ಇಂದಿನ ಆಧುನಿಕ ಯುಗದಲ್ಲಿ ವಿವಾಹ ವಿಚ್ಛೇದನಗಳು ಸರ್ವೇಸಾಮಾನ್ಯವಾದರೂ ಪ್ರಖ್ಯಾತರ, ಚಿತ್ರತಾರೆಯರ ವಿವಾಹಗಳು ಮುರಿದು ಬಿದ್ದಾಗ ಅವು ಚಿತ್ರರಂಗದಲ್ಲೂ ಹಾಗೂ ಜನಸಾಮಾನ್ಯರಲ್ಲೂ ಒಂದು ರೀತಿಯ ಮಾನಸಿಕ ಅಲ್ಲೋಲ-ಕಲ್ಲೋಲ ಉಂಟು ಮಾಡುವುದು ಸಹಜ. ಇಂತಹ ಘಟನೆಗಳು ಆಗಾಗ ಸಂಭವಿಸಿ ಕೆಲ ಕಾಲದವರೆಗೆ ಸುದ್ದಿಯಲ್ಲಿದ್ದು ಸ್ವಲ್ಪ ಕಾಲಾನಂತರ ಜನರ ನೆನಪಿನಿಂದ ಮಾಸಿಹೋಗುತ್ತವೆ.
ಆದರೂ, ಅವು ಘಟಿಸಿದ ಸ್ವಲ್ಪ ಸಮಯದವರೆಗೆ ಜನಸಾಮಾನ್ಯರ ಆಸಕ್ತಿ ಕೆರಳಿಸುವುದಂತೂ ಸತ್ಯ. ಇಂತಹ ಘಟನೆಗಳಲ್ಲಿ ವಾಸ್ತವ ಸಂಗತಿಗಳು ಹೆಚ್ಚು ಹೊರಬರದಿದ್ದರೂ, ಹೆಚ್ಚಿನ ದೋಷಾರೋಪಣೆ ಬರುವುದು ಹೆಣ್ಣಿನ ಮೇಲೆಯೇ ಎನ್ನುವುದು ದುರ್ದೈವದ ಸಂಗತಿ.
ಇತ್ತೀಚಿನ ಇಂತಹ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುವುದಾದರೆ:

ಸಮಂತಾ ರುಥ್ ಪ್ರಭು
ವಿಚ್ಛೇದನ ಪ್ರಕ್ರಿಯೆ ಇನ್ನೂ ಪ್ರಾರಂಭವೇ ಆಗದಿದ್ದರೂ ಸಮಂತಾ ಮತ್ತು ನಾಗಚೈತನ್ಯ ಈಗಾಗಲೇ ತಾವಿಬ್ಬರೂ ಬೇರೆ-ಬೇರೆಯಾಗುತ್ತಿದ್ದೇವೆಂದು ಘೋಷಣೆ ಮಾಡಿದ್ದಾಗಿದೆ. ಸಮಂತಾ ದಕ್ಷಿಣಭಾರತದ ಚಲನಚಿತ್ರರಂಗದ ಸುಪ್ರಸಿದ್ಧ ನಾಯಕನಟಿಯಾಗಿದ್ದು ನಾಗಚೈತನ್ಯ ತೆಲುಗು ಚಿತ್ರರಂಗದ ಪ್ರತಿಷ್ಠಿತ ಅಕ್ಕಿನೇನಿ ನಾಗೇಶ್ವರರಾವ್ ಕುಟುಂಬದ ಕುಡಿ, ಪ್ರಖ್ಯಾತ ತೆಲುಗು ನಟ ಅಕ್ಕಿನೇನಿ ನಾಗಾರ್ಜುನರ ಪುತ್ರ. ತೆಲುಗು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾದ ಅವರು ವಿವಾಹದ ನಂತರ ಕೆಲ ವರ್ಷಗಳು ಬಹಳ ಅನ್ಯೋನ್ಯವಾಗಿ ಇದ್ದದ್ದಂತೂ ನಿಜ. ಇತ್ತೀಚಿನ ಕೆಲ ವರ್ಷಗಳಲ್ಲಿ ಏನಾಯಿತೆಂಬ ವಾಸ್ತವಾಂಶ ಯಾರಿಗೂ ತಿಳಿದಿಲ್ಲದಿದ್ದರೂ ಸಮಂತಾ ಅವರೇ ಹೇಳಿಕೊಂಡಿರುವಂತೆ ಸಮಂತಾರಿಗೆ ಬೇರೆ ನಟರೊಂದಿಗೆ ಪ್ರೇಮವ್ಯವಹಾರವಿತ್ತೆಂಬುದೂ ಹಾಗೂ ಅವರಿಗೆ ಮಕ್ಕಳನ್ನು ಪಡೆಯುವುದು ಇಷ್ಟವಿರಲಿಲ್ಲವೆನ್ನುವುದೂ ಸಮಂತಾರ ಮೇಲೆ ನಾಗಚೈತನ್ಯ ಮನೆಯವರ ಆರೋಪ. ವಾಸ್ತವ ಸಂಗತಿಗಳೇನೆಂಬುದು ಅವರಿಗೆ ಮಾತ್ರ ತಿಳಿದಿರುವುದು ಸತ್ಯಸಂಗತಿಯಾದರೂ ಅವರ ಅಭಿಮಾನಿಗಳಲ್ಲಿ ಇದು ಬೇಸರ ಉಂಟುಮಾಡಿರುವುದಂತೂ ಸತ್ಯ.

