ದೆಹಲಿ : ವಾಟ್ಸ್ ಆಪ್ ನಲ್ಲಿ ಹೊಸ ಫೀಚರ್ಸ್ ಬರುತ್ತಲೇ ಇರುತ್ತದೆ ಆದರೆ ಈ ಬಾರಿ ಬಳಕೆದಾರರಿಗೆ ಬಹುನಿರೀಕ್ಷಿತ ಫೀಚರ್ ಒಂದನ್ನು ಪರಿಚಯಿಸಿದೆ. ಅದುವೇ ಮಲ್ಟಿ ಡಿವೈಸ್ ಬೀಟಾ. ಏನಿದು ಗೊತ್ತಾ.? ನೀವು ನಿಮ್ಮ ಕಂಪ್ಯೂಟರ್ ಗಳಲ್ಲಿ ಒಂದು ಬಾರಿ ವಾಟ್ಸ್ ಆಪ್ login ಆದರೆ ಸಾಕು ಮತ್ತೆ logout ಆಗದೆ ಮುಂದಿನ ಬಾರಿ ಮತ್ತೆ ಅದೇ ವಾಟ್ಸ್ ಆಪ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಮತ್ತೆ ಇದಕ್ಕೆ ನಿಮ್ಮ ಮೊಬೈಲ್ ಹತ್ತಿರದಲ್ಲಿರಬೇಕೆಂದಿಲ್ಲ. ಇಂಟರ್ ನೆಟ್ ಬೇಕೆಂದಿಲ್ಲ.
ಒಂದು ವಾಟ್ಸ್ ಆಪ್ ಅಕೌಂಟ್ ಅನ್ನು ನಾಲ್ಕು ಡಿವೈಸ್ ಗಳಲ್ಲಿ ಒಂದೇ ಸಮಯದಲ್ಲಿ ಬಳಸಬಹುದಾಗಿರುವ ವೈಶಿಷ್ಟ್ಯ ಇದರಲ್ಲಿದೆ. ಕನೆಕ್ಟ್ ಮಾಡುವ ವೇಳೆ ಮೊಬೈಲ್ ಆನ್ ಲೈನ್ ನಲ್ಲಿ ಇದೆಯಾ ಎಂದು ನೋಡುವ ಅಗತ್ಯವಿಲ್ಲ.
ಈ ಫೀಚರ್ ಬಳಸೋದು ಹೇಗೆ.? ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ವಾಟ್ಸ್ ಆಪ್ ಓಪನ್ ಮಾಡಿ. ನಂತರ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
ಬಳಿಕ ಅಲ್ಲಿ ಕಾಣುವ Linked divices ಮೇಲೆ ಟ್ಯಾಪ್ ಮಾಡಿ. ಅಲ್ಲಿ Multi-Device Beta ಆಪ್ಷನ್ ಅನ್ನು ಆಯ್ಕೆ ಮಾಡಿ. ಇದರಲ್ಲಿ ವಾಟ್ಸಾಪ್ Join Beta ಆಯ್ಕೆ ಮಾಡಿ continue ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಒಂದು QR code ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್ಫೋನ್ ಅನ್ನು ವಾಟ್ಸ್ಆ್ಯಪ್ ವೆಬ್ಗೆ ಲಿಂಕ್ ಮಾಡಿರಿ. ಹೀಗೆ ನೀವು ನಾಲ್ಕು ಡಿವೈಸ್ ಗಳಲ್ಲಿ ಒಂದೇ ಸಲ ವಾಟ್ಸ್ ಆಪ್ ಬಳಸಬಹುದಾಗಿದೆ.
Discussion about this post