ವಿಪಕ್ಷ ನಾಯಕ ಸಿದ್ದರಾಮಯ್ಯ ವಾರ್ತಾ ಇಲಾಖೆಯಿಂದ ಎಸ್‌ಸಿ/ಎಸ್‌ಟಿ ಮಾಲೀಕತ್ವದ ಪತ್ರಿಕೆಗಳಿಗೆ ನೀಡಲಾಗುವ ಜಾಹೀರಾತು ಮೊತ್ತವನ್ನು ಕಳೆದ ಎಂಟು ತಿಂಗಳಿಂದ ಪಾವತಿಸಿಲ್ಲ ಎಂಬ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ತುರ್ತು ಅನುದಾನ ನಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೊಳಿಸಿದ ನಂತರ ರಾಜ್ಯದಲ್ಲೂ ಉದ್ದಿಮೆಗಳು ನೆಲಕಚ್ಚಿ ವ್ಯಾಪಾರ ವಹಿವಾಟುಗಳು ಕುಂಠಿತವಾಗಿವೆ. ಖಾಸಗೀ ಜಾಹೀರಾತುಗಳು ಕಡಿಮೆಯಾಗಿವೆ. ಜೊತೆಗೆ ಕೊವಿಡ್‌ನಿಂದ ಪತ್ರಿಕೆಗಳಿಗೆ ಬರುವ ಜಾಹೀರಾತುಗಳು ಕುಸಿತಗೊಂಡು ಪತ್ರಿಕೆಗಳು ತೀವ್ರವಾದ ಸಂಕಷ್ಟಕ್ಕೆ ಒಳಗಾಗಿವೆ. ರಾಜ್ಯದಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಎಸ್‌ಸಿ/ಎಸ್‌ಟಿ ಸಮುದಾಯದ ಜನರಿದ್ದು ಅವರ ಮಾಲೀಕತ್ವದ ಕೇವಲ ಇನ್ನೂರಕ್ಕಿಂತಲೂ ಕಡಿಮೆ ಪತ್ರಿಕೆಗಳಿವೆ. ಹೀಗೆ ಕಳೆದ ಎಂಟು ತಿಂಗಳಿನಿಂದಲೂ ಈ ಪತ್ರಿಕೆಗಳಿಗೆ ಜಾಹೀರಾತಿನ ಹಣ ನೀಡದಿರುವು ಸರಿಯಾದ ಕ್ರಮವಲ್ಲ ಎಂದು ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪತ್ರಿಕೆಗಳಿಗೆ ನೆರವಾಗಲೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇಕಡಾ 22.05ರಷ್ಟನ್ನು ಈ ವರ್ಗದ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ನೀಡಲಾಗುತ್ತದೆ. ಈಕೂಡಲೆ ಅನುದಾನ ಬಿಡುಗಡೆಗೊಳಿಸಿ ಪತ್ರಕರ್ತರು ಮತ್ತು ಕಾರ್ಮಿಕ ಕುಟುಂಬಗಳ ಸಂಕಷ್ಟ ಕಳೆಯುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನಿಮ್ಮಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿ ಇದೆಯೇ ??
(Opposition Leader Siddaramaiah urges Release 8 months and amount for SC and ST owned newspapers)

























Discussion about this post