• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ತಾಜಾಸುದ್ದಿ

ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ರಾಜ್ಯಕ್ಕೆ ಸಂಬಂಧಿಸಿದ್ದು: ಮಮತಾ ಬ್ಯಾನರ್ಜಿ

ಗಡಿಭದ್ರತಾ ಪಡೆಗಳಿಗೆ ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಲು ಬಿಡಬೇಡಿ ಎಂದು ಪೋಲೀಸ್ ಇಲಾಖೆಗೆ ಮಮತಾ ತಾಕೀತು

Shri News Desk by Shri News Desk
Dec 8, 2021, 04:16 pm IST
in ತಾಜಾಸುದ್ದಿ, ರಾಜಕೀಯ, ರಾಷ್ಟ್ರೀಯ, ಸೇನೆ
ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ

ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ

Share on FacebookShare on TwitterTelegram

ಬೆಂಗಳೂರು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೆರೆಯ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಜಿಲ್ಲೆಗಳಲ್ಲಿ ಗಡಿಭದ್ರತಾ ಪಡೆಗಳ (ಬಿಎಸ್‌ಎಫ್‌) ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರಬೇಕೆಂದು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  ಇತ್ತೀಚೆಗೆ ನಾಗಾಲ್ಯಾಂಡ್‌ನಲ್ಲಿ ರಕ್ಷಣಾಪಡೆಗಳಿಂದ ನಡೆದ 14 ನಾಗರಿಕರ ಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಮಮತಾ ಗಡಿ ಭದ್ರತಾ ಪಡೆಗಳು ನಿಗದಿಪಡಿಸಿದ ಕಾರ್ಯವ್ಯಾಪ್ತಿಯನ್ನು ಮೀರದಂತೆ ನೋಡಿಕೊಳ್ಳಬೇಕೆಂದು ಪೋಲೀಸರಿಗೆ ಸೂಚಿಸಿದರಲ್ಲದೇ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆಯೆಂದು ಒತ್ತಿ ಹೇಳಿದ್ದಾರೆ.

ಇಂತಹದೊಂದು ಸಮಸ್ಯೆಯಿದೆಯೆಂದು ನನಗೆ ತಿಳಿದಿದೆಯೆಂದ ಮಮತಾ “ಗಡಿಭದ್ರತಾ ಪಡೆಗಳ ಸಿಬ್ಬಂದಿ ನಮ್ಮ ಹಳ್ಳಿಗಳನ್ನು ಪ್ರವೇಶಿಸುತ್ತಾರೆ ಹಾಗೂ ತದನಂತರ ಗ್ರಾಮಸ್ಥರಿಂದ ಕಿರುಕುಳಕ್ಕೊಳಗಾದ ದೂರುಗಳು ಬರುತ್ತವೆ” ಎಂದರು. ಅವರು ರಾಜ್ಯ ಪೋಲೀಸರಿಗೆ ಮಾಹಿತಿ ನೀಡದೇ ತಮ್ಮ ಕಾರ್ಯವ್ಯಾಪ್ತಿಗೆ ಬರದ ಅನೇಕ ಸ್ಥಳಗಳಿಗೆ ಹೋಗುತ್ತಾರೆ ಎಂದೂ ಮಮತಾ ದೂರಿದರು.

ನಾಗಾಲ್ಯಾಂಡ್‌ನಲ್ಲಿ ಏನಾಯಿತೆಂದು ನಾವೆಲ್ಲಾ ನೋಡಿದ್ದೇವೆಂದ ಮಮತಾ “ಬಂಗಾಳದ ಸಿತಾಲಕುಚಿಯಲ್ಲಿ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಹಾಗೂ ಇತ್ತೀಚೆಗೆ ಕೂಚ್‌ಬೆಹಾರ್‌ನಲ್ಲಿ ಗಡಿ ಭದ್ರತಾಪಡೆಗಳ ಗುಂಡಿಗೆ ಮೂವರು ಬಲಿಯಾಗಿದ್ದಾರೆಂದು ತಿಳಿಸಿದರು.  ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯನಿರತ ಇನ್ಸ್‌ಪೆಕ್ಟರ್‌ಗಳು ಈ ವಿಚಾರದಲ್ಲಿ ಜಾಗರೂಕತೆಯಿಂದಿರಬೇಕೆಂದು ಅವರು ತಿಳಿಸಿದರು. ಕರ್ಣಜೋರಾದಲ್ಲಿ ನಡೆದ ಉತ್ತರ ದಿನಾಜ್‌ಪುರ ಹಾಗೂ ದಕ್ಷಿಣ ದಿನಾಜ್‌ಪುರ ಜಿಲ್ಲೆಗಳ ಆಡಳಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ ಅವರು ಮೇಲಿನಂತೆ ತಿಳಿಸಿದರು.

