Political News: ಪ್ರಜ್ವಲ್ ರೇವಣ್ಣ ಇಂದು ವಿದೇಶದಿಂದ ಭಾರತಕ್ಕೆ ಆಗಮಿಸಿದ್ದು, ಆಗಮಿಸುತ್ತಿದ್ದಂತೆ, ಪ್ರಜ್ವಲ್‌ರನ್ನು ಎಸ್‌ಐಟಿ ತಂಡ ಬಂಧಿಸಿದೆ. ಬಳಿಕ ಬಿಗಿ ಬಂದೋಸ್ತನ್‌ನಲ್ಲಿ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಆರೋಗ್ಯ ತಪಾಸಣೆ ನಡೆಸಲಾಗಿದೆ.
ಬಳಿಕ, ಕೋರ್ಟ್‌ಗೆ ಹಾಜರುಪಡಿಸಿದ್ದು, ಇನ್ನು 6 ದಿನಗಳ ಕಾಲ ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿಯಲ್ಲಿರಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಇನ್ನು 6 ದಿನಗಳ ಕಾಲ ಪ್ರಜ್ವಲ್ ರೇವಣ್ಣಗೆ ಜೈಲೂಟವೇ ಗತಿಯಾಗಿದೆ.
ಹುಬ್ಬಳ್ಳಿಯಲ್ಲಿ 12 ಲಕ್ಷ ಬೆಲೆಬಾಳುವ 240 ಸೈಲೇನ್ಸರ್ ವಶಕ್ಕೆ ಪಡೆದ ಪೊಲೀಸರು: ವೀಡಿಯೋ
ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಅಲ್ಲದೇ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲವೆಂದು ಹೇಳಲಾಗಿತ್ತು. ಈ ವೇಳೆ ಪ್ರಜ್ವಲ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿತ್ತು. ಆದರೆ ಕೆಲ ದಿನಗಳ ಹಿಂದೆ ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆ ಮಾಡಿ, ಚುನಾವಣೆಗೂ ಮುನ್ನವೇ ನಾನು ವಿದೇಶಕ್ಕೆ ಬರುವುದು ನಿರ್ಧಾರವಾಗಿತ್ತು. ನಾನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ನಾಪತ್ತೆಯಾಗಿಲ್ಲ.
ನೇಹಾ, ಅಂಜಲಿ ಕೇಸ್ ಅಪರಾಧಿಗಳನ್ನು ಬಿಡುಗಡೆ ಮಾಡಿದರೆ ನಾವು ಸುಮ್ಮನಿರೋದಿಲ್ಲ: Pramod Muthalik ವೀಡಿಯೋ
ವಿರೋಧ ಪಕ್ಷಗಳು ನನ್ನ ಬಗ್ಗೆ ಮಾಡುತ್ತಿರುವ ಆರೋಪಗಳಿಂದಾಗಿ, ಮನನೊಂದು ನಾನು ಡಿಪ್ರೆಶನ್‌ಗೆ ಹೋಗಿದ್ದೆ. ಹಾಗಾಗಿ ಇಷ್ಟು ದಿನ ನಾನು ಯಾರ ಸಂಪರ್ಕಕ್ಕೂ ಸಿಗಲು ಸಾಧ್ಯವಾಗಿಲ್ಲ. ಕುಮಾರಣ್ಣ, ದೇವೇಗೌಡರು ಮತ್ತು ಅಪ್ಪ ಅಮ್ಮನಲ್ಲಿ ನಾನು ಈ ಬಗ್ಗೆ ಕ್ಷಮೆಯಾಚಿಸುತ್ತೇನೆ. ಮೇ 31ಕ್ಕೆ ನಾನು ಭಾರತಕ್ಕೆ ಬಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಅದೇ ರೀತಿ ಇಂದು ಬೆಳಿಗ್ಗೆ ಭಾರತಕ್ಕೆ ಬಂದಿದ್ದು, ಪ್ರಜ್ವಲ್ ಏರ್ಪೋರ್ಟ್‌ಗೆ ಆಗಮಿಸುತ್ತಿದ್ದಂತೆ, ಎಸ್‌ಐಟಿ ಪ್ರಜ್ವಲ್‌ನನ್ನು ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇದೀಗ 6 ದಿನಗಳ ಕಾಲ ಪ್ರಜ್ವಲ್ ಎಸ್‌ಐಟಿ ವಶದಲ್ಲಿರಬೇಕು ಎಂದು ಕೋರ್ಟ್ ಆದೇಶ ನೀಡಿದೆ.
Cricket News: ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟ ಅನುಷ್ಕಾ ಮತ್ತು ವಿರಾಟ್: ಕಾರಣವೇನು..?
Udupi News: ದೈವ ನುಡಿದಂತೆ ನಡೆದ ಸತ್ಯ ಘಟನೆ: ತಪ್ಪಿತಸ್ಥ ತಾನಾಗಿಯೇ ಬಂದು ಶರಣಾಗತಿ
ಆನ್‌ಲೈನ್‌ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
Discussion about this post