ಚಿಕ್ಕಮಗಳೂರು: ಬೈಕ್‌ಹಾಗೂ ಮಹಿಂದ್ರಾ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಇಬ್ಬರು ಬುಧವಾರ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ತಿಪಟೂರಿನ ರಾಮು (28), ನವೀನ್ (25) ಎಂದು ಗುರುತಿಸಲಾಗಿದೆ.
ಅರಸೀಕೆರೆ ಅಭಿಷೇಕ್ ಕೆಲಸದ ನಿಮಿತ್ತ ಬೈಕ್‌ನಲ್ಲಿ ನಗರಕ್ಕೆ ಆಗಮಿಸಿ ಹಿಂತಿರುಗುವಾಗ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ಕಡೂರಿನಿಂದ ಮೂಡಿಗೆರೆ ಭಾಗಕ್ಕೆ ಸಾಗುತ್ತಿದ್ದ ಮಹೀಂದ್ರಾ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ.
ಈ ವೇಳೆ ರಾಮು, ನವೀನ್ ಸ್ಥಳದಲ್ಲೆ ಮೃತಪಟ್ಟಿದ್ದು ಅಭಿಷೇಕ್ ತೀವ್ರಗಾಯಗೊಂಡ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Two killed
























Discussion about this post