ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೂರಾರು ದತ್ತಭಕ್ತರು ದತ್ತಮಾಲಾಧಾರಣೆ ಮಾಡಿದರು. ನಗರದ ಕಾಮದೇನು ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆಯೇ ನೂರಾರು ದತ್ತ ಭಕ್ತರು ಧಾರ್ಮಿಕ ವಿಧಿವಿಧಾನ,ಪೂಜೆ ಪುನಸ್ಕಾರ ನೇರವೇರಿಸಿ ದತ್ತಮಾಲಾಧಾರಣೆ ಮಾಡಿದರು.
ಈ ವೇಳೆ ಮಾತನಾಡಿದ. ರಘು ಸಕಲೇಶಪುರ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ದತ್ತಜಯಂತಿಯ ಅವಧಿಯಲ್ಲಿಯೇ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇಂದಿನಿಂದ ಡಿ.19 ರ ದತ್ತಜಯಂತಿಯ ಹಿನ್ನೆಲೆ ವಿವಿಧ ಕಾರ್ಯಕ್ರಮ ಗಳು ನಡೆಯಲಿದ್ದು ಸುಮಾರು 15 ಸಾವಿರ ಜನರು ದತ್ತಪೀಠದ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗಿಶ್ ರಾಜ್ ಅರಸ್,ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್, ಬಜರಂಗದಳ ದಕ್ಷಿಣ ಪ್ರಾಂತೀಯ ಸಹ ಸಂಚಾಲಕ ರಘು ಸಕಲೇಶಪುರ, ವಿಎಚ್ ಜಿಲ್ಲಾ ಕಾರ್ಯದರ್ಶಿ ಆರ್.ಡಿ ಮಹೇಂದ್ರ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಅಮಿತ್, ಬಜರಂಗದಳ ನಗರ ಸಂಚಾಲಕ ಶ್ಯಾಮ್ ಇತರರು ಇದ್ದರು.

























Discussion about this post