ಸುಸಾನ್ ಖಾನ್
ತಮ್ಮ ಪ್ರಥಮ ಚಿತ್ರ “ಕಹೋ ನ ಪ್ಯಾರ್ ಹೈ” ದಿಂದಲೇ ಹಿಂದಿ ಚಿತ್ರರಂಗದಲ್ಲಿ ಸಂಚಲನ ಉಂಟು ಮಾಡಿದ ಹೃತಿಕ್ ರೋಷನ್‌ರ ಮಾಜಿ ಪತ್ನಿ. ಹಿಂದಿ ಚಿತ್ರರಂಗದ ಎರಡು ಪ್ರತಿಷ್ಠಿತ ಕುಟುಂಬಗಳಾದ ರಾಕೇಶ್ ರೋಷನ್ ಹಾಗೂ ಜನಪ್ರಿಯ ನಟ-ನಿರ್ದೇಶಕ ಫಿರೋಜ್ ಖಾನ್ ಸಹೋದರ ಹಾಗೂ ಟಿಪ್ಪುಸುಲ್ತಾನ್ ಹಿಂದಿ ಧಾರಾವಾಹಿಯ ನಿರ್ದೇಶಕ ಸಂಜಯ್‌ಖಾನ್ ಸಂಬಂಧಕ್ಕೆ ಕಾರಣವಾದ ಅಂತರ್‌ಧರ್ಮೀಯ ವಿವಾಹವಿದು. ಬಹಳ ವರ್ಷಗಳ ಕಾಲ ಅನ್ಯೋನ್ಯ ದಾಂಪತ್ಯ ನಡೆಸಿದ ಇವರು ಎರಡು ಮುದ್ದಾದ ಮಕ್ಕಳನ್ನು ಪಡೆದರು. ಹಿಂದಿ ಚಿತ್ರರಂಗದ ಮತ್ತೊಬ್ಬ ಆಕರ್ಷಕ ವ್ಯಕ್ತಿತ್ವದ ನಟ ಅರ್ಜುನ್ ರಾಮ್‌ಪಾಲ್‌ರೊಂದಿಗಿನ ಪ್ರೇಮವ್ಯವಹಾರವೇ ಇವರ ವಿಚ್ಛೇದನಕ್ಕೆ ಕಾರಣವಾಯಿತು.

