ಮೇಷರಾಶಿ
ಸಹೋದ್ಯೋಗಿಗಳ ಸಹಕಾರ, ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ, ಕೌಟುಂಬಿಕವಾಗಿ ನೆಮ್ಮದಿ, ಸ್ನೇಹಿತರಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ ಗೌರವ. ನಿಮ್ಮ ಪಾಲಿಗೆ ವಿಶೇಷ ದಿನವಾದೀತು. ಜೀವನವು ಹೊಸ ತಿರುವು ಕಾಣಬಹುದು. ಅಂದುಕೊಂಡ ಕಾರ್ಯ ಸಾಧ್ಯವಾಗಲಿದೆ. ಕೌಟುಂಬಿಕ ಸಂತೋಷ.
ವೃಷಭರಾಶಿ
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ಆರೋಗ್ಯದಲ್ಲಿ ಅನುಕೂಲಕರ ಸ್ಥಿತಿ, ಅಲ್ಪ ಆದಾಯ, ಕುಟುಂಬದಲ್ಲಿ ಕಲಹ, ಮನಸ್ಸಿಗೆ ಚಿಂತೆ, ಋಣಭಾದೆ ಹೆಚ್ಚಾಗುತ್ತೆ. ನಿಮ್ಮ ಕಾರ್ಯಗಳನ್ನು ಕ್ಷಿಪ್ರವಾಗಿ ಮಾಡಿ ಮುಗಿಸುವಿರಿ. ಆರ್ಥಿಕ ಯೋಜನೆಗಳು ಫಲ ನೀಡುತ್ತವೆ. ಮಹತ್ವದ ಕಾರ್ಯವೊಂದಕ್ಕೆ ಚಾಲನೆ ನೀಡಲು ಸಕಾಲ.
ಮಿಥುನರಾಶಿ
ಧನಾಗಮನಕ್ಕೆ ಕೊರತೆಯಿರದು, ದೂರ ಪ್ರಯಾಣ, ಆರೋಗ್ಯದಲ್ಲಿ ಉದಾಸೀನ ಬೇಡ, ಸುಖ ಭೋಜನ ಪ್ರಾಪ್ತಿ, ಪುಷ್ಪಹಾರದಿಗಳಿಂದ ಸನ್ಮಾನ, ವಸ್ತ್ರ ಖರೀದಿ. ವಿವಾಹಿತರಿಗೆ ಪ್ರಮುಖ ಉದ್ದೇಶ ಸಾಫಲ್ಯ. ಅವಿವಾಹಿತರಿಗೆ ಅವರ ಕಾರ್ಯ ಕೈಗೂಡು ವುದು. ಹಣದ ಕೊರತೆ ಕಾಡಿದರೂ, ಖರ್ಚಿಗೆ ಬಾಧೆಯಿಲ್ಲ.
ಕರ್ಕಾಟಕರಾಶಿ
ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ಇರಲಿ, ಹಿರಿಯರ ಮಾರ್ಗದರ್ಶನ ಅಗತ್ಯ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸ್ತ್ರೀ ಲಾಭ, ಬಂಧು ಮಿತ್ರರ ಸಮಾಗಮ, ಸತ್ಕಾರ್ಯಾಸಕ್ತಿ, ಕೀರ್ತಿ ಲಾಭ. ಅನಿರೀಕ್ಷಿತ ವಿದ್ಯಮಾನಗಳಿಂದ ಖರ್ಚು ಅಕ. ಇತರರ ಹಣದ ಅಗತ್ಯ ನೀವು ಪೂರೈಸಬೇಕಾದೀತು. ಕೌಟುಂಬಿಕ ಶಾಂತಿ ಕದಡಬಹುದು.
ಸಿಂಹರಾಶಿ
ಉನ್ನತ ಸ್ಥಾನಕ್ಕಾಗಿ ಹಣಕಾಸು ವ್ಯಯ, ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ದಿ, ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗುರಿ ಸಾಧನೆ, ಅನಾರೋಗ್ಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಿತಶತ್ರುಗಳಿಂದ ತೊಂದರೆ. ನಿಮ್ಮಿಂದ ಕೆಲವು ತಪ್ಪುಗಳಾಗಬಹುದು. ಅದು ನಿಮ್ಮ ವೃತ್ತಿ ಮೇಲೆ ಪರಿಣಾಮ ಬೀರಬಹುದು. ಟೀಕೆ ಎದುರಿಸುವಿರಿ. ಸಾಂಸಾರಿಕ ಸಹಕಾರ.
ಕನ್ಯಾರಾಶಿ
ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿ, ಅನಿರೀಕ್ಷಿತ ಪ್ರಯಾಣ, ವಸ್ತ್ರಭರಣ ಪ್ರಾಪ್ತಿ, ಧರ್ಮಕಾರ್ಯಾಸಕ್ತಿ, ಬಂಧು ಮಿತ್ರರ ಸಹಾಯ, ಆರೋಗ್ಯದಲ್ಲಿ ಚೇತರಿಕೆ. ಮಾನಸಿಕ ಒತ್ತಡ. ಇದು ಆಪ್ತರೊಂದಿಗಿನ ನಿಮ್ಮ ವರ್ತನೆಯಲ್ಲೂ ಪ್ರತಿಫಲಿಸಬಹುದು. ಅವರು ನಿಮ್ಮನ್ನು ತಪ್ಪು ತಿಳಿದುಕೊಳ್ಳುತ್ತಾರೆ. ಮಾನಸಿಕ ಸಂದಿಗ್ಧತೆ.
