವೃದ್ದಿಸಲು ಪ್ರಯತ್ನಿಸುವಿರಿ, ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.
ತುಲಾರಾಶಿ
ಪ್ರಾಮಾಣಿಕತೆಯಿಂದ ನಿಮ್ಮ ಕೆಲಸ ನಿರ್ವಹಿಸಿ. ಸೂಕ್ತ ಫಲ ಸಿಕ್ಕಿಯೇ ಸಿಗುವುದು. ಇತರರ ಜತೆ ನಿಮ್ಮ ಸ್ಥಾನಮಾನ ಹೋಲಿಕೆ ಮಾಡದಿರಿ. ಅನುಕರಣೆ ಬೇಡ. ನಿಮ್ಮ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಏಕೆಂದರೆ ಹೆಚ್ಚಿನ ಸಂತೋಷವು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಷೇರು ಮಾರುಕಟ್ಟೆಯ ಹೂಡಿಕೆಯಿಂದ ನಷ್ಟ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಶಾಪಿಂಗ್ ಮಾಡುವ ಸಾಧ್ಯತೆ,
ವೃಶ್ಚಿಕರಾಶಿ
ವೃತ್ತಿಯಲ್ಲಿ ಎಲ್ಲರ ವಿಶ್ವಾಸ ಗಳಿಸುವಿರಿ. ಇದರಿಂದ ನಿಮ್ಮ ಕೆಲಸಕ್ಕೆ ಮಾನ್ಯತೆ ದೊರಕುವುದು. ನಿಮಗೆ ನೆರವು ನೀಡಿದವರ ಕುರಿತು ಕೃತಜ್ಞತೆಯಿರಲಿ. ತಾಳ್ಮೆಯಿಂದಿರಿ, ನಿರಂತರ ಪ್ರಯತ್ನ ಮತ್ತುಸಾಮಾನ್ಯ ಜ್ಞಾನ ಯಶಸ್ಸನ್ನು ಖಾತರಿ ಪಡಿಸುತ್ತದೆ. ಹೊಸ ಸಂಬಂಧಗಳು ಬೆಸೆಯಲಿದೆ, ದೂರದ ಊರುಗಳಿಂದ ಬಂಧುಗಳ ಆಗಮನ ಸಾಧ್ಯತೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಬಿಡುವಿನ ಸಮಯವನ್ನು ಸಂಗಾತಿಯೊಂದಿಗೆ ಕಳೆಯುವಿರಿ. ದಿನಾಂತ್ಯಕ್ಕೆ ಶುಭ ಸುದ್ದಿ.
ಧನಸುರಾಶಿ
ಸೂಕ್ಷ್ಮಸಂವೇದಿಯಾಗಿ ವರ್ತಿಸುವಿರಿ. ಉದ್ವಿಗ್ನತೆ, ಆತಂಕ ಕಾಡಬಹುದು.ಕೆಲವು ವಿಷಯಗಳು ನೀವು ಬಯಸಿದಂತೆ ಸಾಗುವುದಿಲ್ಲ. ನಿಮ್ಮ ಕೆಲಸಕ್ಕಾಗಿ ಇತರರನ್ನು ಒತ್ತಾಯಿಸಬೇಡಿ, . ಇತರರ ಆಸಕ್ತಿ ನಿಮಗೆ ಅಪರಿಮಿತ ಸಂತೋಷವನ್ನು ನೀಡುತ್ತದೆ. ಆಪ್ತ ಸ್ನೇಹಿತರ ಸಹಾಯದಿಂದ, ಉದ್ಯಮಿಗಳು ಆರ್ಥಿಕ ಲಾಭ ಪಡೆಯಲಿದ್ದಾರೆ. ದೂರದ ಸಂಬಂಧಿಯಿಂದ ಅನಿರೀಕ್ಷಿತ ಸುದ್ದಿಕೇಳುವಿರಿ, ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ.
