• Home
  • About Us
  • Contact Us
  • Terms of Use
  • Privacy Policy
Thursday, July 2, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

ರಸ್ತೆ ಕಾಮಗಾರಿ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಿ

Shri News Desk by Shri News Desk
Aug 6, 2021, 05:45 pm IST
in ಚಿಕ್ಕಮಗಳೂರು
Share on FacebookShare on TwitterTelegram

ಚಿಕ್ಕಮಗಳೂರು: ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು ಅಂತಹ ವಲಯಗಳನ್ನು ಗುರುತಿಸಿ ಅಂತಹ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಪಟ್ಟಿಯಲ್ಲಿ ಗುರುತಿಸಿ ಅಪಘಾತವನ್ನು ನಿಯಂತ್ರಿಸಲು ಅಗತ್ಯವಿರುವ  ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ನೂತನವಾಗಿ ರಸ್ತೆಗಳನ್ನು ನಿರ್ಮಾಣ ಮಾಡುವಾಗ ರಸ್ತೆ ಸುರಕ್ಷತೆಗಾಗಿ ಬಜೆಟ್‌ನ್ನು ಮೀಸಲಿಡಬೇಕು,  ಮೀಸಲಿಟ್ಟಂತಹ ಹಣ ಸಮರ್ಪಕವಾಗಿ ಬಳಕೆಯಾಗಬೇಕು ಎಂದ  ಅವರು ರಸ್ತೆ ಸುರಕ್ಷತಾ ಕಾಮಗಾರಿಗಳು ಅತಿಮುಖ್ಯವಾಗಿದ್ದು ಕಾಮಗಾರಿಗಳು ವಿಳಂಬವಾಗದಂತೆ ಗಮನಹರಿಸುವ ಮೂಲಕ ಸ್ಥಳಗಳಿಗೆ ಭೇಟಿ ನೀಡಿ ಪರಶೀಲಿಸಿ ವರದಿ ಸಲ್ಲಿಸುವಂತೆ  ಅಧಿಕಾರಿಗಳಿಗೆ ಸೂಚಿಸಿದರು, ರಸ್ತೆ ಸುರಕ್ಷತೆಯಲ್ಲಿ ಟ್ರೋಮಾ ಸೆಂಟರ್‌ಗಳು ತುಂಬಾ ಮುಖ್ಯವಾಗಿದ್ದು,  ಜಿಲ್ಲೆಯಲ್ಲಿ ಟ್ರೋಮಾ ಸೆಂಟರ್‌ಗಳು ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನಲ್ಲಿದ್ದು,  ಇನ್ನೂ ಹೆಚ್ಚಿನ ಟ್ರೋಮಾ ಸೆಂಟರ್‌ಗಳನ್ನು ಪ್ರಾರಂಭಿಸಲು ತಿಳಿಸಿದ ಅವರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೆಚ್ಚು ಅಪಘಾತ ವಲಯಗಳಿವೆ ಎಂಬುದರ ಬಗ್ಗೆ ಸಮೀಕ್ಷೆ ಕೈಗೊಂಡು ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯವಿರುವ ಪ್ರದೇಶಗಳಲ್ಲಿ ಟ್ರೋಮಾ ಸೆಂಟರ್‌ಗಳನ್ನು ಪ್ರಾರಂಭಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ೧೦೮ ಆಂಬ್ಯೂಲೆನ್ಸ್‌ಗಳಲ್ಲಿ ಜೀವರಕ್ಷಕ ಉಪಕರಣ ಮತ್ತು ಅಗತ್ಯ ನುರಿತ ಸಿಬ್ಬಂದಿಗಳು ಇರುವಂತೆ ನಿಗಾ ವಹಿಸಬೇಕು ಎಂದ ಅವರು ಅಪಘಾತವಾದ ಸ್ಥಳಕ್ಕೆ ನಿಗದಿತ ಕಾಲ ಮಿತಿಯೊಳಗೆ ತಲುಪಲು ಕ್ರಮವಹಿಸುವಂತೆ ಸೂಚಿಸಿದರು.

