ತೈಲ ಬೆಲೆ ಏರಿಕೆಯಿಂದಾಗಿ ಬೇಸತ್ತ ಜನಕ್ಕೆ ಕೇಂದ್ರ ಸರ್ಕಾರ ದೀಪಾವಳಿಗೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಸುವ ಮೂಲಕ ಗಿಫ್ಟ್ ನೀಡಿದೆ. ಇದರ ಬೆನ್ನೆಲ್ಲೇ ಬಿಜೆಪಿ ಆಡಳಿತ ರೂಢ ರಾಜ್ಯಗಳಾದ, ಅಸ್ಸಾಮ್, ತ್ರಿಪುರ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ ಹಾಗೂ ಉತ್ತರಖಂಡ ರಾಜ್ಯಗಳು ತೈಲ ಬೆಲೆ ಇಳಿಸಿ ಜನರಿಗೆ ದೀಪಾವಳಿ ಸಿಹಿಸುದ್ದಿ ನೀಡಿದೆ.
ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್ ಮೇಲೆ 5 ರೂ ಲೀಟರ್ ಡೀಸೆಲ್ ಮೇಲೆ 10 ರೂ ಇಳಿಸಿದೆ. ಇದರಿಂದ, ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಅಂದಾಜು 95.05, ಡೀಸೆಲ್ 81.50 ರೂ. ಆಗಿದೆ ಇದೆ.
ಅಸ್ಸಾಮ್, ತ್ರಿಪುರ, ಮಣಿಪುರ, ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚವರಿಯಾಗಿ 7 ರೂ. ಇಳಿಸಿದೆ. ಕೇಂದ್ರ ಸರ್ಕಾರದ ಈ ತೀರ್ಮಾನವು ದೀಪಾವಳಿಯ ದಿನವಾದ ಗುರುವಾರದಿಂದ ಜಾರಿಯಾಗಲಿದೆ.
ಆಕಾಶದಲ್ಲಿ ಹಾರಾಡುತ್ತಿದ್ದ ತೈಲಬೆಲೆಯ ಮೇಲಿನ ತೆರಿಗೆ ಇಳಿಸುವಂತೆ ಎಲ್ಲಾ ರಾಜ್ಯಗಳು ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿಸಲ್ಲಿಸಿದ್ದವು. ಪೆಟ್ರೋಲ್, ಡೀಸೆಲ್ ಬೆಲೆ 100ರೂ. ದಾಟಿದ ನಂತರ ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿತ್ತು. ನವೆಂಬರ್ 1 ರಂದು ರಾಹುಲ್ ಗಾಂಧಿ, ಬಿಜೆಪಿ ಜನರ ತೆರಿಗೆಯನ್ನು ಪಿಕ್ ಪಾಕೆಟ್ ಮಾಡುವ ಪಕ್ಷ ಎಂದು ಟ್ವಿಟರ್ ನಲ್ಲಿ ಲೇವಡಿ ಮಾಡಿದ್ದರು.
ಕೊನೆಗೂ ಜನರ, ಸರ್ಕಾರಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ದೀಪಾವಳಿಯಂದು ಎಕ್ಸೈಸ್ ಸುಂಕವನ್ನು ಇಳಿಸಿ ಸ್ವಲ್ಪ ಮಟ್ಟಿನ ನಿರಾಳಕ್ಕೆ ಕಾರಣವಾಗಿದೆ.
10 BJP Ruled States Cuts Fuel Price
ಇದನ್ನೂ ಓದಿ: Price reduction: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಬಾರಿ ಇಳಿಕೆ
Discussion about this post