ಉತ್ತರ ಪ್ರದೇಶ: ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ದಿನವಾದ ಅಕ್ಟೋಬರ್ 2 ರೊಳಗೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವಂತೆ, ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರು ಒಕ್ಕೂಟ ಸರ್ಕಾರವನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮಂಗಳವಾರ ಒತ್ತಾಯಿಸಿದ್ದಾರೆ.
ಒಂದು ಪಕ್ಷ ಒಕ್ಕೂಟ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಸರಯೂ ನದಿಯಲ್ಲಿ ‘ಜಲ ಸಮಾಧಿ’ ಆಗುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಇದರ ಜೊತೆಗೆ, ಭಾರತ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ರಾಷ್ಟ್ರೀಯತೆಯನ್ನು ಅಧೀಕೃತವಾಗಿ ಕೊನೆಗೊಳಿಸಬೇಕು ಎಂದು ಸಹ ಅವರು ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪರಮಹಂಸ ಆಚಾರ್ಯ ಅವರ ಬೇಡಿಕೆಯನ್ನು ಬೆಂಬಲಿಸಿ, ‘ಹಿಂದೂ ಸನಾತನ ಧರ್ಮ ಸಂಸದ್’ ಅನ್ನು ಸಂಘಟಿಸುವುದಾಗಿ ಅಯೋಧ್ಯೆಯ ಸ್ವಾಮೀಜಿಗಳ ಸಮುದಾಯ ಹೇಳಿದೆ.
ಪರಮಹಂಸ ಆಚಾರ್ಯ ಅವರು ಈ ಹಿಂದೆ ಕೂಡಾ 15 ದಿನಗಳ ಕಾಲ ಆಮರಣಾಂತ ಉಪವಾಸವನ್ನು ಕೈಗೊಂಡಿದ್ದರು. ಆಗ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ತೆರಳಿ ಅವರಿಗೆ ಭರವಸೆ ನೀಡಿದ ನಂತರ ಉಪವಾಸವನ್ನು ಕೊನೆಗೊಳಿಸಿದ್ದರು.

























Discussion about this post