ತುಲಾರಾಶಿ
ದಾಂಪತ್ಯದಲ್ಲಿ ಅನ್ಯೋನ್ಯತೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು, ಭೂಮಿ, ವಾಹನ ಖರೀದಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಉದ್ಯೋಗದಲ್ಲಿ ಕಿರಿ-ಕಿರಿ, ವಿರೋಧಿಗಳಿಂದ ಕಿರುಕುಳ. ನಿಮ್ಮ ಸಾಮರ್ಥ್ಯವು ನಿಮ್ಮ ನಿರ್ವಹಣೆಯಿಂದ ತಿಳಿದು ಬರುವುದು. ಮಾತಿನಲ್ಲಿ ಅದನ್ನು ಹೇಳಲು ಹೋಗದಿರಿ. ನಿಮ್ಮನ್ನು ವಿರೋಗಳು ತಣ್ಣಗಾಗುವರು.
ವೃಶ್ಚಿಕರಾಶಿ
ಧನಾರ್ಜನೆಯಲ್ಲಿ ಪ್ರಗತಿ, ಹಿರಿಯರ ಆರೋಗ್ಯದಲ್ಲಿ ಕಾಳಜಿ, ದುಷ್ಟ ಜನರ ಸಹವಾಸ, ಯತ್ನ ಕಾರ್ಯದಲ್ಲಿ ವಿಘ್ನ, ಚೋರಾಗ್ನಿ ಭೀತಿ, ಬಂಧು ಮಿತ್ರರಲ್ಲಿ ವಿರಸ. ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಕಡಿಮೆ. ಆದರೆ ಕೌಟುಂಬಿಕವಾಗಿ ಹೆಚ್ಚು ಹೊಣೆಗಾರಿಕೆ. ಕುಟುಂಬದಲ್ಲಿ ಕೆಲವು ವಿಷಯಗಳನ್ನು ಇತ್ಯರ್ಥ ಮಾಡಬೇಕಾಗುವುದು.
ಧನಸ್ಸುರಾಶಿ
ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ಅಗತ್ಯ, ಉತ್ತಮ ವ್ಯಕ್ತಿಗಳ ಜೊತೆಗೆ ಒಡನಾಟ, ಗೃಹೋಪಯೋಗಿ ವಸ್ತುಗಳ ಸಂಗ್ರಹ, ಸಾಧಾರಣ ಪ್ರಗತಿ, ಕಾರ್ಯಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ. ನಿಮ್ಮ ಕ್ಷಿಪ್ರ ಕಾರ್ಯ ದಿಂದ ಕೆಲವು ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಕೌಟುಂಬಿಕ ವಿಚಾರದಲ್ಲಿ ನಿಧಾನಗತಿ ಒಳಿತು, ಅವಸರ ಬೇಡ.
ಮಕರರಾಶಿ
ಉತ್ತಮ ಧನಾಗಮನ ಇದ್ದರೂ ಖರ್ಚಿಗೆ ಹಲವು ದಾರಿ, ಮನೆಯಲ್ಲಿ ಸಂತಸದ ವಾತಾವರಣ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬ ಸೌಖ್ಯ, ಶುಭಕಾರ್ಯದ ಮಾತುಕತೆ, ಸಜ್ಜನರ ಸಹವಾಸದಿಂದ ಕೀರ್ತಿ. ಹಣದ ಹರಿವು ಹೆಚ್ಚಳ. ಉದ್ಯಮದಲ್ಲಿ ಪ್ರಗತಿ. ಸವಾಲಾಗಿ ಕಂಡ ವಿಷಯಗಳು ಸುಗಮವಾಗಿ ಇತ್ಯರ್ಥ ಆಗುತ್ತವೆ. ಸಾಂಸಾರಿಕ ಸಮಾಧಾನ.
ಕುಂಭರಾಶಿ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಉತ್ತಮ ಧನಾರ್ಜನೆಯಿಂದ ವ್ಯವಹಾರದಲ್ಲಿ ಪ್ರಗತಿ, ಸ್ವತಃ ಪರಿಶ್ರಮದಿಂದ ನಿರೀಕ್ಷಿತ ಕಾರ್ಯಸಾಧನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಋಣಭಾದೆ, ಯತ್ನ ಕಾರ್ಯದಲ್ಲಿ ವಿಘ್ನ, ಅಧಿಕ ಖರ್ಚು. ಫಲಪ್ರದ ದಿನ. ನಿಮ್ಮ ಆತ್ಮವಿಶ್ವಾಸ ಹೆಚ್ಚಿ ಸುವಂತಹ ಬೆಳವಣಿಗೆ. ಆರ್ಥಿಕ ಸಮಸ್ಯೆ ನಿವಾರಣೆ. ಕುಟುಂಬದಲ್ಲಿ ಸಮಾಧಾನ.
ಮೀನರಾಶಿ
ದಾಂಪತ್ಯದಲ್ಲಿ ನೆಮ್ಮದಿ, ಸಹೋದ್ಯೋಗಿಗಳ ಸಹಕಾರ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಹಿರಿಯ ಸಹಕಾರ, ಸರ್ಕಾರಿ ಕೆಲಸಗಳಲ್ಲಿ ಅಪಜಯ, ಮನಸ್ಸಿಗೆ ಬೇಸರ, ಧನವ್ಯಯ, ಆರೋಗ್ಯದಲ್ಲಿ ಏರುಪೇರು. ಆರ್ಥಿಕವಾಗಿ ಸಮಾಧಾನಕರ ಸ್ಥಿತಿ. ಖರ್ಚಿನ ದೊಡ್ಡ ಪ್ರಸಂಗವೊಂದು ನಿವಾರಣೆ. ಕೌಟುಂಬಿಕ ಸಮಾರಂಭ ಏರ್ಪಡಬಹುದು.
Discussion about this post