ಮಕರರಾಶಿ
ಚಿಂತೆಗಳನ್ನೆಲ್ಲ ಮರೆತು ನೆಮ್ಮದಿಯಾಗಿ ಕಳೆಯಬೇಕೆಂದಿದ್ದರೆ ಈ ದಿನ ನಿಮಗೆ ಸುದಿನ. ಪ್ರವಾಸ ಹೊರಡಲೂ ಕಾಲ ಸೂಕ್ತವಾಗಿದೆ. ಖರ್ಚು ಹೆಚ್ಚಬಹುದು. ಸಭ್ಯ ನಡವಳಿಕೆ ಪ್ರಶಂಸೆಗೆ ಪಾತ್ರವಾಗಲಿದೆ, ಸಾರ್ವಜನಿಕವಾಗಿ ಸಮ್ಮಾನಗಳು ದೊರೆಯಲಿದೆ, ಹಣವನ್ನು ಸುರಕ್ಷಿತವಾಗಿ ಸಂರಕ್ಷಿಸಿಡಿ, ಸಾಮಾಜಿಕ ಕಾರ್ಯಗಳು ಹೆಚ್ಚು ಆಹ್ಲಾದಕರವಾಗಿ ಇರಲಿದೆ, ಅನಗತ್ಯ ತೊಂದರೆಗಳಿಂದ ದೂರವಿರಿ, ವೈವಾಹಿಕ ಜೀವನು ಸುಂದರವಾಗಿರಲಿದೆ, ನೀವಿಂದು ಹೆಚ್ಚು ಭಾವುಕರಾಗಿರುತ್ತೀರಿ.
ಕುಂಭರಾಶಿ
ತುಸು ಆರೋಗ್ಯ ಸಮಸ್ಯೆ ಕಾಡಬಹುದು. ಹಾಗೆಂದು ಗಾಬರಿ ಪಡುವ ಅಗತ್ಯ ಬೀಳಲಾರದು. ಮನೆಯಲ್ಲಿ ಸೌಹಾರ್ದ ವಾತಾವರಣ. ಆರೋಗ್ಯವು ಚೆನ್ನಾಗಿರಲಿದೆ, ಅಜ್ಞಾತ ಮೂಲದಿಂದ ಹಣಕಾಸಿನ ನೆರವು ಪಡೆಯಲಿದ್ದೀರಿ, ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ, ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ, ಕುಟುಂಬದ ಸದಸ್ಯರ ಆರೋಗ್ಯವನ್ನು ತಪಾಸಣೆ ನಡೆಸಿ, ದೂರ ಪ್ರಯಾಣ ನಿಮಗೆ ಅನೇಕ ಲಾಭವನ್ನು ತರಲಿದೆ.
ಮೀನರಾಶಿ
ನಿಮ್ಮ ಕೆಲಸದಲ್ಲಿ ಹೆಚ್ಚು ಎಚ್ಚರ ವಹಿಸಿ. ತಪ್ಪುಗಳು ಸಂಭವಿಸಬಹುದು.ಇತರರ ಮಾತಿಗೆ ಆಹಾರವಾಗುವಿರಿ. ತಾಳ್ಮೆ ಕಾಯ್ದುಕೊಳ್ಳಿ. ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಲಿವೆ, ಆಕ್ರಮಿಸಿಕೊಳ್ಳಬಹುದು. ತಾಯಿಯ ಕಡೆಯಿಂದ ವಿತ್ತೀಯ ಲಾಭ ಸಾಧ್ಯತೆಯಿದೆ. ಪರಿಶ್ರಮ ಹಾಗೂ ಸ್ವತಃ ಪ್ರೇರಣೆಯಿಂದ ಮಹತ್ವದ ಸಾಧನೆಯೊಂದನ್ನು ಮಾಡಲಿದ್ದೀರಿ, ಸಹೋದ್ಯೋಗಿ ಗಳ ಜೊತೆಗೆ ಹೊಂದಾಣಿಕೆಯಿಂದ ವರ್ತಸಿ. ಮಕ್ಕಳ ವಿದ್ಯಾಭ್ಯಾಸದ ಹೆಸರಲ್ಲಿ ಶುಭ.
Discussion about this post