Health Tips: ಒಂದು ಕುಟುಂಬದಲ್ಲಿ ಮುದ್ದು ಮಗುವಿನ ಜನನವಾಗುತ್ತದೆ ಎಂದಾಗ, ಆ ಕುಟುಂಬದವರಿಗಾಗುವ ಸಂತೋಷವೇ ಬೇರೆ. ಮನೆ ಮಗಳು ಗರ್ಭಿಣಿ ಅಂತಾ ಗೊತ್ತಾದ ಮೇಲೆ ಆಗುವ ಖುಷಿಯ ಜೊತೆಗೆ, ಆಕೆಯ ಆರೈಕೆ ಶುರುವಾಗುತ್ತದೆ. ಉತ್ತಮವಾದ, ಆರೋಗ್ಯಕರವಾದ ಆಹಾರ ಸೇವನೆ, ಕಣ್ತುಂಬ ನಿದ್ದೆ, ವ್ಯಾಯಾಮ, ವಿಶ್ರಾಂತಿ, ಹೀಗೆ ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ ಕಾಳಜಿ ತೆಗೆದುಕೊಳ್ಳಲಾಗುತ್ತದೆ. ಇಂದು ನಾವು ಸುಂದರವಾದ, ಆರೋಗ್ಯಕರವಾದ ಮಗು ಜನಿಸಬೇಕಂದ್ರೆ ಗರ್ಭಿಣಿಯರು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಸಲಿದ್ದೇವೆ.
ಮೊದಲನೇಯದಾಗಿ ಸೊಪ್ಪು. ಪಾಲಕ್, ಬಸಳೆ, ಮೆಂತ್ಯೆ ಸೊಪ್ಪು, ಹರಿವೆ ಸೊಪ್ಪು. ಈ ಸೊಪ್ಪುಗಳಲ್ಲಿ ಪ್ರತಿದಿನ ಒಂದೊಂದು ಸೊಪ್ಪನ್ನ ಬಳಸಿ ಪಲ್ಯ, ಸಾರು ಅಥವಾ ಸೂಪ್ ತಯಾರಿಸಿ ಸೇವಿಸಿ. ಈ ಸೊಪ್ಪುಗಳು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುವುದರ ಜೊತೆಗೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಯನ್ನು ಆರೋಗ್ಯಕರವಾಗಿರಿಸುತ್ತದೆ.
ಎರಡನೇಯದಾಗಿ ತಾಜಾ ತರಕಾರಿ: ನಿಮ್ಮ ಊಟದ ತಟ್ಟೆಯಲ್ಲಿ ಬೇಯಿಸಿದ ತರಕಾರಿಗಳೊಂದಿಗೆ ಹಸಿ ತರಕಾರಿ ಸೇರಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ. ಬೀಟರೂಟ್, ಕ್ಯಾರೇಟ್, ಸೌತೇಕಾಯಿ, ಈರುಳ್ಳಿ ಇದರಿಂದ ಸಲಾಡ್ ಮಾಡಿ ತಿನ್ನಿ. ಇದರ ಜೊತೆ ಬೇಯಿಸಿದ ತರಕಾರಿ ಹೋಳುಗಳನ್ನು ಕೂಡ ಸೇವಿಸಿ. ಇದರ ಜೊತೆ ನಿಮ್ಮ ಊಟದ ಮೆನುವಿನಲ್ಲಿ ದಾಲ್ ಸೇರಿಸಿ. ಆದರೆ ಗರ್ಭಿಣಿಯರು ತಮ್ಮ ಆಹಾರದಲ್ಲಿ ಬೇರು ಹಲಸು, ಹಲಸಿನ ಕಾಯಿ, ಗೆಣಸು, ಆಲೂಗಡ್ಡೆ, ಬದನೆಕಾಯಿ, ನುಗ್ಗೆಕಾಯಿ, ಹಾಗಲಕಾಯಿ ಹೆಚ್ಚಾಗಿ ಬಳಸಬಾರದು. ಇದರ ಹೆಚ್ಚಿನ ಸೇವನೆಯಿಂದ ಮಗುವಿನ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ.
ಮೂರನೇಯದಾಗಿ ಮೊಳಕೆ ಕಾಳುಗಳು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಹಸಿವಾದಾಗ ಮೊಳಕೆ ಬರಿಸಿದ ಹೆಸರು ಕಾಳು ಸೇವಿಸಿ. ಇದು ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುವುದಲ್ಲದೇ, ನಿಮ್ಮ ಮಗುವಿನ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನೂ ಕೂಡ ಹೆಚ್ಚಿಸುತ್ತದೆ.
ನಾಲ್ಕನೇಯದಾಗಿ ತಾಜಾ ಹಣ್ಣುಗಳು. ಗರ್ಭಿಣಿಯರು ಹಣ್ಣಿನ ಜ್ಯೂಸ್ ಸೇವಿಸುವ ಬದಲು ಹಣ್ಣುಗಳನ್ನ ತಿಂದರೆ ಉತ್ತಮ. ನೇಂದ್ರ ಬಾಳೆಹಣ್ಣು, ಬೂದಿ ಬಾಳೆಹಣ್ಣು, ಏಲಕ್ಕಿ ಬಾಳೆಹಣ್ಣು, ಕೆಂಪು ಬಾಳೆಹಣ್ಣು, ಸೇಬುಹಣ್ಣು, ಕಿತ್ತಳೆಹಣ್ಣು, ದಾಳಿಂಬೆ ಹಣ್ಣು, ಚಿಕ್ಕು ಹಣ್ಣು, ಕಲ್ಲಂಗಡಿ ಹಣ್ಣು, ಕಿವಿ ಫ್ರೂಟ್, ಪೇರಲೆ ಹಣ್ಣು, ಮಾವಿನ ಹಣ್ಣು, ಸ್ಟ್ರಾಬೇರಿ, ಬಟರ್ ಫ್ರೂಟ್, ಸೀತಾ ಫಲ ಈ ಹಣ್ಣುಗಳನ್ನು ಗರ್ಭಿಣಿಯರು ಸೇವಿಸಬಹುದು.