ಜಿಲ್ಲಾ ರಸ್ತೆಗಳಲ್ಲಿ ಒಟ್ಟು ೧೨ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದು ಅವುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು ಎಚ್ಚರಿಕೆ ಸೂಚನ ಫಲಕ, ಬಿಳಿ ಬಣ್ಣದಿಂದ ಮಾರ್ಕ್, ಕ್ಯಾಟ್ ಐಸ್ ಅಳವಡಿಕೆ, ರಿಪ್ಲೆಕ್ಟರ್ ಅಳವಡಿಕೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್.ಎಂ.ಹೆಚ್ ಮಾತನಾಡಿ,  ಜಿಲ್ಲೆಯಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಸಹ  ಅಪಘಾತಗಳು ಹೆಚ್ಚಾಗುತ್ತಿವೆ. ಮುಖ್ಯವಾಗಿ ರಸ್ತೆಯ ತಿರುವುಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ೧೭೩ ರಲ್ಲಿ ಒಟ್ಟು ೧೬ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದು, ಅವುಗಳಲ್ಲಿ ೧೦ ಬ್ಲಾಕ್ ಸ್ಪಾಟ್‌ಗಳನ್ನು ಖಾಯಂ ಅಭಿವೃದ್ಧಿಪಡಿಸಿರುವ ಬಗ್ಗೆ ಹಾಗೂ ೬ ಬ್ಲಾಕ್ ಸ್ಪಾಟ್‌ಗಳನ್ನು ತಾತ್ಕಾಲಿಕವಾಗಿ ಅಭಿವೃದ್ಧಿಪಡಿಸಿರುವುದರ ಕುರಿತು ಮಾಹಿತಿ ಪಡೆದುಕೊಂಡ ಅವರು ಒಳಭಾಗದ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಒಟ್ಟು ೨೬ ರಸ್ತೆಗಳಿದ್ದು, ರಸ್ತೆಗಳ ೧೦ ಮೀಟರ್‌ಗಳಿಗೂ  ಹಿಂದೆ ಹಂಪ್ಸ್‌ಗಳು ಹಾಗೂ ಅಗತ್ಯ ಸೂಚನಾ ಫಲಕ, ಕ್ಯಾಟ್ ಐಸ್, ರಂಬ್ಲರ್, ರಿಪ್ಲೆಕ್ಟರ್‌ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಒಟ್ಟು ೨೧ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದ್ದು, ಇವುಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ರಸ್ತೆಯಲ್ಲಿ ಕಳೆದ ಒಂದು ತಿಂಗಳಲ್ಲಿ ೨೮ ಅಪಘಾತಗಳು ಸಂಭವಿಸಿ ಮರಣ ಹೊಂದಿದ್ದಾರೆ,  ಇವುಗಳಲ್ಲಿ ೨೨ ಪ್ರಕರಣಗಳು ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗದಲ್ಲಿ  ಕಂಡುಬಂದಿದ್ದು ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಪಘಾತಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ  ಸೂಚಿಸಿದರು.
ಜಿಲ್ಲೆಯಲ್ಲಿ ಅಪಘಾತಗಳು ಸಂಭವಿಸಿದ ಸ್ಥಳ ಪರಶೀಲನೆಯ ಒಟ್ಟು ೨೨ ಪ್ರಕರಣಗಳ ತನಿಖಾ ವರದಿ ಲಭ್ಯವಿಲ್ಲದ ಪ್ರಕರಣಗಳ ಪೈಕಿ ಚಿಕ್ಕಮಗಳೂರು-೩, ಕಡೂರು-೭, ತರೀಕೆರೆ-೨, ಎನ್.ಆರ್.ಪುರ-೬, ಅಜ್ಜಂಪುರ-೩, ಶೃಂಗೇರಿ-೧ ಅಫಘಾತಗಳ ಬಗ್ಗೆ ವರದಿಗಳು ಲಭ್ಯವಿಲ್ಲದ ಕಾರಣ ಸಾರಿಗೆ ಇಲಾಖೆ,  ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ಜಂಟಿ ತಪಾಸಣೆ ಕಾರ್ಯ ನಡೆಸಿ ಕಡ್ಡಾಯವಾಗಿ ಮೂರ್‍ನಾಲ್ಕು  ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಕೊಟ್ಟಿಗೆಹಾರ-ಕಳಸ-ಬಾಳೂರು ಸಂಪರ್ಕಿಸುವ ರಸ್ತೆಯಲ್ಲಿ ತಿರುವುಗಳು ಹೆಚ್ಚಿದ್ದು ರಸ್ತೆ ಬದಿಯಲ್ಲಿರುವ ಎಲ್ಲಾ ಮರಗಳಿಗೆ ಒಂದು ವಾರದೊಳಗಾಗಿ ಕಡ್ಡಾಯವಾಗಿ ರಿಪ್ಲೆಕ್ಟರ್ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಿಲ್ಲಾ ರಸ್ತೆಗಳಲ್ಲಿರುವ ಬ್ಲಾಕ್ ಸ್ಪಾಟ್‌ಗಳು ಮತ್ತು ಅವುಗಳ ಕಾಮಗಾರಿಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿ ಮುರುಗೇಂದ್ರ ಬಿ.ಶಿರೋಳ್ಕರ್ ಮಾಹಿತಿ ನೀಡಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಮೇಶ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ShareSendTweetShare
Join us on:

Related Posts

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

ರಾಜ್ಯದಲ್ಲಿ 832 ಮಂದಿಗೆ ಕೊರೋನಾ ಪಾಸಿಟಿವ್ , 8 ಸೋಂಕಿತರು ಸಾವು

Corona crosses 1000 mark: ರಾಜ್ಯದಲ್ಲಿ 1000 ಗಡಿ ದಾಟಿದ ಕೊರೋನಾ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In