ಚಿಕ್ಕಮಗಳೂರು: ನಗರದ ವಿವಿಧ ಎ.ಟಿ.ಎಂ ಯಂತ್ರಗಳನ್ನು ಹಾನಿಗೊಳಿಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಬಗ್ಗೆ ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ. ನಗರದ ಮಲ್ಲಂದೂರು ರಸ್ತೆ, ಎ.ಐ.ಟಿಸರ್ಕಲ್ , ಶಂಕರ್ ಪುರ ಬಡಾವಣೆಗಳಲ್ಲಿರು ಎ.ಟಿ.ಎಂ ಯಂತ್ರಗಳನ್ನು ಹಾನಿಗೊಳಿಸಿ ಹಣ ಲಪಟಾಯಿಸಲು ಬುಧವಾರದಿಂದ ವಿಫಲಯತ್ನಗಳು ಮುಂದುವರೆದಿವೆ .
ಬುಧವಾರ ಶಂಕರಪುರ ಬಡಾವಣೆಯಲ್ಲಿರುವ ಎಸ್.ಬಿ.ಐ ಎ.ಟಿ.ಎಂ ಯಂತ್ರ , ಗುರುವಾರ ಮಲ್ಲಂದೂರು ರಸ್ತೆಯಲ್ಲಿರುವ ಕೆನರಾಬ್ಯಾಂಕ್ ಹಾಗೂ ಶುಕ್ರವಾರ ಹೌಸಿಂಗ್ ಬೋರ್ಡ ಮತ್ತು ಎ.ಐ.ಟಿ ವೃತ್ತದಲ್ಲಿರುವ ಯಂತ್ರಗಳನ್ನು ಹಾನಿ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮನೆಗಳ್ಳತನ ,ಅಂಗಡಿಗಳಿಗೆ ಕನ್ನ, ಹಾಕುವ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ಸುಲಭವಾಗಿ ಗಂಟು ಹೊಡೆಯಲು ಎ.ಟಿ.ಎಂ ಗಳನ್ನು ಒಡೆಯುವ ವಿಫಲಯತ್ನಗಳು ನಡೆದಿರುವ ಬಗ್ಗೆ ಮಾಹಿತಿಯಿದ್ದು, ಪೋಲಿಸ್ ಇಲಾಖೆ ಈ ಬಗ್ಗೆ ಕೂಡಲೇ ನಿಗಾವಹಿಸಿ ಅಗತ್ಯ ಕ್ರಮ ಕೈಗೊಳ್ಳ ಬೇಕಿದೆ.

























Discussion about this post