ಮೇಷರಾಶಿ
ಸಾಂಸಾರಿಕವಾಗಿ ನೆಮ್ಮದಿ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಯತ್ನ ಕಾರ್ಯಗಳಲ್ಲಿ ಜಯ, ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ. ನಿರಾಳವಾಗಿರಲು ಇಂದು ನಿಮಗೆ ಸಾಧ್ಯ ವಾಗದು. ಏನೇನೋ ಸಮಸ್ಯೆಗಳು, ತಲೆಬೇನೆ ಕಾಡುತ್ತವೆ. ಕೌಟುಂಬಿಕ ಪರಿಸರ ಕೂಡ ನೆಮ್ಮದಿ ತರುವುದಿಲ್ಲ.
ವೃಷಭರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೌಟುಂಬಿಕವಾಗಿ ನೆಮ್ಮದಿ, ಕೋಪ ಜಾಸ್ತಿ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಪಾಪಬುದ್ಧಿ, ಆರ್ಥಿಕ ಸುಧಾರಣೆ. ವೃತ್ತಿ ಕ್ಷೇತ್ರದಲ್ಲಿ ಸವಾಲುಗಳು. ಕಾರ್ಯ ಸುಗಮವಾಗಿ ಸಾಗುವುದಿಲ್ಲ. ಕೆಲವು ಅಡೆತಡೆ ಎದುರಿಸುವಿರಿ. ತಲೆನೋವು, ಬೆನ್ನುನೋವು ಕಾಡೀತು.
ಮಿಥುನರಾಶಿ
ದೂರ ಪ್ರಯಾಣ, ಸಹೋದ್ಯೋಗಿಗಳ ಸಹಕಾರ, ಹಿರಿಯರ ಸಲಹೆಯನ್ನು ಆಲಿಸಿ, ಮನಃಶಾಂತಿ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಒದಗುತ್ತವೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. ಅಜೀರ್ಣ ಸಮಸ್ಯೆ ಕಾಡಬಹುದು. ಆಹಾರ ದಲ್ಲಿ ಹಿತಮಿತವಿರಲಿ.
ಕರ್ಕಾಟಕ ರಾಶಿ
ಹೊಸ ಹೂಡಿಕೆಯಿಂದ ಲಾಭ, ಸರಕಾರಿ ಕಾರ್ಯಗಳಲ್ಲಿ ಗೆಲುವು, ಪರರಿಗೆ ವಂಚಿಸುವುದು, ಪಾಪಬುದ್ಧಿ, ದಾರಿದ್ರ್ಯ, ಋಣಭಾದೆ, ಅಶುಭ ಫಲ. ವೃತ್ತಿಯಲ್ಲಿ ಹಿತಕರ ದಿನವಲ್ಲ. ಸಹೋದ್ಯೋಗಿಗಳ ಜತೆ ವಿರಸ. ಕಾರ್ಯದೊತ್ತಡ. ಇತರರ ಕೆಲಸದ ಹೊಣೆ ನಿಮ್ಮ ಮೇಲೆ ಬೀಳುತ್ತದೆ.
ಸಿಂಹ ರಾಶಿ
ವ್ಯವಹಾರಿಕ ಕ್ಷೇತ್ರದಲ್ಲಿ ಯಶಸ್ಸು, ಹಣಕಾಸಿನ ವಿಚಾರದಲ್ಲಿ ಚೇತರಿಕೆ, ಸ್ನೇಹಿತರಿಂದ ಸಹಾಯ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಅಲ್ಪ ಲಾಭ, ಮನಶಾಂತಿ. ಕಾಲಮಿತಿಯಲ್ಲಿ ಕೆಲಸ ಮುಗಿದು ಮನಸ್ಸಿಗೆ ನಿರಾಳತೆ. ಹಣಕಾಸು ಲಾಭ. ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಶುಭ ಸಮಾರಂಭಕ್ಕೆ ಕಾಲ ಸನ್ನಿಹಿತ.
ಕನ್ಯಾ ರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಉದ್ಯೋಗದಲ್ಲಿ ಬಡ್ತಿ, ಹಳೆಯ ಹೂಡಿಕೆ ಇಂದು ಲಾಭವನ್ನು ತರಲಿದೆ, ಧನಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವಿವಾಹಕ್ಕಾಗಿ ಪ್ರಯಾಣ. ನಿಮಗೆ ಪೂರಕವಾದ ದಿನ. ಎಲ್ಲ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ, ಕೌಟುಂಬಿಕ ಸಹಕಾರ.
