National News: ಪಹಲ್ಗಾಮ್ ದಾಳಿ ನಡೆದು ಒಂದು ವಾರ ಕಳೆದಿದೆ. ಇದೀಗ ಈ ದಾಳಿಗೆ ಬಿಗ್ twist ನೀಡುವ ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಜಿಪ್ಲೈನ್ ಮೇಲೆ ಹೋಗುತ್ತಿದ್ದ ವ್ಯಕ್ತಿ, ತನ್ನ ಅನುಭವವನ್ನು ನೆನಪಿನಲ್ಲಿಡಲು, ಸೆಲ್ಫಿ ವೀಡಿಯೋ ಮಾಡಿಕ“ಂಡಿದ್ದ. ಆದರೆ ಈ ವೀಡಿಯೋದಲ್ಲಿ ಶಾಕಿಂಗ್ ಘಟನೆ ರೆಕಾರ್ಡ್ ಆಗಿದೆ.
ಸೆಲ್ಫಿ ವೀಡಿಯೋ ಮಾಡಿದ್ಯಾರು..?
ರಿಷಿ ಭಟ್ ಎನ್ನುವ ಅಹಮದಾಬಾದ್ನ ಉದ್ಯಮಿ, ತನ್ನ ಕುಟುಂಬದ ಜತೆ ಸಮಯ ಕಳೆಯಲು ಕಾಶ್ಮೀರ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದರು. ಅದರಂತೆ ಕಾಶ್ಮೀರಯ ಸೌಂದರ್ಯ ಕಳೆಯಲು ಹೋಗಿದ್ದ ರಿಷಿ ಫ್ಯಾಮಿಲಿ, ಇನ್ನೋಂದಿಷ್ಟು ಮಜಾ ಮಾಡುವ ಸಲುವಾಗಿ, ಪಹಲ್ಗಾಮ್ನಲ್ಲಿ ಜಿಪ್ಲೈನ್ ಎಕ್ಸ್ಪಿರಿಯನ್ಸ್ ತೆಗೆದುಕ“ಳ್ಳಬೇಕು ಎಂದು ನಿರ್ಧರಿಸಿ ಹೋಗಿದ್ದಾರೆ. ಹಾಗೆ ಎಕ್ಸ್ಪಿರಿಯನ್ಸ್ ಮಾಡುವಾಗ ರಿಷಿ ಭಟ್ ಸೆಲ್ಫಿ ವೀಡಿಯೋ ಮಾಡಿದ್ದಾರೆ.
ಅಲ್ಲಾಹು ಅಕ್ಬರ್ ಎಂದ ಸ್ಥಳೀಯ ವ್ಯಕ್ತಿ
ರಿಷಿಗೂ ಮುನ್ನ ಅವರ ಪತ್ನಿ ಮತ್ತು ಪುತ್ರ ಇಬ್ಬರೂ ಜಿಪ್ಲೈನ್ ಎಕ್ಸ್ಪಿರಿಯನ್ಸ್ ತೆಗೆದುಕ“ಂಡಿದ್ದಾರೆ. ಆದರೆ ಆ ವೇಳೆ ಅಲ್ಲೇ ಇದ್ದ ವ್ಯಕ್ತಿ ಅಲ್ಲಾಹು ಅಕ್ಬರ್ ಎಂದಿಲ್ಲ. ಆದರೆ ರಿಷಿ ಹೋದಾಗ ಮಾತ್ರ ಅಲ್ಲಾಹು ಅಕ್ಬರ್ ಎಂದಿದ್ದಾನೆ. ಈ ವೇಳೆ ರಿಷಿ ತನ್ನ Mobile ನಲ್ಲಿ ಸೆಲ್ಫಿ ವೀಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದ್ದಾರೆ. ಆ ವ್ಯಕ್ತಿ ಅಲ್ಲಾಹು ಅಕ್ಬರ್ ಎಂದಿದ್ದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ಆತ ಅಲ್ಲಾಹು ಅಕ್ಬರ್ ಅಂದ ತಕ್ಷಣವೇ ಉಗ್ರರು ಗುಂಡಿನ ದಾಳಿ ಮಾಡಲು ಶುರು ಮಾಡಿದ್ದರು. ಹೀಗಾಗಿ ಆ ವ್ಯಕ್ತಿಯ ಮೇಲೆ ಅನುಮಾನ ಮೂಡಿದ್ದು ಪೋಲೀಸರು ಕೂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅವನ ಮೇಲೆಯೇ ನನ್ನ ಅನುಮಾನ- ರಿಷಿ ಭಟ್
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ರಿಷಿ, ನನ್ನ ಪತ್ನಿ ಮತ್ತು ಪುತ್ರ ನನಗೂ ಮುಂಚೆ ಜಿಪ್ಲೈನ್ ಏರಿದ್ದರು. ಅವರಿಗೂ ಮುನ್ನ 7 ಜನ ಜಿಪ್ಲೈನ್ ಏರಿದ್ದರು. ಆದರೆ ಆ ವೇಳೆ ಆ ವ್ಯಕ್ತಿ ಅಲ್ಲಾಹು ಅಕ್ಬರ್ ಹೇಳಲಿಲ್ಲ. ನಾನು ಹೋದಾಗಲೇ ಅವರು ಅಲ್ಲಾಹು ಅಕ್ಬರ್ ಹೇಳಿದ್ದು, ಮತ್ತು ಆತ ಹಾಗೆ ಹೇಳಿದ ಬಳಿಕವೇ ಗುಂಡಿನ ದಾಳಿ ಶುರುವಾಗಿದ್ದು, ಹಾಗಾಗಿಯೇ ಆತನೂ ಈ ದಾಳಿಯಲ್ಲಿ ಭಾಗಿಯಾಗಿದ್ದಾನೆಂದು ನನ್ನ ಅನುಮಾನ ಎಂದು ರಿಷಿ ಹೇಳಿದ್ದಾರೆ.
