ಚಿಕ್ಕಮಗಳೂರು: ಕಾಫಿ ಸಮುದಾಯವನ್ನು ಒಟ್ಟುಗೂಡಿಸುವ, ಮೂಲಕ ಗುಣಮಟ್ಟದ ಕಾಫಿ ತಯಾರಿಸುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ನಗರದಲ್ಲಿ ನಡೆಯಿತು.
Winds against BJP: ರಾಜ್ಯದಲ್ಲಿ ಬಿಜೆಪಿ ವಿರುದ್ದದ ಗಾಳಿ ಬೀಸಲು ಪ್ರಾರಂಭ
ಇಂಡಿಯನ್ ಏರೋಪ್ರಸ್ ಚಾಂಪಿಯನ್ ಶಿಪ್ ನಗರದ ಜಯಂತಿ ಕಾಫಿ ವರ್ಕ್ ಅಂಗಸಂಸ್ಥೆ ವರ್ಲ್ಡ್ ಆಫ್ ಕಾಫಿ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ನಡೆಯಿತು. ಪ್ರಾದೇಶಿಕ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಕಡೆಗಳಿಂದ ಕಾಫಿ ಸಮೂಹದ ಬೆಳೆಗಾರು,ಮಾರಾಟಗಾರರು,ರೋಸ್ಟರ್ಸ,ಯಂತ್ರ ತಯಾರಕರು, ಕೆಫೆ ಮಾಲೀಕರು ಸೇರಿ ಒಟ್ಟು 28 ಸ್ಪರ್ಧಿಗಳು ಭಾಗವಹಿಸಿದ್ದರು.
2024ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ: ಹಿರಿಯ ನಾಯಕ ಗುಲಾಂ ನಬಿ ಆಜಾದ್
ಪ್ರತಿ ಸುತ್ತಿನಲ್ಲಿ ಮೂವರಲ್ಲಿ ಸ್ಪರ್ಧಿಗಳಿಗೆ ಗಿರಿಶ್ರೇಣಿಯಲ್ಲಿರುವ ಭೂತನಗುಡಿ ಕಾಫಿತೋಟದ ಅರೇಭಿಕಾ ಕಾಫಿಯನ್ನು ನೀಡಿ ಅವರು ವಿವಿಧ ಸ್ವಾದದ ವಿಭಿನ್ನರುಚಿಯ ಕಾಫಿ ತಯಾರಿಸಲು ಸೂಚಿಸಲಾಯಿತು. ಭೂತನಗುಡಿ ಕಾಫಿ ತೋಟದ ಉತ್ಕೃಷ್ಟ ಪರಿಸರ ಪ್ರೇಮಿ ಕಾಫಿ ಪುಡಿ ಬಳಸಿ 28 ಸ್ಪರ್ಧಿಗಳು 5 ನಿಮಿಷದಲ್ಲಿ ತಯಾರಿಸಿದ ಕಾಷಾಯದ ರುಚಿ ನೋಡಿದ ತೀರ್ಪುಗಾರರು ಓರ್ವ ಸ್ಪರ್ಧಿಯನ್ನು ಆಯ್ಕೆ ಮಾಡುತ್ತಿದ್ದು,ಕೊನೆಯ ಸುತ್ತಿನಲ್ಲಿ ವಿಜೇತರು ಮತ್ತೆ ಸ್ಪರ್ಧೆಗೆ ಇಳಿದು ಅಲ್ಲಿ ಮೂವರು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು.
