ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ತಳಿ ಬೋಟ್ಸ್ ವಾನಾ ಪತ್ತೆಯಾದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ.
ಇದನ್ನೂ ಓದಿ: ಬಿಜೆಪಿ ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸುತ್ತಿದೆ
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಬಿಎಸ್‌ಇ ಸೆನ್ಸೆಕ್ಸ್ 1,400 ಅಂಕಗಳಿಗಿಂತಲೂ ಅಧಿಕ ಕುಸಿತ ಕಂಡಿದ್ದರೆ, ಎನ್ ಎಸ್ ಇ ನಿಫ್ಟಿ 50 ಸೂಚ್ಯಂಕ 400 ಅಂಕಗಳ ನಷ್ಟದೊಂದಿಗೆ 17,130ರ ಮಟ್ಟಕ್ಕೆ ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಇನ್ಫೋಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆನ್ಸೆಕ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಪ್ರಮುಖ ಸಂಸ್ಥೆಗಳಾಗಿವೆ.
ಇದನ್ನೂ ಓದಿ: ಹೊಸ ಕೊರೋನಾ ರೂಪಾಂತರ ಪತ್ತೆ: ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿ ಹೈ ಅಲರ್ಟ್.
ಕೋವಿಡ್ 19 ಲಸಿಕೆಗೂ ಪ್ರತಿರೋಧ ಒಡ್ಡುವ ಸಾಧ್ಯತೆ ಇದೆ ಎನ್ನಲಾಗಿರುವ ಹೊಸ ಕೊರೊನಾ ವೈರಸ್ ತಳಿ ಪತ್ತೆಯಾದ ಬಳಿಕ ಹೂಡಿಕೆದಾರರು ಯೆನ್ ಮತ್ತು ಡಾಲರ್ ಬಾಂಡ್‌ಗಳ ಸುರಕ್ಷತೆಯ ಕಡೆಗೆ ಗಮನ ಹರಿಸಿದ್ದಾರೆ. ಇದರಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ಏಷ್ಯಾದ ಷೇರುಗಳು ಶುಕ್ರವಾರ ಗಣನೀಯ ಕುಸಿತ ಕಂಡಿವೆ.
ಇದನ್ನೂ ಓದಿ: ಕೆಜಿಎಫ್ ನಟಿಯ ಹಳೇ ಫೊಟೊ ನೆಟ್ಟಿಗರ ಮನ ಸೋಲಲು ಕಾರಣ!
Sensex falls 1400 points

























Discussion about this post