ಗಡಿಭದ್ರತಾ ಪಡೆಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರದ ನಿರ್ಧಾರಕ್ಕೆ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿರುವ ಮಮತಾ ಈ ನಡೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನವಾಗಿದೆ ಎಂದು ದೂರಿದರು.

ಬಿಜೆಪಿ ನಾಯಕತ್ವದ ಕೇಂದ್ರ ಸರಕಾರವು ಗಡಿಭದ್ರತಾ ಪಡೆಗಳ ಕಾನೂನಿಗೆ ತಿದ್ದುಪಡಿ ಮಾಡಿ ಗಡಿಭದ್ರತಾ ಪಡೆಗಳಿಗೆ ಪಂಜಾಬ್, ಪಶ್ಚಿಮ ಬಂಗಾಳ, ಮತ್ತು ಅಸ್ಸಾಂನ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಿಂದ 50 ಕಿ.ಮೀ. (ಈ ಮೊದಲು ಕೇವಲ 15 ಕಿ.ಮೀ ವ್ಯಾಪ್ತಿ ಇತ್ತು) ವ್ಯಾಪ್ತಿಯವರೆಗೆ ಶೋಧಿಸುವ, ವಶಪಡಿಸಿಕೊಳ್ಳುವ, ಹಾಗೂ ಶಂಕಿತರನ್ನು ಬಂಧಿಸುವ ಅಧಿಕಾರವನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನೆರೆ-ಹೊರೆಯ ದೇಶಗಳೊಂದಿಗೆ ನಾವು ಸೌಹಾರ್ದಯುತ ಸಂಬಂಧಗಳನ್ನು ಹೊಂದಿದ್ದು ಯಾವುದೇ ಸಮಸ್ಯೆಗಳಿಲ್ಲದ ಕಾರಣ ಇಲ್ಲದ ಗೊಂದಲಗಳನ್ನು ಸೃಷ್ಟಿಸುವ ಅವಶ್ಯಕತೆಯಿಲ್ಲ ಎಂದ ಮಮತಾ ಕಾನೂನು ಹಾಗೂ ಸುವ್ಯವಸ್ಥೆಯು ರಾಜ್ಯಕ್ಕೆ ಸೇರಿದ ವಿಷಯ ಎಂದು ಪುನರುಚ್ಚರಿಸಿದರು. ಪಶ್ಚಿಮ ಬಂಗಾಳ ರಾಜ್ಯವು ನೆರೆಯ ಬಾಂಗ್ಲಾದೇಶ, ನೇಪಾಳ, ಹಾಗೂ ಭೂತಾನ್ ದೇಶಗಳೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.

