ಚಿಕ್ಕಮಗಳೂರು: ಡಿಸೆಂಬರ್ ೧೨ ರಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಕಾರಿ ಸಮಿತಿಗೆ ಚುನಾವಣೆ ನಡೆಯಲಿದ್ದು ಜಿಲ್ಲೆಯ ಒಟ್ಟು ೨೮ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್. ಲಕ್ಷೀನಾರಾಯಣ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಕಾರಿ ಮಂಡಳಿ ೩೫ ನಿರ್ದೇಶಕರ ಸ್ಥಾನಗಳಿಗೆ ಡಿಸೆಂಬರ್ ೧೨ ರಂದು ಚುನಾವಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿ ಒಟ್ಟು ೨೮ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು ಚಿಕ್ಕಮಗಳೂರಿನಲ್ಲಿ ೧೨ ಮತಗಟ್ಟೆ ಹಾಗೂ ಕಡೂರಿನಲ್ಲಿ ೩, ತರೀಕೆರೆಯಲ್ಲಿ ೪, ಮೂಡಿಗೆರೆಯಲ್ಲಿ ೩ ಹಾಗೂ ಶೃಂಗೇರಿ, ಕೊಪ್ಪದಲ್ಲಿ ತಲಾ ಒಂದು ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದ್ದು ಚುನಾವಣೆ ಡಿಸೆಂಬರ್ ೧೨ ರಂದು ಬೆಳಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು ೧೩,೩೪೨ ಅರ್ಹ ಮತದಾರರುಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರಿನ ಎಐಟಿ ಕಾಲೇಜು ಕ್ಯಾಂಪಸ್‌ನಲ್ಲಿ ೧೨ ಮತಗಟ್ಟೆಗಳನ್ನು ತೆರೆಯಲಾಗಿದೆ. ಉಳಿದಂತೆ ಮೂಡಿಗೆರೆ ಬಿಜಿಎಸ್ ಒಕ್ಕಲಿಗರ ಸಂಘ, ತರೀಕೆರೆಯಲ್ಲಿ ಎಸ್,ಜೆ.ಎಂ ಪ್ರಥಮ ದರ್ಜೆ ಕಾಲೇಜು, ಕಡೂರಿನಲ್ಲಿ ಸ.ಹಿ.ಪ್ರಾ. ಬಾಲಕರ ಶಾಲೆ ಗಣಪತಿ ಪೆಂಡಾಲ್, ಎನ್.ಆರ್.ಪುರದಲ್ಲಿ ಬಿ.ಇಒ ಕಛೇರಿ ಪಕ್ಕದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿದೆ. ಸಂಘದಿಂದ ನೀಡಲಾಗಿರುವ ಕಂಪೂಟರೈಸ್ಡ್ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ತಂದು ಮತ ಚಲಾಯಿಸುವಂತೆ ತಿಳಿಸಿದರು.
ಗುರುತಿನ ಚೀಟಿ ಕಳೆದುಹೋಗಿದ್ದಲ್ಲಿ ರಾಜ್ಯ ಒಕ್ಕಲಿಗರ ಸಂಘ ಲೆಕ್ಕಪತ್ರ ಶಾಖೆಯಲ್ಲಿ ೧೦೦ ರೂ ನೀಡಿ ಡಿ.೩ ರೊಳಗೆ ಪಡೆದುಕೊಳ್ಳುವಂತೆ ತಿಳಿಸಿದರು. ಈಗಾಗಲೇ ನಾಮಪತ್ರ ಪ್ರಕಿಯೆ ಪೂರ್ಣಗೊಂಡಿದ್ದು ಡಿಸೆಂಬರ್ ೧೨ ರಂದು ಮತದಾನ ಹಾಗೂ ಡಿ.೧೫ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಕಾರ್ಯಕ್ಕೆ ಜಿಲ್ಲೆಯಲ್ಲಿ ೨೫೦ ಸರ್ಕಾರಿ ಸಿಬ್ಬಂದಿಗಳನ್ನು ಬಳಸಿಕೊಳ್ಳಲದಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿನ ಒಂದು ಸ್ಥಾನಕ್ಕೆ ಐ.ಪಿ. ರವಿಕುಮಾರ್, ಬಿ,ಜೆ. ನಾಗರಾಜ್, ಪೂರ್ಣೇಶ್, ಬಿ.ಎಲ್ ಸಂದೀಪ್ ಸೇರಿ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸುದ್ದಾರೆ ಎಂದು ಮಾಹಿತಿ ನೀಡಿದರು.
State Peasants Association elections on December 12

























Discussion about this post