Sports News: ನಟಿ ಅನುಷ್ಕಾ ಶೆಟ್ಟಿ ಮತ್ತು ಕ್ರಿಕೇಟಿಗ ವಿರಾಟ್ ಕೊಹ್ಲಿ ಸಖತ್ ಕ್ಯೂಟ್ ಜೋಡಿ ಅಂತಾ ಎಲ್ಲರಿಗೂ ಗೊತ್ತು. ಇದೀಗ ಈ ಜೋಡಿ ಸುದ್ದಿಯಾಗಿದ್ದು, ಪಾಪರಾಜಿಗಳಿಗೆ ಗಿಫ್ಟ್ ಕೊಡುವ ಮೂಲಕ.
ಹಾಾಗಾದ್ರೆ ಯಾಕೆ ಅನುಷ್ಕಾ ಮತ್ತು ವಿರಾಟ್ ಪಾಪರಾಜಿಗಳಿಗೆ ಗಿಫ್ಟ್ ಕೊಟ್ರ..?. ಇದಕ್ಕೆ ಉತ್ತರ ಪಾಪರಾಜಿಗಳು ಅನುಷ್ಕಾ ಮತ್ತು ವಿರಾಟ್ ಅವರ ರಿಕ್ವೆಸ್ಟ್‌ಗೆ ಗೌರವ ನೀಡಿ, ಅವರ ಗೌಪ್ಯತೆಯನ್ನು ಕಾಪಾಡಿದ್ದಾರೆ.
ಹೌದು, ಪಾಪರಾಜಿಗಳು ಅಂದ್ರೆ, ಹಲವು ನಟ ನಟಿಯರಿಗೆ ತಾತ್ಸಾರ. ಏಕೆಂದರೆ, ಪಾಪರಾಜಿಗಳು ಬಾಲಿವುಡ್ ಸೆಲೆಬ್ರಿಟಿಗಳ ಎಲ್ಲ ಚಲನವಲನಗಳನ್ನು ಗಮನಿಸುತ್ತ., ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಅವರ ನೆಮ್ಮದಿ ಹಾಳು ಮಾಡುತ್ತಾರೆ ಅನ್ನೋದು ಬಾಲಿವುಡ್ ಮಂದಿಯ ಆಕ್ರೋಶ.
ಒಮ್ಮೆ ಆಲಿಯಾ ಭಟ್ ಮನೆಯಲ್ಲಿ ಹೇಗಿರ್ತಾರೆ ಅಂತಾ ತೋರಿಸಲು, ಪಾಪರಾಜಿಗಳು ಎದುರುಗಡೆಯ ಬಿಲ್ಡಿಂಗ್‌ನಲ್ಲಿ ನಿಂತು, ಆಲಿಯಾರ ವೀಡಿಯೋ ಮಾಡಿದ್ದರಂತೆ. ಇದು ಸುದ್ದಿಯಾಗಿ, ಆ ಪಾಪರಾಜಿಗಳ ವಿರುದ್ಧ ದೂರು ಕೂಡ ದಾಖಲಾಗಿತ್ತು.
ಯಾರೋ ಒಂದಿಬ್ಬರು ಈ ರೀತಿ ಮಾಡಿದ್ದಕ್ಕಾಗಿ, ಎಲ್ಲ ಪಾಪರಾಜಿಗಳು ಹಾಗೇ ಇರುತ್ತಾರೆ ಅಂತಲ್ಲ. ಅನುಷ್ಕಾ ಶರ್ಮಾ ವಿದೇಶದಲ್ಲಿ ತಮ್ಮ ಎರಡನೇಯ ಮಗುವಿಗೆ ಜನ್ಮ ನೀಡಿ, ಭಾರತಕ್ಕೆ ವಾಪಸ್ ಬರುತ್ತಿದ್ದಾಗ, ಅವರ ವೀಡಿಯೋವನ್ನು ಪಾಪರಾಜಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಆದರೆ ಅನುಷ್ಕಾ ಶರ್ಮಾ, ದಯವಿಟ್ಟು ಈ ವೀಡಿಯೋವನ್ನು ವೈರಲ್ ಮಾಡಿ, ನಮ್ಮ ಗೌಪ್ಯತೆಯನ್ನು ಹಾಳು ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದರು.
ಅದರಂತೆ ಪಾಪರಾಜಿಗಳು ವೀಡಿಯೋವನ್ನು ಎಲ್ಲಿಯೂ ಲೀಕ್ ಮಾಡದೇ, ಅನುಷ್ಕಾ ಮಾತಿಗೆ ಗೌರವ ನೀಡಿದ್ದರು. ಇದರಿಂದ ಖುಷಿಯಾಗಿರುವ ಅನುಷ್ಕಾ, ವಿಶೇಷ ಉಡುಗೊರೆಗಳನ್ನು ಪ್ಯಾಕ್ ಮಾಡಿಸಿ, ವಿರಾಟ್ ಕೈಯಲ್ಲಿ ಪಾಪರಾಜಿಗಳಿಗೆ ತಲುಪಿಸುವಂತೆ ವಿನಂತಿಸಿದ್ದಾರೆ. ಟೀ ಟ್ವೆಂಟ್ ವಿಶ್ವಕಪ್‌ಗಾಗಿ ವಿರಾಟ್ ನ್ಯೂಯಾರ್ಕ್‌ಗೆ ತೆರಳುತ್ತಿದ್ದು, ಏರ್ಪೋರ್ಟ್‌ನಲ್ಲಿ ಈ ಉಡುಗೊರೆಯನ್ನು ಪಾಪರಾಜಿಗಳಿಗೆ ತಲುಪಿಸಿದ್ದಾರೆ.
The way he said "Ma'am ne diya bhai, maine nahi" such a cutie🤍🤌 pic.twitter.com/TgX2UadOSy
— Virat Kohli Fan Club (@Trend_VKohli) May 31, 2024
Udupi News: ದೈವ ನುಡಿದಂತೆ ನಡೆದ ಸತ್ಯ ಘಟನೆ: ತಪ್ಪಿತಸ್ಥ ತಾನಾಗಿಯೇ ಬಂದು ಶರಣಾಗತಿ
ಆನ್‌ಲೈನ್‌ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
Discussion about this post