ಇದೇ ವೇಳೆ, ಗಡಿಭದ್ರತಾ ಪಡೆಗಳ ಕಾರ್ಯವ್ಯಾಪ್ತಿಯನ್ನು ಪ್ರಶ್ನಿಸಿರುವ ಮಮತಾರ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಮುಖ್ಯಮಂತ್ರಿಗಳು ಒಕ್ಕೂಟ ವ್ಯವಸ್ಥೆಯ ಮಾತುಗಳನ್ನಾಡುತ್ತಾರೆ, ಆದರೆ ಜೊತೆಯಲ್ಲೇ ರಕ್ಷಣಾ ಪಡೆಗಳನ್ನು ಅವಮಾನಿಸುವ ಹೇಳಿಕೆ ನೀಡುತ್ತಾರೆ. ಗಡಿಭದ್ರತಾ ಪಡೆಗಳ ಕಾರ್ಯವ್ಯಾಪ್ತಿಯನ್ನೇ ಪ್ರಶ್ನಿಸುತ್ತಾರೆ. ಚುನಾಯಿತ ರಾಜ್ಯ ಸರಕಾರದ ಮುಖ್ಯಸ್ಥರೊಬ್ಬರು ಈ ರೀತಿಯಲ್ಲಿ ಮಾತನಾಡುತ್ತಿದ್ದರೆ ಅವರದೇ ಪಕ್ಷದ ಇತರ ನಾಯಕರೂ ಸಹಜವಾಗಿ ಇದೇ ಧಾಟಿಯಲ್ಲೇ ಮಾತನಾಡುತ್ತಾರೆ. ಇದು ಸಂವಿಧಾನದ ಆಶೋತ್ತರಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿಯ ವಕ್ತಾರ ಸಮಿಕ್ ಭಟ್ಟಾಚಾರ್ಯ ತೀವ್ರವಾಗಿ ಟೀಕಿಸಿದ್ದಾರೆ.

ಪಶ್ಚಿಮ ಬಂಗಾಳ ಗಡಿ ಪ್ರದೇಶವು ಸುಮಾರು 1300 ಕಿ.ಮೀ. ಉದ್ದವಿದ್ದು ಅನೇಕ ಜಲ ಹಾಗೂ ವಿಶಿಷ್ಟ ಸಸ್ಯ ಪ್ರದೇಶಗಳಿಂದ ಕೂಡಿದೆ. ಇಂತಹ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುವಾಗ 15 ಕಿ.ಮೀ. ದೂರವು ಬಹಳ ಚಿಕ್ಕದಾಗುವುದರಿಂದ ಇದನ್ನು 50 ಕಿ.ಮೀ. ಗಳಿಗೆ ಏರಿಸಿರುವ ಕೇಂದ್ರ ಸರಕಾರದ ನಿರ್ಧಾರ ಸೂಕ್ತವಾಗಿದೆಯೆಂದು ಸಮಿಕ್ ಭಟ್ಟಾಚಾರ್ಯ ತಿಳಿಸಿದರು.

ಪಶ್ಚಿಮ ಬಂಗಾಳದ 112 ಮುನಿಸಿಪಲ್ ಚುನಾವಣೆಗಳು ಒಂದು ವರ್ಷಕ್ಕೂ ಹೆಚ್ಚಿನ ಕಾಲದಿಂದ ಬಾಕಿ ಉಳಿದಿದ್ದು ಇದು ನ್ಯಾಯಾಲಯದ ಮುಂದಿರುವ ವಿಷಯವಾಗಿದೆ. ಹಾಗಿದ್ದರೂ, ಇವನ್ನು ಡಿಸೆಂಬರ್ 19ರ ಕೆಎಮ್‌ಸಿ ಚುನಾವಣೆಗಳ ನಂತರ ನಡೆಸುವುದಾಗಿ ಮಮತಾ ಘೋಷಿಸಿದ್ದು ಇದು ಅವರ ಸರ್ವಾಧಿಕಾರಿ ಮನೋಭಾವವನ್ನು ಸೂಚಿಸುತ್ತದೆಂದು ಅವರು ತಿಳಿಸಿದರು.

Mamata Banerje says law and order is a state subject

ಇದನ್ನೂ ಓದಿ: Indian Army: ಭಾರತಕ್ಕೆ 1962ರಲ್ಲಿ ಪ್ರಬಲವಾದ ನಾಯಕತ್ವ ಇದ್ದಿದ್ದರೆ ಚೀನಾ ಯುದ್ಧದಲ್ಲಿ ಸೋಲುತ್ತಿರಲಿಲ್ಲ: ಅರುಣಾಚಲ ಪ್ರದೇಶದ ರಾಜ್ಯಪಾಲ

ಇದನ್ನೂ ಓದಿ: Indian Army: ಭಾರತೀಯ ಸೇನೆಯಲ್ಲಿ ಖಾಲಿಯಿದೆ 1 ಲಕ್ಷಕ್ಕೂ ಅಧಿಕ ಹುದ್ದೆಗಳು

Tags: BSFMamata BanerjeeTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In