ಚಿಕ್ಕಮಗಳೂರು: ಕಂದಾಯ ಇಲಾಖೆಯ ದಾಖಲೆ ಪತ್ರಗಳ ಕೊಠಡಿ ನಿರ್ವಹಣೆ ಅತ್ಯಂತ ಕ್ಲೀಷ್ಟಕರವಾದ ಕಾರ್ಯವಾಗಿದ್ದು, ಚಿಕ್ಕಮಗಳೂರು ತಾಲ್ಲೂಕು ಕಚೇರಿ ದಾಖಲೆ ಪತ್ರ ಕೊಠಡಿ ಯನ್ನು ಉತ್ತಮ ನಿರ್ವಹಣೆ ಮಾಡಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಜಿಲ್ಲಾಧಿಕಾರಿ ಕೆ. ಎನ್.ರಮೇಶ್ ತಿಳಿಸಿದರು.
ನಗರದ ಲೈಫ್‌ಲೈನ್ ಫೀಡ್ ಸಂಸ್ಥೆಯ ನೆರವಿನಿಂದ ತಾಲ್ಲೂಕು ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ದಾಖಲೆ ಪತ್ರಗಳನ್ನು ಇರಿಸುವ ರ್‍ಯಾಕ್ ಕೊಠಡಿಯನ್ನು ಉದ್ಘಾ ಟಿಸಿ ಮಾತನಾಡಿದರು. ಲೈಫ್‌ಲೈನ್ ಫೀಡ್ ಸಂಸ್ಥೆಯ ಮುಖ್ಯಸ್ಥ ಕಿಶೋರ್ ಕುಮಾರ್ ಹೆಗ್ಡೆಯವರು ಕೋವಿಡ್ ಸಂದರ್ಭ ಸೇರಿದಂತೆ ಅನೇಕ ಬಾರೀ ಜಿಲ್ಲಾಡಳಿತದ ನೆರವಿಗೆ ಬಂದಿದ್ದಾರೆ ಅವರ ಸಾರ್ವಜನಿಕ ಕಾರ್ಯ ಶ್ಲಾಘನೀಯ ಎಂದರು.
ತಾಲ್ಲೂಕು ಕಚೇರಿಯಲ್ಲಿ ಅತ್ಯಂತ ಹಳೇಯ ಕಡತಗಳು ಇವೆ. ಅವುಗಳ ನಿರ್ವಹಣೆ ಬಹು ಮುಖ್ಯ, ದಾಖಲೆಗಳು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹಾಗೂ ಸಾರ್ವಜನಿಕರ ಸಮಯ ಉಳಿತಾಯವಾಗು ತ್ತದೆ. ಈ ನಿಟ್ಟಿ ನಲ್ಲಿ ದಾಖಲೆ ಪತ್ರಗಳ ಕೊಠಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಲೈಫ್‌ಲೈನ್ ಫೀಡ್ ಸಂಸ್ಥೆಯ ಮುಖ್ಯಸ್ಥ ಕಿಶೋರ್‌ಕುಮಾರ್ ಹೆಗ್ಡೆ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ದಾಖಲೆ ಕೊಠಿಯಲ್ಲಿ ರ್‍ಯಾಕ್ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ತಮ್ಮ ಗಮ ನಕ್ಕೆ ಬಂದ ತಕ್ಷಣ ಸಂಸ್ಥೆಯಿಂದ ನೂತನ ರ್‍ಯಾಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಸಂಸ್ಥೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಇಲಾ ಖೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲವೊಂದು ನೆರವುಗಳನ್ನು ನೀಡು ತ್ತಾ ಬಂದಿದೆ. ಅದನ್ನು ಸರಿಯಾಗಿ ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿ ದರು.
ಅನೇಕ ಕಾರ್ಪೋರೇಟ್ ಸಂಸ್ಥೆಗಳು ಸಾರ್ವಜನಿಕರ ನೆರವಿಗೆ ಮುಂದಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಏನೇನು ಸಮಸ್ಯೆ ಇದೆ ಎಂಬುದನ್ನು ಕಾರ್ಪೋರೇಟ್ ಸಂಸ್ಥೆಗಳ ಗಮನಕ್ಕೆ ಅಧಿಕಾರಿಗಳು ತಂದಲ್ಲಿ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಅನುಕೂಲ ವಾಗುವ ನೆರವು ಪಡೆದುಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ| ಕೆ.ಜೆ.ಕಾಂತರಾಜ್ ಸೇರಿದಂತೆ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

























Discussion about this post