ಐದನೇಯದಾಗಿ ದ್ರವಾಹಾರ: ಹಾಲು, ಮೊಸರು, ಮಜ್ಜಿಗೆ, ತಂಬುಳಿ, ಸೂಪ್ ಇತ್ಯಾದಿ ದ್ರವ ಪದಾರ್ಥವನ್ನ ನಿಮ್ಮ ಊಟ -ತಿಂಡಿಯ ಲೀಸ್ಟ್ಗೆ ಸೇರಿಸಿಕೊಳ್ಳಿ. ಮಧ್ಯಾಹ್ನದ ಊಟಕ್ಕೆ ಮೊಸರನ್ನ ಅಗತ್ಯವಾಗಿ ಸೇರಿಸಿಕೊಳ್ಳಿ. ಇದರೊಂದಿಗೆ ಮಜ್ಜಿಗೆ, ತಂಬುಳಿ ಕೂಡ ಸೇರಿಸಿ. ಮತ್ತು ರಾತ್ರಿ ಊಟಕ್ಕೆ ತುಪ್ಪ ಬಳಸಿ. ಸಾಧ್ಯವಾದಲ್ಲಿ ಪ್ರತಿದಿನ ಇಲ್ಲವಾದಲ್ಲಿ ವಾರದಲ್ಲಿ ಮೂರರಿಂದ ನಾಲ್ಕು ಬಾರಿಯಾದರೂ ಹೆಚ್ಚು ಬೆಣ್ಣೆ, ಖಾರ ಬಳಸದೇ ಮಾಡಿದ ಸೂಪ್ ಸೇವಿಸಿ. ಗರ್ಭಿಣಿಯರು ಧಾರಾಳವಾಗಿ ಹಾಲಿನ ಸೇವನೆ ಮಾಡಬಹುದು. ಬರೀ ಹಾಲು ಕುಡಿಯಲು ಸಾಧ್ಯವಾಗದಿದ್ದಲ್ಲಿ, ಅದಕ್ಕೆ ಪ್ರೋಟೀನ್ ಪೌಡರ್ ಸೇರಿಸಿ ಕುಡಿಯಿರಿ.
ಆರನೇಯದಾಗಿ ಡ್ರೈಫ್ರೂಟ್ಸ್: ಹಸಿ ಮತ್ತು ಒಣ ಖರ್ಜೂರ ಬಿಟ್ಟು ಉಳಿದೆಲ್ಲ ಡ್ರೈಫ್ರೂಟ್ಸ್ ಸೇವನೆ ಮಾಡಬಹುದು. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ 5 ಬಾದಾಮನ್ನ ಸಿಪ್ಪೆ ತೆಗೆದು ತಿನ್ನಿ. ಇದರಿಂದ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗುತ್ತದೆ. ಇದರ ಜೊತೆ ಪಿಸ್ತಾ, ಕಾಜು, ದ್ರಾಕ್ಷಿ, ಅಂಜೂರ, ಆ್ಯಪ್ರಿಕಾಟ್, ವಾಲ್ನಟ್ಗಳನ್ನ ಮಿತವಾಗಿ ಸೇವಿಸಿ. ಅಲ್ಲದೇ ನೆಲಗಡಲೆಯ ಜೊತೆ ಬೆಲ್ಲ ಸೇರಿಸಿ ತಿನ್ನಿ. ಇಲ್ಲವಾದಲ್ಲಿ ಶೇಂಗಾ ಚಿಕ್ಕಿಯನ್ನಾದರೂ ಸೇವಿಸಿ. ಇದು ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮಮವಾಗಿದ್ದು, ರಕ್ತ ಹೆಚ್ಚಲು ಸಹಕಾರಿಯಾಗಿದೆ.
ಈ ಮೇಲಿನ ಆಹಾರದಲ್ಲಿ ಯಾವ ಆಹಾರವನ್ನಾದರೂ ತಿಂದರೆ ನಿಮಗೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ ನಂತರ ಆಹಾರವನ್ನು ಸೇವಿಸುವುದು ಉತ್ತಮ. ಇನ್ನು ಉತ್ತಮ ಆಹಾರದೊಂದಿಗೆ, ವೈದ್ಯರು ಸೂಚಿಸಿದ ಗುಳಿಗೆಯನ್ನು ಸಮಯಕ್ಕೆ ಸರಿಯಾಗಿ ಸೇವಿಸಿ ಮತ್ತು ಯತೇಚ್ಛವಾಗಿ ಸೇವಿಸಿ.
Pregnancy Tips: ಗರ್ಭಿಣಿಯರು ಯಾವ ಹಣ್ಣನ್ನು ಸೇವಿಸಬೇಕು..? ಮತ್ತು ಯಾವ ಹಣ್ಣನ್ನು ಸೇವಿಸಬಾರದು..?
ಚಿಕ್ಕು ಹಣ್ಣು ಯಾವ ದೇಶದಿಂದ ಭಾರತಕ್ಕೆ ಬಂದಿದ್ದು? ಇದರ ಸೇವನೆಯಿಂದಾಗುವ ಪ್ರಯೋಜನಗಳೇನು?
Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಏನು ಲಾಭ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
Discussion about this post