ತುಲಾ ರಾಶಿ
ಸಹೋದ್ಯೋಗಿಗಳಿಂದ ಕಿರಿಕಿರಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಅಧಿಕಾರಿಗಳಲ್ಲಿ ಕಲಹ, ಶತ್ರುಗಳಿಂದ ತೊಂದರೆ, ನೀಚ ಜನರ ಸಹವಾಸ, ಅನಗತ್ಯ ತಿರುಗಾಟ. ಕೌಟುಂಬಿಕವಾಗಿ ಸಂತೋಷದ ದಿನ. ಎಲ್ಲರೊಂದಿಗೆ ಆತ್ಮೀಯ ಒಡನಾಟ. ಆದರೆ ಆರ್ಥಿಕವಾಗಿ ಹಿನ್ನಡೆ ಅನುಭವಿಸುವಿರಿ. ಧನನಷ್ಟ ಸಂಭವಿಸೀತು.
ವೃಶ್ಚಿಕ ರಾಶಿ
ಸಾಲಗಾರರ ಕಿರಿಕಿರಿ, ವ್ಯವಹಾರಿಕವಾಗಿ ಚೇತರಿಕೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಸಲ್ಲದ ಅಪವಾದ, ಭೂಮಿ ಕಳೆದುಕೊಳ್ಳುವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು. ಕೆಲವು ಪ್ರಮುಖ ನಿರ್ಧಾರ ತಾಳಬೇಕಾಗುವುದು. ಕೌಟುಂಬಿಕ ನಿರ್ಧಾರವು ತುಸು ಬಿಕ್ಕಟ್ಟಿಗೆ ಕಾರಣವಾದೀತು. ಸಂಧಾನಕ್ಕೆ ಸಿದ್ಧರಾಗಿ.
ಧನಸ್ಸು ರಾಶಿ
ಹೊಸ ಹೂಡಿಕೆ ಸದ್ಯಕ್ಕೆ ಬೇಡ, ಹಿರಿಯರ ಸಲಹೆಯನ್ನು ಆಲಿಸಿ, ಸ್ವಜನ ವಿರೋಧ, ಅಕಾಲ ಭೋಜನ, ಸ್ಥಳ ಬದಲಾವಣೆ, ಆಲಸ್ಯ ಮನೋಭಾವ, ಸಾಧಾರಣ ಫಲ. ವೃತ್ತಿಯಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ ಎದುರಿಸುವಿರಿ. ಪ್ರತಿಯೊಂದು ಮಾತನ್ನೂ ಅಳೆದುತೂಗಿ ಮಾತನಾಡಿ. ಸಂಬಂಧ ಕೆಡದಂತೆ ನೋಡಿಕೊಳ್ಳಿ.
ಮಕರ ರಾಶಿ
ಆರೋಗ್ಯದಲ್ಲಿ ಚೇತರಿಕೆ, ಧಾರ್ಮಿಕ ಕಾರ್ಯಗಳಲ್ಲಿ ಗೆಲುವು, ಸೇವಕರಿಂದ ಸಹಾಯ, ಐಶ್ವರ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ, ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಯಶಸ್ಸು ಸಾಧಿಸಬೇಕಾದರೆ ತಾಳ್ಮೆ ಅವಶ್ಯ. ಇದನ್ನು ನೀವು ಅರಿಯಬೇಕು. ದುಡುಕಿನ ಕಾರ್ಯಕ್ಕೆ ಮುಂದಾಗಬೇಡಿ. ಅದರಿಂದ ಹಾನಿ.
ಕುಂಭ ರಾಶಿ
ಅವಿವಾಹಿತರಿಗೆ ವಿವಾಹ ಭಾಗ್ಯ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ, ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಅಧಿಕ ಖರ್ಚು, ಮನಃಸ್ತಾಪ, ದಿನಾಂತ್ಯಕ್ಕೆ ಶುಭವಾರ್ತೆ. ನೆರೆಕರೆಯಿಂದ ಕಿರಿಕಿರಿ ಅನುಭವಿಸುವಿರಿ. ನೀವು ಸಹನೆ ಕಳಕೊಳ್ಳದಿರಿ. ಸಂಘರ್ಷವು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಆರ್ಥಿಕ ಮುಗ್ಗಟ್ಟು.
ಮೀನ ರಾಶಿ
ಹಳೆಯ ಬಾಕಿ ವಸೂಲಿಯಿಂದ ನೆಮ್ಮದಿ, ಅಲಂಕಾರಿಕ ವಸ್ತುಗಳ ಖರೀದಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಎಲ್ಲಿ ಹೋದರು ಅಶಾಂತಿ, ಧನವ್ಯಯ, ಭಯಭೀತಿ, ದ್ರವ್ಯನಾಶ. ಮನೆಯಲ್ಲಿ ಅಹಿತಕರ ಬೆಳವಣಿಗೆ ಉಂಟಾದೀತು. ಅದನ್ನು ಸಮಾಧಾನ ದಿಂದ ನಿಭಾಯಿಸಿ. ಆರೋಗ್ಯದ ಕುರಿತು ನಿಗಾ ವಹಿಸಿ
Discussion about this post