ಅಮೃತಾ ಸಿಂಗ್
ಇವರು ಮದುವೆಯಾದದ್ದು ಪಟೌಡಿಯ ನವಾಬನ ವಂಶಜ ಹಾಗೂ ಹಿಂದಿ ನಟ ಸೈಫ್ ಅಲಿಖಾನ್‌ರನ್ನು. ಸೈಫ್‌ರಿಗಿಂತ ಅಮೃತಾ 13 ವರ್ಷ ದೊಡ್ಡವರು. ಅಷ್ಟೇ ವರ್ಷಗಳ ದಾಂಪತ್ಯದ ನಂತರ ಇವರು ಬೇರೆ ಬೇರೆಯಾದ ಇವರಿಗೆ ಇಬ್ಬರು ಮಕ್ಕಳು. ವಿವಾಹೇತರ ಸಂಬಂಧವೇ ಈ ಸಂಬಂಧ ಮುರಿಯುವುದಕ್ಕು ಕಾರಣವೆಂಬ ಊಹಾಪೋಹವೂ ಇದ್ದು ಅಮೃತಾ ಕೋಟ್ಯಂತರ ರೂಪಾಯಿಗಳ ಪರಿಹಾರ ಕೇಳಿದರೆಂದೂ ಆರೋಪವಿದೆ.

ಮಲೈಕಾ ಆರೋರಾ
ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್‌ನ ತಮ್ಮ ಅರ್ಬಾಜ್‌ಖಾನ್‌ನನ್ನು ವಿವಾಹವಾಗಿದ್ದ ಮಲೈಕಾ ಅನೇಕ ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದವರು. ತಮಗಿಂತ ಬಹಳಷ್ಟು ಕಿರಿಯ ವಯಸ್ಸಿನ ನಟ ಅರ್ಜುನ್ ಕಪೂರ್‌ನೊಂದಿಗಿನ ಪ್ರೇಮಸಂಬಂಧ ಇವರ ವಿಚ್ಛೇದನಕ್ಕೆ ಕಾರಣವಾಯಿತೆಂದು ಸುದ್ದಿಯಾಯಿತು. ಇದರಡನೆ, ಹಣ ಮತ್ತಯ ಖ್ಯಾತಿಗಾಗಿ ಇವರು ಖಾನ್ ಕುಟುಂಬವನ್ನು ಉಪಯೋಗಿಸಿಕೊಂಡರೆಂದು ಇವರ ಮೇಲಿನ ಆರೋಪ.

ಶ್ವೇತಾ ರೋಹಿರ
ಸಲ್ಮಾನ್‌ಖಾನ್‌ರ ‘ರಾಖಿ ಸಹೋದರಿ’ ಶ್ವೇತಾ ರೋಹಿರ “ಫುಕ್ರೆ” ನಟ ಪುಲ್ಕಿತ್ ಸಾಮ್ರಾಟ್ 2014ರಲ್ಲಿ ವೈಭವಯುತ ವಿವಾಹದ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರೂ ಕೇವಲ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದರು. ಸಂಬಂಧಗಳ ವೈಯಕ್ತಿಕ ವಿಷಯಗಳನ್ನೂ ಶ್ವೇತಾ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿದ್ದರೆನ್ನುವುದು ಅವರ ಮೇಲಿನ ಆರೋಪ. ನಟಿ ಯಾಮಿ ಗೌತಮ್‌ರೊಂದಿಗಿನ ಪುಲ್ಕಿತ್‌ರ ಸಂಬಂಧವೇ ವಿವಾಹ ಮುರಿದು ಬೀಳಲು ಕಾರಣವೆಂಬ ಆರೋಪವೂ ಇದೆ.
Samanta Ruth Prabhu Suzanne Khan Amrita Singh Malaika Arora Shweta Rohira celebrity divorces created sensation
ಇದನ್ನೂ ಓದಿ: ನಾಗ ಚೈತನ್ಯ – ಸಮಂತಾ ಅಕ್ಕಿನೇನಿ ದಾಂಪತ್ಯ ವಿಚ್ಛೇದನದಲ್ಲಿ ಕೊನೆ
ಇದನ್ನೂ ಓದಿ:Viral: ನನಗೆ ಅಫೇರ್ ಇತ್ತು, ಅಬಾರ್ಶನ್ ಮಾಡಿಸಿದ್ದೆ ಎಂದೆಲ್ಲಾ ದೂರಿದ್ದರು: ಸಮಂತಾ ಭಾವುಕ ಪೋಸ್ಟ್
Discussion about this post