ಚಿಕ್ಕಮಗಳೂರು: ಇಲ್ಲಿನ ಮುಳ್ಳಯ್ಯನಗಿರಿ ಸಾಲಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಭಾರೀ ನೀರು ಹರಿದು ಬಂದ ರಭಸಕ್ಕೆ ಹೊನ್ನಮ್ಮನ ಹಳ್ಳದ ಸೇತುವೆ ಅಕ್ಕಪಕ್ಕದಲ್ಲಿ ಕುಸಿತ ಉಂಟಾಗಿದೆ.
ದೇವಾಲಯದ ಒಂದು ಭಾಗದಲ್ಲಿ ಮಣ್ಣು ಕುಸಿತಗೊಂಡ ಕಾರಣ ಹೊನ್ನಮ್ಮನ ಹಳ್ಳದಲ್ಲಿ ಹಾನಿಯುಂಟಾಗಿದೆ ಎಂದು ವರದಿಯಾಗಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಹೊನ್ನಮ್ಮನ ಹಳ್ಳವು ಒಂದಾಗಿದ್ದು ಇದನ್ನು ವೀಕ್ಷಿಸಿ ಮನದುಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಇದೀಗ ಇಲ್ಲಿನ ಅಕ್ಕಪಕ್ಕದಲ್ಲಿ ಮಣ್ಣು ಕುಸಿತ ಉಂಟಾಗಿದೆ.

























Discussion about this post