ಅಲ್ಲದೇ, ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣವೇ, ನಾನು 15 ಅಡಿ ಎತ್ತರದಿಂದ ಜಂಪ್ ಮಾಡಿ, ನನ್ನ ಪತ್ನಿ ಮತ್ತು ಮಗನ“ಂದಿಗೆ, ಆ ಸ್ಥಳದಿಂದ ಓಡಿ ಬೇರೆ ಸ್ಥಳಕ್ಕೆ ಹೋಗಿ, ನಮ್ಮ ಜೀವ ಉಳಿಸಿಕ“ಂಡೆವು. ಆ ಕ್ಷಣದಲ್ಲಿ ನನ್ನ ಮತ್ತು ಕುಟುಂಬದವರ ಜೀವ ಉಳಿಸಿಕೊಳ್ಳುವ ಏಕೈಕ ಆಲೋಚನೆಯಲ್ಲಿದ್ದೆ. ಹೀಗಾಗಿ ಮುಖ್ಯದ್ವಾರ ಬಳಿ ಬಂದಾಗ ಸ್ಥಳೀಯರೊಬ್ಬರು ನೆರವು ನೀಡಿದ್ದಾರೆ. ನೆರವಿನಿಂದ ಆದಷ್ಟು ಬೇಗ ದಾಳಿ ನಡೆಯುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಭಾರತೀಯ ಸೇನೆ ನೆರವಿಗೆ ಧಾವಿಸಿದೆ. ಗುಂಡಿನ ದಾಳಿ ನಡೆದ 25 ನಿಮಿಷದಲ್ಲಿ ಭಾರತೀಯ ಸೇನೆ ಆಗಮಿಸಿ ಹಲವರನ್ನು ರಕ್ಷಿಸಿದೆ ಎಂದು ರಿಷಿ ಹೇಳಿದ್ದಾರೆ.
ಸೆಲ್ಫಿ ವೀಡಿಯೋದಲ್ಲಿ ರೆಕಾರ್ಡ್ ಆಗಿರುವ ಮುಖ್ಯ ವಿಷಯವಾದ್ರೂ ಏನು..?
ಇನ್ನು ರಿಷಿ ಮಾಡಿರುವ ಸೆಲ್ಫಿ ವೀಡಿಯೋದಲ್ಲಿ ಆ ವ್ಯಕ್ತಿ ಅಲ್ಲಾಹು ಅಕ್ಬರ್ ಅಂದಿದ್ದರ ಜ“ತೆಗೆ , ಅಲ್ಲಿ ಯಾವ ರೀತಿ ಗುಂಡಿನ ದಾಳಿ ನಡೆಯಿತು, ಹೇಗೆ ಜನ ಕಕ್ಕಾಬಿಕ್ಕಿಯಾಗಿ ಓಡಲಾರಂಭಿಸಿದರು, ಗುಂಡಿನ ದಾಳಿಗೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೀಗೆ ಹಲವು ಘಟನೆಗಳು 20 ಸೆಕೆಂಡ್ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
This zipline operator in Pahalgam has been picked up by NIA now for interrogation pic.twitter.com/aBlW8q5xVK
— S Raghunatha Prabhu, Modi ka Pariwar (@SRaghunathaPra1) April 28, 2025
Discussion about this post