ಯುಎಇ (United Arab Emirates )ನಲ್ಲಿ ದುಬೈ ಎಕ್ಸ್ಪೋ 2020 (Dubai Expo 2020) ಬೃಹತ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಕ್ಸ್ ಪೋದಲ್ಲಿ ಬೃಹತ್ ಮೊನಾಕೊ ನಿರ್ಮಾಣವಾಗುತ್ತಿದ್ದು, ನೂರಾರು ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದ ಸಂದರ್ಭದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿ, 70 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಯುಎಇ (United Arab Emirates )ನಲ್ಲಿ ದುಬೈ ಎಕ್ಸ್ಪೋ 2020 (Dubai Expo 2020)ಕ್ಕಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ನಿರ್ಮಾಣ ಕಾರ್ಯದ ವೇಳೆಯಲ್ಲಿ ನಡೆದ ಅವಘಡದಿಂದಾಗಿ ಮೂವರು ಸಾವನ್ನಪ್ಪಿದ್ದು, 72 ಮಂದಿ ಗಾಯಗೊಂಡಿರುವ ಕುರಿತು ದುಬೈ ಎಕ್ಸ್ಪೋ ಪ್ರಕಟಣೆಯಲ್ಲಿ ತಿಳಿಸಿದೆ.
ದುಬೈ ಎಕ್ಸ್ಪೋ ನಡೆಯುತ್ತಿರುವ ಸ್ಥಳದಲ್ಲಿ ಸುಮಾರು 247 ಗಂಟೆಗಳ ಕಾಲ ಕೆಲಸವನ್ನು ಪೂರ್ಣಗೊಳಿಸಲಾಗಿದೆ.
ಘಟನೆಯ ಬೆನ್ನಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ನ ಮಾನವಹಕ್ಕುಗಳ ಕುರಿತ ದಾಖಲೆ ಹಾಗೂ ವಲಸೆ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಕುರಿತು ಯುರೋಪಿಯನ್ ಪಾರ್ಲಿಮೆಂಟ್ ಟೀಕಿಸಿದೆ. ಅಲ್ಲದೇ ಆರು ತಿಂಗಳ ವಿಶ್ವಮಟ್ಟದ ದುಬೈ ಮೇಳವನ್ನು ಬಹಿಷ್ಕರಿಸುವಂತೆಯೂ ಕರೆ ನೀಡಿದೆ.
Discussion about this post