Politics: ಯುಪಿಎ ಎಲ್ಲಿದೆ? ಎಂದು ಮಮತಾ ಟೀಕೆಗೆ ಕಾಂಗ್ರೆಸ್ ತಿರುಗೇಟು
ಈ ಮೂವರು ವಿಜೇತರು ಡಿಸೆಂಬರ್ 16 ರಂದು ಮುಂಬೈನಲ್ಲಿ ನಡೆಯಲಿರುವ ಅಖಿಲ ಭಾರತೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವರು. ಈಗಾಗಲೆ ಪುದುಚೇರಿ, ಹೈದ್ರಾಬಾದ್, ಮುಂಬಯಿ, ಗುಜರಾತ್, ಕೋಲ್ಕತಾ, ಚಂದಿಘರ್,ಚೆನ್ನೈ, ದೆಹಲಿ,ಪುಣೆ,ನಾಗಾಲ್ಯಾಂಡ್,ನಾಗಪುರದಲ್ಲಿ ನಡೆದು ವಿಜೇತರಾದ ಸ್ಪರ್ಧಿಗಳ ಜೊತೆ ಸ್ಪರ್ಧೆಗಿಳಿಯುವರು.
ಅಲ್ಲಿ ವಿಜೇತರಾದ ಮೂವರು ಸ್ಪರ್ಧಿಗಳು ಮುಂದೆ ಆಸ್ಟ್ರೇಲಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುವರು.
ಇಂದು ನಡೆದ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಸ್ಪರ್ಧೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದ ಇಂಡಿಯನ್ ಏರೋಪ್ರಸ್ ಚಾಂಪಿಯನ್ ಶಿಪ್ ಸಂಘಟಕ ಸುಹಾಸ್ ದ್ವಾರಕಾನಾಥ್ ಮತ್ತು ಪ್ರಾಯೋಜಕ ಎಂ.ಎಸ್.ಜಯರಾಮ್ ಕಾಫಿ ಬೆಳೆಗಾರರು ಹಾಗೂ ಉಳಿದೆಲ್ಲ ಸಹಭಾಗಿಗಳನ್ನೂ ಒಟ್ಟುಗೂಡಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶ ವೆಂದರು.
ಕಾಫಿಯ ಸಾಧ್ಯತೆ ಹೆಚ್ಚಿಸಿ,ವಿಭಿನ್ನ ಅನುಭವವನ್ನು ಕಾಫಿಪೇಯ ಗಾಹಕರಿಗೆ ನೀಡುವಂತಾಗಬೇಕು.ಕಾಫಿಯ ಬಗ್ಗೆ ಬೆಳೆಗಾರರು ಸೇರಿದಂತೆ ಕಾಫಿ ತಯಾರಿಕೆಯ ಜ್ಞಾನ ದ ವಿಸ್ತರಣೆ ಮತ್ತು ಪರಸ್ಪರ ಅನುಭವದ ವಿನಿಮಯ ಸಹ ಪ್ರಮುಖ ಉದ್ದೇಶವೆಂದು ತಿಳಿಸಿದರು.
2024ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ: ಹಿರಿಯ ನಾಯಕ ಗುಲಾಂ ನಬಿ ಆಜಾದ್
ಕಳೆದ 4 ವರ್ಷಗಳಿಂದ ಈ ಸ್ಪರ್ಧೆ ನಡೆಯುತ್ತಿದೆ. ಕಳೆದ ವರ್ಷ 221 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು,ಈ ವರ್ಷ ಅತಿ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುಹಾಸ್ ದ್ವಾರಕಾನಾಥ್ ಮಾಹಿತಿ ಇತ್ತರು. ಕಾರ್ಯಕ್ರಮದಲ್ಲಿ ಜಯಂತಿ ಕಾಫಿ ಸಮೂಹದ ಎಮ್.ಜೆ.ನಕುಲ್,ಎಮ್.ಜೆ.ಸಹದೇವ್ ಮತ್ತು ಎಂ ಎನ್.ಆದಿತ್ಯ ಇದ್ದರು.
ಧರ್ಮಸ್ಥಳ ಲಕ್ಷ ದೀಪೋತ್ಸವ: ಕಂಚಿ ಮಾರುಕಟ್ಟೆ ಉತ್ಸವ ನಡೆದ ಪರಿ ಹೀಗಿದೆ
International competition for making quality coffee

























Discussion about this post