ಈ ತಿಂಗಳು 20ರಿಂದ 28 ವರೆಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಇದರಲ್ಲಿ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಸಿನಿಮಾ ಆಯ್ಕೆಯಾಗಿವೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದ 12 ಜನರ ಆಯ್ಕೆ ಸಮಿತಿಯು ಈ ನಾಲ್ಕು ಚಿತ್ರಗಳನ್ನು ಆಯ್ಕೆ ಮಾಡಿದೆ.
ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡ, ಗಣೇಶ್ ಹೆಗಡೆ ನಿರ್ದೇಶನದ ನೀಲಿ, ಮಂಸೋರೆ ನಿರ್ದೇಶನದ ಆಕ್ಟ್ 1978, ಸಾಗರ್ ಪುರಾಣಿಕರ ಡೊಳ್ಳು ಚಿತ್ರಗಳು ಪನೋರಮಾಕ್ಕೆ ಆಯ್ಕೆಯಾದ ಚಿತ್ರಗಳು. ನಟ ಸಂಚಾರಿ ವಿಜಯ್ ಅಭಿನಯದ ಎರಡು ಚಿತ್ರಗಳು ಈ ಪಟ್ಟಿಯಲ್ಲಿರುವುದು ವಿಶೇಷ. ಹೀಗಾಗಿ, 52ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ರಂಗು ಹೆಚ್ಚಾಗಿದೆ.
ಇದನ್ನೂ ಓದಿ: Weekend with Ramesh: ಓಟಿಟಿಯಲ್ಲಿ ಬರುತ್ತಾ ವೀಕೆಂಡ್ ವಿಥ್ ರಮೇಶ್?
Discussion about this post