ಇಸ್ತಾಂಬುಲ್: ಎತ್ತರೆತ್ತರ ಬೆಳೆಯಬೇಕು ಎಂಬುದು ಎಲ್ಲರ ಆಸೆ, ಹಲವರಿಗೆ ದೈಹಿಕವಾಗಿ; ಅನೇಕರಿಗೆ ಬೌದ್ಧಿಕವಾಗಿ. ಪ್ರಸ್ತುತದ ಸುದ್ದಿ ದೈಹಿಕ ಎತ್ತರಕ್ಕೆ ಸಂಬಂಧಿಸಿದ್ದು. ಟರ್ಕಿಯ 24 ವರ್ಷದ ಯುವತಿ ರುಮೇಸ ಗೆಲ್ಗಿ 7. 7 ಇಂಚು (215.16 ಸೆಂ.ಮೀ.) ಎತ್ತರವಿದ್ದು, ಗಿನ್ನಿಸ್ ವಿಶ್ವ ದಾಖಲೆಗೆ ಸೇರಿದ್ದಾಳೆ. ಈ ದಾಖಲೆಗೆ ಗೆಲ್ಗಿ ಎರಡನೇ ಸಾರಿಗೆ ಪಾತ್ರವಾಗಿದ್ದಾಳೆ. 2014ರಲ್ಲಿ 18ರ ಯುವತಿಯಾಗಿದ್ದಾಗ ಜೀವಂತವಿರುವ ಎತ್ತರದ ತರುಣಿ ಎಂಬ ಹಿರಿಮೆಗಳಿಸಿದ್ದಳು.
ಗೆಲ್ಗಿ ಇಷ್ಟೆತ್ತರಕ್ಕೆ ಬೆಳೆದಿದ್ದು ಸ್ವಾಭಿಕವಾಗಲ್ಲ; ಅಪರೂಪದ ಕಾಯಿಲೆಯಿಂದ. “ವೀವರ್ ಸಿಂಡ್ರೋಮ್” ಎಂಬ ಕಾಯಿಲೆಯಿಂದಾಗಿ ಈಕೆ ಅಡಿಕೆ ಮರದಂತೆ ಅತಿ ಎತ್ತರಕ್ಕೆ ಬೆಳೆದಿದ್ದಾಳೆ. ಈ ಕಾಯಿಲೆಯಿಂದಾಗಿ ಅಸ್ಥಿಪಂಜರ ಅಪಕ್ವವಾಗುತ್ತದೆ. ನಡೆಯುವಂತಿಲ್ಲ, ನಿಲ್ಲುವಂತಿಲ್ಲ. ಹೀಗಾಗಿ ಗೆಲ್ಗಿ ಬಹುಪಾಲು ಸಮಯವನ್ನು ಗಾಲಿ ಕುರ್ಚಿಯಲ್ಲಿ ಕಳೆಯುತ್ತಾಳೆ.
‘ಗೆಲ್ಗಿ ಅದಮ್ಯ ಚೈತನ್ಯ, ಹೆಮ್ಮೆಯ ಸ್ಫೂರ್ತಿ’ ಎಂದು ಗಿನ್ನಿಸ್ ವಿಶ್ವದಾಖಲೆಯ ಮುಖ್ಯ ಸಂಪಾದಕ ಕ್ರೇಗ್ ಗ್ಲೆಂಡೇ ಹೇಳಿದ್ದಾರೆ.
ಜಗತ್ತಿನ ಅತ್ಯಂತ ಎತ್ತರ ಪುರುಷ ಎಂಬ ಹಿರಿಮೆಯೂ ಟರ್ಕಿಯ ಸುಲ್ತಾನ್ ಕೊಸೆನ್ ಪಾತ್ರರಾಗಿದ್ದಾರೆ. ಕೊಸೆನ್ ಎಂಟು ಅಡಿ ಎತ್ತರವಿದ್ದಾರೆ. ಅತಿ ಎತ್ತರದ ಕಾರಣ ಕೊಸೆನ್ಗೆ ಮಿದುಳಿನಲ್ಲಿ ಗಡ್ಡೆ ಬೆಳೆದಿದೆ.
“ವೀವರ್ ಸಿಂಡ್ರೋಮ್ ” ಎಂದರೇನು?:
“ವೀವರ್ ಸಿಂಡ್ರೋಮ್” ಎಂಬುದು ಅಪರೂಪದಲ್ಲಿ ಅಪರೂಪವಾಗಿ ಕಾಣಿಸುವ ಆನುವಂಶಿಕ ರೋಗ. ದೈಹಿಕವಾಗಿ ಅನೇಕ ಕಷ್ಟಗಳನ್ನು ನೀಡುವ ಕಾಯಿಲೆ. ಟರ್ಕಿಯಲ್ಲಿ ಇಂಥ ಕಾಯಿಲೆಗೆ ಗುರಿಯಾದ ಮೊದಲ ಮಹಿಳೆ ರುಮೇಸ ಗೆಲ್ಗಿ. ಸ್ಕೋಲಿಯೋಸಿಸ್ (ಬೆನ್ನು ಮೂಳೆಯಲ್ಲಿ ಅಸಹಜವಾದ ಪಾರ್ಶ್ವ ವಕ್ರತೆ) ಬಳಲುತ್ತಿರುವ ಅವರು ನಡೆದಾಡುವಂತಿಲ್ಲ. ಸ್ವಲ್ಪ ದೂರ ನಡೆದರೂ ಸುಸ್ತಾಗುತ್ತದೆ. ಹೀಗಾಗಿ ಗೆಲ್ಗಿ ವಾಕರ್ ಬಳಸುತ್ತಾಳೆ. ಕುಟುಂಬದವರ ಬೆಂಬಲದಿಂದ ಕಷ್ಟಗಳು ಅಸಹನೀಯವಾಗಿಲ್ಲ ಎಂದು ಗಿಲ್ಗಿ ಹೇಳುತ್ತಾಳೆ.
‘ಭಿನ್ನವಾಗಿರುವುದೇನು ಕೆಟ್ಟದಲ್ಲ. ಇದರಿಂದ ಊಹಿಸಲು ಅಸಾಧ್ಯವಾದ ಯಾವುದಾದರೊಂದು ಸಾಧನೆ ಮಾಡಬಹುದು’ ಎಂಬ ಗಿಲ್ಗಿಯ ಹೇಳಿಕೆಯನ್ನು ಗಿನ್ನಿಸ್ ವಿಶ್ವ ದಾಖಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಗೆಲ್ಗಿಯ ಶುಭಕೋರಿದ್ದಾರೆ. ಆಕೆ ಅದ್ಭುತ ಪ್ರೇರಕ ಶಕ್ತಿ ಎಂದು ಹೊಗಳಿದ್ದಾರೆ.
View this post on Instagram
24-Year-Old FromTurkey Confirmed As World’s Tallest Living Woman
ಇದನ್ನು ಓದಿ:ನವರಾತ್ರಿ ಸಂಭ್ರಮ: ಪ್ರತಿದಿನ ದೇವಿ ಪೂಜೆ ಹೀಗೆ ಮಾಡಿ, ಈ ಮಂತ್ರ ಜಪಿಸಿ
ಇದನ್ನು ಓದಿ: ಈ ಟಚ್ಚಲಿ ಏನೋ ಇದೆ! ಇಬ್ಬರು ಸ್ಪರ್ಶ ವಿಜ್ಞಾನಿಗಳಿಗೆ 2021ರ ನೋಬೆಲ್ ಪ್ರಶಸ್ತಿ
Discussion about this post